ದೂರು ದಾಖಲಿಸಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಬೇಡಿ – ಹಿಂದೂ ಜನಜಾಗೃತಿ ಸಮಿತಿ

1:29 PM, Sunday, May 10th, 2020
Share
1 Star2 Stars3 Stars4 Stars5 Stars
(4 rating, 1 votes)
Loading...

Sudhir Chaudharyಮಂಗಳೂರು  : ದೇಶದ ಪ್ರಧಾನಮಂತ್ರಿಯವರಿಗೆ ‘ಮೌತ ಕಾ ಸೌದಾಗರ್’ ಎಂದು ಕರೆದಾಗ ಅದಕ್ಕೆ ‘ಅಭಿವ್ಯಕ್ತಿಸ್ವಾತಂತ್ರ’ದ ಲೇಪನ ನೀಡಲಾಗುತ್ತದೆ; ಓಸಾಮಾ ಬಿನ್ ಲಾಡೆನ್‌ನಂತಹ ಅನೇಕ ಭಯೋತ್ಪಾದಕರು ಹಾಗೂ ಅವರ ಉಗ್ರ ಸಂಘಟನೆಗಳು ಸತತವಾಗಿ ಹಾಗೂ ಬಹಿರಂಗವಾಗಿ ರಕ್ತರಂಜಿತ ಜಿಹಾದ್ ಬಗ್ಗೆ ಫತ್ವಾ ತೆಗೆಯುವಾಗ ಅದು ಧರ್ಮದ ಅವಮಾನ ಆಗುವುದಿಲ್ಲ ! ಆದರೆ ಧರ್ಮದ ಹೆಸರಿನಲ್ಲಿ ಕಟ್ಟರ್‌ವಾದಿಗಳ ಜಿಹಾದ್ ಬಗ್ಗೆ ಕೇವಲ ಮಾಹಿತಿ ನೀಡಿದರೆಂದು ‘ಝೀ ನ್ಯೂಸ್’ ವಾರ್ತಾವಾಹಿನಿಯ ಸಂಪಾದಕರಾದ ಸುಧೀರ ಚೌಧರಿ ಇವರ ಮೇಲೆ ಕೇರಳದಲ್ಲಿ ದೂರು ದಾಖಲಿಸಲಾಗುತ್ತದೆ. ಇದು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಗದಾ ಪ್ರಹಾರ ಮಾಡಿದಂತಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಕೇಂದ್ರ ಸರಕಾರವು ಇದರಲ್ಲಿ ಹಸ್ತಕ್ಷೇಪ ಮಾಡಬೇಕೆಂದು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

ದೇಶದಲ್ಲಿ ‘ಹಿಂದೂ ಭಯೋತ್ಪಾದನೆ’ಯ ಲೇಬಲ್ ಹಚ್ಚಿ ವಾರ್ತೆ ನೀಡುವಾಗ ಹಿಂದೂ ಧರ್ಮದ ಮಾನಹಾನಿ ಮಾಡಿದರೆಂದು ಅವರ ಮೇಲೆ ಎಂದಾದರೂ ಕ್ರಮಕೈಗೊಂಡಿದ್ದಾರೆಯೇ ? ಹಾಗಾಗಿ ಕೇಂದ್ರ ಸರಕಾರವು ಇದರಲ್ಲಿ ಹಸ್ತಕ್ಷೇಪ ಮಾಡಬೇಕು. ಅದೇ ರೀತಿ ಎಲ್ಲ ರಾಜ್ಯ ಸರಕಾರಗಳಿಗೆ ಇದರ ಬಗ್ಗೆ ಯೋಗ್ಯ ಸೂಚನೆಗಳನ್ನು ನೀಡಬೇಕು ಎಂದು ಆಗ್ರಹಿಸುವುದರೊಂದಿಗೆ ಭಾರತದ ಎಲ್ಲ ಮಾಧ್ಯಗಳು, ಬುದ್ದಿಜೀವಿಗಳು, ರಾಷ್ಟ್ರಪ್ರೇಮಿಗಳು ಮುಂತಾದವರು ಸಹ ಇದನ್ನು ಖಂಡಿಸಬೇಕು ಎಂದೂ ಸಮಿತಿಯು ಕರೆ ನೀಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English