ಪಕ್ಷ ಹಾಗೂ ಸರ್ಕಾರದ ವರ್ಚಸ್ಸು ವೃದ್ಧಿಸಲು ವಿಶೇಷ ಕಾರ್ಯಕ್ರಮ: ಆರ್ ಅಶೋಕ

Friday, June 4th, 2021
R Ashoka

ಬೆಂಗಳೂರು  : ಮುಂಬರುವ ಚುನಾವಣೆಗಳಲ್ಲಿ ಪಕ್ಷ ಹೇಗೆಲ್ಲಾ ಸಿದ್ಧಗೊಳ್ಳಬೇಕು ಮತ್ತು ಅದಕ್ಕಾಗಿ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು. ಜೊತೆಗೆ ಶಾಸಕರನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ತುರ್ತು ಅಗತ್ಯವು ಪಕ್ಷದ ಮುಂದಿದ್ದು ಆ ನಿಟ್ಟಿನಲ್ಲಿ ಚರ್ಚೆ ಕೈಗೊಳ್ಳಲಾಯಿತು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು. “ಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,”ನಮ್ಮ ಮುಂದೆ ಸಿಂಧಗಿಯ ಉಪ ಚುನಾವಣೆ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಇದ್ದು, ಆ ನಿಟ್ಟಿನಲ್ಲಿ ಪಕ್ಷವನ್ನ ಬಲ ಪಡಿಸುವ ಹಾಗೂ ಸಂಘಟಿಸುವ ಕುರಿತಂತೆ ಚರ್ಚೆ […]

ಪೊಲೀಸ್ ಅಧಿಕಾರಿಗಳು, ಮಾಧ್ಯಮದವರ ಹೆಸರು ಹೇಳಿ ಹಣ ಲೂಟಿ, ಕನಕ ಗ್ರೂಪ್ ನ ಅಡ್ಮಿನ್ ಬಂಧನ

Wednesday, May 13th, 2020
Rasheed

ಮಂಗಳೂರು  : ಪೊಲೀಸ್ ಅಧಿಕಾರಿಗಳು, ಮಾಧ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಹೆಸರನ್ನು ಹೇಳಿ ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಕನಕ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಆದ ರಶೀದ್ ಕುಂಡಡ್ಕ -ಅಬ್ದುಲ್ ರಶೀದ್ ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ. ಕುಖ್ಯಾತ ರೌಡಿ ಹಾಗೂ ಜ್ಯುವೆಲ್ಲರಿ ದರೋಡೆ ಪ್ರಕರಣವೊಂದರಲ್ಲಿನ ಪ್ರಮುಖ ಆರೋಪಿ ಮುತ್ತಾಸಿಮ್ @ ತಸ್ಲಿಂ ಎಂಬಾತನ ಕೊಲೆ ಪ್ರಕರಣದಲ್ಲಿರುವ ವ್ಯಕ್ತಿಯೊಬ್ಬನ ಹೆಸರನ್ನು ಪ್ರಕರಣದಿಂದ ತೆಗೆಸುತ್ತೇನೆ, ತನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು […]

ದೂರು ದಾಖಲಿಸಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಬೇಡಿ – ಹಿಂದೂ ಜನಜಾಗೃತಿ ಸಮಿತಿ

Sunday, May 10th, 2020
Sudhir Chaudhary

ಮಂಗಳೂರು  : ದೇಶದ ಪ್ರಧಾನಮಂತ್ರಿಯವರಿಗೆ ‘ಮೌತ ಕಾ ಸೌದಾಗರ್’ ಎಂದು ಕರೆದಾಗ ಅದಕ್ಕೆ ‘ಅಭಿವ್ಯಕ್ತಿಸ್ವಾತಂತ್ರ’ದ ಲೇಪನ ನೀಡಲಾಗುತ್ತದೆ; ಓಸಾಮಾ ಬಿನ್ ಲಾಡೆನ್‌ನಂತಹ ಅನೇಕ ಭಯೋತ್ಪಾದಕರು ಹಾಗೂ ಅವರ ಉಗ್ರ ಸಂಘಟನೆಗಳು ಸತತವಾಗಿ ಹಾಗೂ ಬಹಿರಂಗವಾಗಿ ರಕ್ತರಂಜಿತ ಜಿಹಾದ್ ಬಗ್ಗೆ ಫತ್ವಾ ತೆಗೆಯುವಾಗ ಅದು ಧರ್ಮದ ಅವಮಾನ ಆಗುವುದಿಲ್ಲ ! ಆದರೆ ಧರ್ಮದ ಹೆಸರಿನಲ್ಲಿ ಕಟ್ಟರ್‌ವಾದಿಗಳ ಜಿಹಾದ್ ಬಗ್ಗೆ ಕೇವಲ ಮಾಹಿತಿ ನೀಡಿದರೆಂದು ‘ಝೀ ನ್ಯೂಸ್’ ವಾರ್ತಾವಾಹಿನಿಯ ಸಂಪಾದಕರಾದ ಸುಧೀರ ಚೌಧರಿ ಇವರ ಮೇಲೆ ಕೇರಳದಲ್ಲಿ ದೂರು ದಾಖಲಿಸಲಾಗುತ್ತದೆ. […]

ಪೋಲೀಸರು, ಆರೋಗ್ಯ ಅಧಿಕಾರಿಗಳು, ಮಾಧ್ಯಮದವರಿಗಾಗಿ ಉಚಿತ ಪೆಟ್ರೋಲ್ ಮತ್ತು ಡಿಸೇಲ್

Saturday, March 28th, 2020
Bharath padubidre

ಉಡುಪಿ  : ಇದು ಸರಕಾರದ ಕೊಡುಗೆಯಲ್ಲ ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಹಾಗೂ ಮಾಧ್ಯಮದವರಿಗೆ ಪಡುಬಿದ್ರಿ ಕಂಚಿನಡ್ಕದ ಭಾರತ್ ಪೆಟ್ರೋಲಿಯಮ್ ಸಂಸ್ಥೆ ಉಚಿತ ಪೆಟ್ರೋಲ್, ಡಿಸೇಲ್‌ ವಿತರಣೆ ಮಾಡುತ್ತಿದೆ. ಜಗಜೀವನ್ ಚೌಟ ಇವರ ಮಾಲಿಕತ್ವದ ಪೆಟ್ರೋಲ್ ಬಂಕ್‌ನಲ್ಲಿ ಸಾಮಾಜಿಕ ಕಳಕಳಿಯಿಂದ ಶನಿವಾರ ಬೆಳಿಗ್ಗೆ 9 ರಿಂದ ಮದ್ಯಾಹ್ನ 12 ಗಂಟೆ ವರೆಗೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಕೊರೋನಾ ಸೋಕು ಸಂಬಂಧಿ ಕರ್ತವ್ಯ ದಲ್ಲಿರುವ ಪೋಲೀಸರು, ಆರೋಗ್ಯ ಅಧಿಕಾರಿಗಳು ಹಾಗೂ ಮಾಧ್ಯಮದವರಿಗಾಗಿ ಉಚಿತ ಪೆಟ್ರೋಲ್ […]

ಮಾಧ್ಯಮಗಳು ಇಂದು ಲಾಭ-ನಷ್ಟದೊಂದಿಗೆ ಟಿಆರ್‌ಪಿ ಲೆಕ್ಕಾಚಾರದಲ್ಲಿ ಮುಳುಗಿವೆ : ಎಂ.ಸಿದ್ಧರಾಜು

Wednesday, January 16th, 2019
Journalist

ಮಂಗಳೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ)ನ ದ.ಕ.ಜಿಲ್ಲಾ ಸಮಿತಿಯು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಭಾಗಿತ್ವದಲ್ಲಿ ನಗರದ ಹಂಪನಕಟ್ಟೆಯ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಬುಧವಾರ ‘ಸಂವಿಧಾನದತ್ತ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮದ ಪಾತ್ರ’ದ ಬಗ್ಗೆ ಮಾಧ್ಯಮ ಕಾರ್ಯಾಗಾರ ನಡೆಯಿತು. ಕಾರ್ಯಾಗಾರವನ್ನು ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷ ಎಂ.ಸಿದ್ಧರಾಜು  ಉದ್ಘಾಟಿಸಿದರು. ಮಾಧ್ಯಮಗಳು ಇಂದು ಲಾಭ-ನಷ್ಟದೊಂದಿಗೆ ಟಿಆರ್‌ಪಿ ಲೆಕ್ಕಾಚಾರದಲ್ಲಿ ಮುಳುಗಿವೆ. ಉದ್ಯಮಿಗಳ ಕೈಯಲ್ಲಿ ಮಾಧ್ಯಮಗಳು ಸ್ಥಾಪನೆಗೊಳ್ಳುವುದರಿಂದ ವಸ್ತುನಿಷ್ಠ ವರದಿಗಳು, ವೈಚಾರಿಕತೆ, ಸಮಾಜದ ಹಿತ ಕಾಪಾಡುವ ಸಂಗತಿಗಳು ಸುದ್ದಿಯಾಗುತ್ತಿಲ್ಲ.  ಮಾಧ್ಯಮಗಳು  ಸೇವಾ ಮನೋಭಾವವನ್ನು ಹೊಂದಿಲ್ಲ. […]

‘ಸತ್ಯವನ್ನು ಉತ್ಪಾದಿಸುತ್ತಿರುವ ಮಾಧ್ಯಮಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕು’

Saturday, December 2nd, 2017
Dr-Nithyanand-Shetty

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2017 ರ ಎರಡನೇ ದಿನದ ವಿಶೇಷ ವಿಚಾರ ಗೋಷ್ಠಿಯು ಶನಿವಾರ ಕಾಲೇಜಿನ ರತ್ನಾಕರ ವರ್ಣಿ ವೇದಿಕೆಯಲ್ಲಿ ಜರುಗಿತು. “ಮಾಧ್ಯಮ-ಸ್ವವಿಮರ್ಶೆಯ ನೆಲೆ” ವಿಚಾರದಡಿ ಮಾಧ್ಯಮದ ಮೂರು ಪ್ರಧಾನ ಆಯಾಮಗಳಾದ ಸಾಮಾಜಿಕ ಜಾಲತಾಣ, ಪತ್ರಿಕಾ ರಂಗ ಹಾಗು ದೃಶ್ಯ ಮಾಧ್ಯಮಗಳ ಕುರಿತು ಚರ್ಚೆ ನಡೆಯಿತು. ದೃಶ್ಯ ಮಾಧ್ಯಮಗಳ ಬಗ್ಗೆ ತುಮಕೂರು ವಿವಿಯ ಪ್ರಾಧ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ಪ್ರಚಲಿತ ಉದಾಹರಣೆಗಳನ್ನು ನೀಡಿ “ಮಾಧ್ಯಮಗಳಿಗೆ ಸ್ವವಿಮರ್ಶೆಯ” ಅವಶ್ಯಕತೆಯ ಕುರಿತು ಮಾತನಾಡಿದರು. “ದೃಶ್ಯ ಮಾಧ್ಯಮ ಉಳಿದ ಮಾಧ್ಯಮಗಳಿಗಿಂತ ದೊಡ್ಡ ವ್ಯಾಪ್ತಿ […]

ಮಾಧ್ಯಮದವರ ಮೇಲೆ ಹಲ್ಲೆ ದಿಗ್ಬಂಧನ ಪ್ರಕರಣಕ್ಕೆ ಸಂಬಂದಿಸಿದಂತೆ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಮನವಿ

Thursday, September 8th, 2016
media-personnel

ಮಂಗಳೂರು: ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ದಿಗ್ಬಂಧನ ಪ್ರಕರಣಕ್ಕೆ ಸಂಬಂದಿಸಿದಂತೆ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ಉಪ-ಪೊಲೀಸ್ ಆಯುಕ್ತ ಡಾ.ಸಂಜೀವ ಪಾಟೀಲ್ ಅವರಿಗೆ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ನಿಕಟಪೂರ್ವ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಪತ್ರಕರ್ತರಾದ ಪ್ರಕಾಶ್ ಪಾಂಡೇಶ್ವರ, ಹಮ್ಮದ್ ಆರಿಫ್, ಜಿತೇಂದ್ರ ಕುಂದೇಶ್ವರ, ಪುಷ್ಪರಾಜ್ ಶೆಟ್ಟಿ, ತಾರನಾಥ್ ಕಾಪಿಕಾಡ್, ರಾಜೇಶ್ ರಾವ್, ಸುಕೇಶ್ ಶೆಟ್ಟಿ, ಅರುಣ್, […]

ದುಡ್ಡಿಗೆ ಮರುಳಾಗಿ ಮಾಧ್ಯಮಗಳು ಸುದ್ದಿ ಮಾಡುವ ಅಪಾಯಕಾರಿ ದಿನಗಳ ಬಂದಿವೆ : ಉಮಾಪತಿ

Saturday, December 19th, 2015
Media

ಮಂಗಳೂರು : ನಮ್ಮ ನಿತ್ಯದ ಬದುಕು ಮಾರುಕಟ್ಟೆ ಶಕ್ತಿಗಳಿಂದ ಪ್ರಭಾವಿತಗೊಳ್ಳುತ್ತಿದೆ. ದಿನೇದಿನೇ ಇದರ ಸುಳಿಯೊಳಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೇವೆ. ಸಮೂಹ ಮಾಧ್ಯಮಗಳು ಕೂಡ ಈ ಮಾತಿಗೆ ಹೊರತಾಗಿಲ್ಲ. ಮಾಧ್ಯಮಗಳ ಇಂದಿನ ಶೈಲಿಗೆ ಮಾರುಕಟ್ಟೆ ವಿಧಿಸಿರುವ ಹಲವು ಇತಿಮಿತಿಗಳಿವೆ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಹೇಳಿದರು. ಇಲ್ಲಿನ ನಂತೂರು ಬಳಿ ಇರುವ ಶಾಂತಿ ಕಿರಣ ಸಭಾಂಗಣದಲ್ಲಿ ಅಭಿಮತ ಸಂಸ್ಥೆಯು ಆಯೋಜಿಸಿರುವ ಮೂರನೇ ವರ್ಷದ ಜನನುಡಿ ಸಮಾವೇಶದ ನುಡಿ ಮಾರ್ಗ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಅವರು, ಇತ್ತೀಚೆಗೆ ಪ್ರಜ್ಞಾಪೂರ್ವಕವಾಗಿ […]

‘ಚಾಲಿಪೋಲಿಲು’ ಉತ್ತಮ ಸಂದೇಶ ಸಾರುವ ಚಿತ್ರ: ಡಾ. ಡಿ. ವೀರೇಂದ್ರ ಹೆಗ್ಗಡೆ

Wednesday, August 12th, 2015
v.heggade chali polilu

ಮಂಗಳೂರು: ’ಚಾಲಿಪೋಲಿಲು’ ಉತ್ತಮ ಸಂದೇಶ ಸಾರುವ ಚಿತ್ರವಾಗಿದ್ದು ಮನೋರಂಜನೆಯ ಜೊತೆಗೆ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಉತ್ತಮ ಕಥಾ ಹಂದರವನ್ನೊಳಗೊಂಡ ಈ ಚಿತ್ರ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದ್ದಾರೆ. ಅವರು ನಗರದ ಪಾಂಡೇಶ್ವರದ ಫಾರಂ ಫಿಜ್ಜಾ ಮಾಲ್‌ನಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರದಲ್ಲಿ ಚಾಲಿಪೋಲಿಲು ತುಳು ಚಿತ್ರವನ್ನು ತನ್ನ ಕುಟುಂಬಿಕರ ಜೊತೆಯಲ್ಲಿ ವೀಕ್ಷಿಸಿ ತನ್ನ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ಹಂಚಿಕೊಂಡರು. ಸಾಮಾನ್ಯವಾಗಿ ಬಹುತೇಕ ಸಿನಿಮಾಗಳಲ್ಲಿ […]

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಧ್ಯಮಗಳಿಗೆ ನೀಡುವ ಜಾಹೀರಾತು ಪರಿಶೀಲಿಸಲು ಸಮಿತಿ ; ಜಿಲ್ಲಾಧಿಕಾರಿ

Friday, February 15th, 2013
DC prakash

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್ ಏಳರಂದು ಚುನಾವಣೆ ನಡೆಯಲಿದ್ದು,  ಎಂಸಿಸಿಯನ್ನು ಹೊರತುಪಡಿಸಿ ಮೂಡಬಿದ್ರೆ, ಉಳ್ಳಾಲ, ಪುತ್ತೂರು ನಗರಸಭೆ, ಬೆಳ್ತಂಗಡಿ ಮತ್ತು ಸುಳ್ಯದ ಪಟ್ಟಣ ಪಂಚಾಯತ್ ಚುನಾವಣೆಗಳು ಮಾರ್ಚ್ 7ರಂದು ನಡೆಯಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತದೆ. ಎಂಸಿಸಿ ಚುನಾವಣೆಗೆ ನಿಲ್ಲುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 3 ಸಾವಿರ ರೂ. ಠೇವಣೆ ಮತ್ತು ಇತರ ವರ್ಗದ ಅಭ್ಯರ್ಥಿಗಳು 1500 ರೂ. ಠೇವಣಿ ಇಡಬೇಕು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಇಂದು […]