ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಧ್ಯಮಗಳಿಗೆ ನೀಡುವ ಜಾಹೀರಾತು ಪರಿಶೀಲಿಸಲು ಸಮಿತಿ ; ಜಿಲ್ಲಾಧಿಕಾರಿ

6:25 PM, Friday, February 15th, 2013
Share
1 Star2 Stars3 Stars4 Stars5 Stars
(No Ratings Yet)
Loading...

DC prakashಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್ ಏಳರಂದು ಚುನಾವಣೆ ನಡೆಯಲಿದ್ದು,  ಎಂಸಿಸಿಯನ್ನು ಹೊರತುಪಡಿಸಿ ಮೂಡಬಿದ್ರೆ, ಉಳ್ಳಾಲ, ಪುತ್ತೂರು ನಗರಸಭೆ, ಬೆಳ್ತಂಗಡಿ ಮತ್ತು ಸುಳ್ಯದ ಪಟ್ಟಣ ಪಂಚಾಯತ್ ಚುನಾವಣೆಗಳು ಮಾರ್ಚ್ 7ರಂದು ನಡೆಯಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತದೆ. ಎಂಸಿಸಿ ಚುನಾವಣೆಗೆ ನಿಲ್ಲುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 3 ಸಾವಿರ ರೂ. ಠೇವಣೆ ಮತ್ತು ಇತರ ವರ್ಗದ ಅಭ್ಯರ್ಥಿಗಳು 1500 ರೂ. ಠೇವಣಿ ಇಡಬೇಕು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಇಂದು ಅವರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿ ಯಲ್ಲಿ ವಿವರ ನೀಡಿದರು.

ನಗರಪಾಲಿಕೆಯ 60 ವಾರ್ಡ್ ಗಳಿಗೆ 379 ಬೂತ್ ಗಳಲ್ಲಿ ಮತದಾನ ನಡೆಯಲಿದೆ. 1,59,353 ಮಹಿಳೆಯರು ಮತ್ತು 1,53,226 ಪುರುಷರ ಸಹಿತ ಒಟ್ಟು 3,12,579 ಮಂದಿ ಮತದಾರರಿದ್ದಾರೆ. ನಗರ ಪಾಲಿಕೆಯ ವಾರ್ಡ್ ನಂ.1ರಿಂದ 10ರ ತನಕ ಅಭ್ಯರ್ಥಿಗಳು ಸುರತ್ಕಲ್ ನಲ್ಲಿರುವ ಎಂಸಿಸಿಯ ಉಪಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ವಾರ್ಡ್ ನಂ.21ರಿಂದ 25 ಮತ್ತು 31ರಿಂದ 35ರ ಅಭ್ಯರ್ಥಿಗಳ ನಾಮಪತ್ರವನ್ನು ಕದ್ರಿಯಲ್ಲಿ ಎಂಸಿಸಿಯ ಉಪಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ. ಇತರ ಎಲ್ಲಾ ವಾರ್ಡ್ ಗಳ ನಾಮಪತ್ರಗಳನ್ನು ಫೆ. 23ರ ತನಕ ನಗರದಲ್ಲಿರುವ ಎಂಸಿಸಿ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಮಾಧ್ಯಮಗಳಿಗೆ ಜಾಹೀರಾತು ನೀಡುವುದನ್ನು ಪರಿಶೀಲಿಸಲು ಸಮಿತಿ.

ಮಾಧ್ಯಮಗಳು ಅಭ್ಯರ್ಥಿಗಳ ಪರವಾದ ಲೇಖನ ಅಥವಾ ಸುದ್ದಿ ಪ್ರಕಟಿಸುವ ಬಗ್ಗೆ ಗಮನಹರಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ವಿಶೇಷ ಸಮಿತಿಯನ್ನು ರಚಿಸಿದ್ದಾರೆ.

ದೃಶ್ಯ, ಮುದ್ರಣ ಮಾಧ್ಯಮ ಹಾಗೂ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಜಾಹೀರಾತುಗಳ ವಿವರ ಹಾಗೂ ಇತರ ಪ್ರಚಾರ ಸರಕುಗಳ ಬಗ್ಗೆ ಮೊದಲು ಸಮಿತಿಗೆ ವಿವರ ನೀಡಬೇಕು ಎಂದು ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದರು.

ನಗರ ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್ ಮತ್ತು ಎಸ್ ಪಿ ಅಭಿಷೇಕ್ ಗೋಯಲ್ ಸಮಿತಿಯಲ್ಲಿದ್ದು . ಹೆಚ್ಚುವರಿ ಉಪ ಆಯುಕ್ತ ಕೆ. ದಯಾನಂದ್ ಸಮಿತಿಯ ಸಂಯೋಜಕರಾಗಿದ್ದಾರೆ .
ಮಾಧ್ಯಮಗಳಲ್ಲಿ ನೀಡುವ ಜಾಹೀರಾತುಗಳನ್ನು ಸಮಿತಿ ಪರಿಶೀಲಿಸಲಿದೆ ಮತ್ತು ಚುನಾವಣಾ ನೀತಿ ಸಂಹಿತೆಯನ್ನು ಮೀರದಿದ್ದರೆ ಅನುಮತಿಯನ್ನು ನೀಡಲಿದೆ. ಚುನಾವಣೆ ಅಂತ್ಯಗೊಳ್ಳುವ ತನಕ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English