ಮಂಗಳೂರು: ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ದಿಗ್ಬಂಧನ ಪ್ರಕರಣಕ್ಕೆ ಸಂಬಂದಿಸಿದಂತೆ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ಉಪ-ಪೊಲೀಸ್ ಆಯುಕ್ತ ಡಾ.ಸಂಜೀವ ಪಾಟೀಲ್ ಅವರಿಗೆ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ನಿಕಟಪೂರ್ವ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಪತ್ರಕರ್ತರಾದ ಪ್ರಕಾಶ್ ಪಾಂಡೇಶ್ವರ, ಹಮ್ಮದ್ ಆರಿಫ್, ಜಿತೇಂದ್ರ ಕುಂದೇಶ್ವರ, ಪುಷ್ಪರಾಜ್ ಶೆಟ್ಟಿ, ತಾರನಾಥ್ ಕಾಪಿಕಾಡ್, ರಾಜೇಶ್ ರಾವ್, ಸುಕೇಶ್ ಶೆಟ್ಟಿ, ಅರುಣ್, ಭರತ್ರಾಜ್, ಇರ್ಷಾದ್, ವಿಲ್ಫ್ರೆಡ್ ಡಿಸೋಜ
ಉಪಸ್ಥಿತರಿದ್ದರು.
Click this button or press Ctrl+G to toggle between Kannada and English