ಮಂಗಳೂರು: ಉಳ್ಳಾಲ ಅಳಿವೆಯಲ್ಲಿ ಮೀನುಗಾರಿಕ ಬೋಟ್ ಮುಳುಗಿ ಮೀನುಗಾರ ನಾಪತ್ತೆಯಾದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗರ್ ಗ್ರಾಮದ ನಿವಾಸಿ ಹಮೀದ್ ನಾಪತ್ತೆಯಾಗಿರುವ ಮೀನುಗಾರ.
ದೋಣಿಯಲ್ಲಿದ್ದ ಕುಮಟಾದ ಕಾಗಲ್ನ ನಿವಾಸಿಗಳಾದ ಸಮೀರ್ ಇಸ್ಮಾಯಿಲ್ (30), ರಹೀಂ ಇಸಾಕ್ ವಡೇಕರ್ (30), ಬಗರ್ ಗ್ರಾಮದ ಅಬ್ದುಲ್ಲ ಇಸ್ಮಾಲ್ (42), ಪರದ್ ಬಾಹರ್ ಗ್ರಾಮದ ಭುವನ ಕುಮಾರ್ (26) ಮತ್ತು ರಿಶಿಕುಮಾರ್ (30) ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಸಬಾ ಬೆಂಗ್ರೆಯ ಅಬೂಬಕ್ಕರ್ ಅಶ್ರಫ್ ಎಂಬುವರಿಗೆ ಸೇರಿದ ಬೋಟ್ನಲ್ಲಿ ಒಟ್ಟು ಆರು ಮಂದಿ ಮೀನುಗಾರರು ಸೆ.16ರಂದು ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ವಾಪಸ್ ಆಗಮಿಸುತ್ತಿದ್ದ ವೇಳೆ ಅಳಿವೆಬಾಗಿಲಿನಲ್ಲಿ ದೋಣಿ ಮುಳುಗಿ ಈ ದುರಂತ ಸಂಭವಿಸಿದೆ. ಹಮೀದ್ ಮೃತದೇಹಕ್ಕಾಗಿ ಶೋಧ ನಡೆದಿದೆ.
Click this button or press Ctrl+G to toggle between Kannada and English