ಬೆಂಗಳೂರು : ಮುಂಬರುವ ಚುನಾವಣೆಗಳಲ್ಲಿ ಪಕ್ಷ ಹೇಗೆಲ್ಲಾ ಸಿದ್ಧಗೊಳ್ಳಬೇಕು ಮತ್ತು ಅದಕ್ಕಾಗಿ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು. ಜೊತೆಗೆ ಶಾಸಕರನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ತುರ್ತು ಅಗತ್ಯವು ಪಕ್ಷದ ಮುಂದಿದ್ದು ಆ ನಿಟ್ಟಿನಲ್ಲಿ ಚರ್ಚೆ ಕೈಗೊಳ್ಳಲಾಯಿತು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
“ಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,”ನಮ್ಮ ಮುಂದೆ ಸಿಂಧಗಿಯ ಉಪ ಚುನಾವಣೆ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಇದ್ದು, ಆ ನಿಟ್ಟಿನಲ್ಲಿ ಪಕ್ಷವನ್ನ ಬಲ ಪಡಿಸುವ ಹಾಗೂ ಸಂಘಟಿಸುವ ಕುರಿತಂತೆ ಚರ್ಚೆ ಮಾಡಲಾಯಿತು. ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಗ್ರಾಮ್ ಸ್ವರಾಜ್ಯ ಎಂಬ ಯಾತ್ರೆ ಕೈಗೊಳ್ಳಲಾಗಿತ್ತು. ಆ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷ ಅತ್ಯಧಿಕ ಗೆಲುವು ಸಾಧಿಸಿತ್ತು. ಅದೇ ರೀತಿಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಲಾಗುವುದು. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡುವುದು, ಬೂತ್ ಮಟ್ಟದ ಅಧ್ಯಕ್ಷರು ಸಮಾವೇಶ ಮಾಡುವುದು ಈ ಮೂಲಕ ಪಕ್ಷ ದೊಡ್ಡ ಗೆಲುವು ಸಾಧಿಸಬೇಕು ಎಂಬ ಯೋಜನೆ ಹಾಕಿಕೊಳ್ಳಲಾಗಿದೆ”, ಎಂದು ಹೇಳಿದರು.
“ಶಾಸಕರನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಆ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಎಲ್ಲರ ಜೊತೆಗೆ ಮಾತನಾಡುವ ಕುರಿತಂತೆ ಸಭೆ ನಡೆಸಬೇಕು ಎಂದು ಯೋಚಿಸಲಾಗಿದೆ. ಹಾಗೆಯೇ ಎಲ್ಲಾ ಮಂತ್ರಿಗಳ ಜೊತೆಗೆ ವೈಯಕ್ತಿಕವಾಗಿ ಮಾತನಾಡಿ ಸಮನ್ವಯ ಸಾಧಿಸಿ ಪಕ್ಷದ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿಸಲು ಏನೆಲ್ಲಾ ಕಾರ್ಯಕ್ರಮಗಳನ್ನ ಮಾಡಬೇಕು ಎಂದು ಪಟ್ಟಿ ಮಾಡಲಾಗಿದೆ. ಪ್ರತಿ ತಿಂಗಳು ಹೀಗೆ ಸಭೆ ಸೇರಿ ಚರ್ಚಿಸಲಾಗುವುದು,” ಎಂದು ತಿಳಿಸಿದರು.
“ಅಸ್ಥಿ ವಿಸರ್ಜನೆಯ ನಂತರ ಹಿಂದೂ ಸಂಪ್ರದಾಯದನುಸಾರ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಕೊಡಗು, ಕೇರಳ ಬಳಿಯ ವಿಷ್ಣುಪಾದದಲ್ಲಿ ಅಂತಿಮ ಕಾರ್ಯಗಳನ್ನು ಮಾಡಲು ಯೋಚಿಸಲಾಗಿದೆ”, ಎಂದರು.
ಮೈಸೂರು ಜಿಲ್ಲಾಧಿಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅಶೋಕ,”ಜಿಲ್ಲಾಧಿಕಾರಿಗಳು ಈಜುಕೋಳ ನಿರ್ಮಿಸಿರುವುದರ ಕುರಿತು ಮೈಸೂರು ಶಾಸಕರು ದೂರು ನೀಡಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ತನಿಖೆಗೆ ಆದೇಶ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
Click this button or press Ctrl+G to toggle between Kannada and English