ಮಂಗಳೂರು : ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಬಜಪೆ ವಿಮಾನ ನಿಲ್ದಾಣಕ್ಕೆ ವೋಲ್ವೊ ಹವಾನಿಯತ್ರಿತ ಬಸ್‌ಗಳ ಓಡಾಟಕ್ಕೆ ಬುಧವಾರ ದ.ಕ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೆಂಟ್ರಲ್ ರೈಲು ನಿಲ್ದಾಣದವರೆಗೆ ಕಾವೂರು, ಬಜ್ಪೆ, ಕೆಎಸ್ಸಾರ್ಟಿಸಿ, ಲಾಲ್ ಬಾಗ್, ಜ್ಯೋತಿ, ಸೆಂಟ್ರಲ್ ರೈಲು ನಿಲ್ದಾಣ, ಕೆ.ಎಸ್.ರಾವ್ ರೋಡ್, ಪಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್ ಸರ್ಕಲ್, ಜ್ಯೋತಿ, ಸೈಂಟ್ ಆಗ್ನೆಸ್, ಮಲ್ಲಿಕಟ್ಟೆ, ನಂತೂರು, ಕೆಪಿಟಿ, ಕಾವೂರು, ಬೊಂದೇಲ್ ಮಾರ್ಗವಾಗಿ ಕೆಎಸ್ಸಾರ್ಟಿಸಿ ಅಥವಾ ಯಾವುದೇ ಖಾಸಗಿ ಹವಾನಿಯಂತ್ರಿತ ಎರಡು ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ.
ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಖಾಸಗಿ ಟ್ಯಾಕ್ಸಿಗಳಲ್ಲದೆ ಬೇರೆ ಸೌಲಭ್ಯಗಳಿಲ್ಲ.ಜು.15ರಿಂದ ಕೆಎಸ್ಸಾರ್ಟಿಸಿಯಿಂದ ಹವಾನಿಯಂತ್ರಿತ ವೋಲ್ವೊ ಬಸ್ ಆರಂಭವಾಗಿದ್ದರೂ ಅದು ಕೆಪಿಟಿ ಬೋಂದೆಲ್ ಮಾರ್ಗವಾಗಿ ಸಂಚರಿಸುವುದರಿಂದ ಹೆಚ್ಚಿನ ಪ್ರಯಾಣಿಕರಿಗೆ ಅನಕೂಲಕರವಾಗಿಲ್ಲ. ಸೆಂಟ್ರಲ್ ರೈಲುನಿಲ್ದಾಣ ಹಾಗೂ ಪ್ರತಿಷ್ಠಿತ ಹೊಟೇಲ್‌ಗಳತ್ತ ವೋಲ್ವೊ ಬಸ್ ಓಡಾಟ ಆರಂಭಿಸಿದರೆ ಹೆಚ್ಚು ಜನರಿಗೆ ಉಪಯೋಗವಾಗುತ್ತದೆ. ಆದುದರಿಂದ ನಗರದಲ್ಲಿ ಹೊಸ ರೂಟ್ ಬಸ್‌ಗಳ ಓಡಾಟಕ್ಕೆ ಇರುವ ನಿಷೇಧವನ್ನು ಸಡಿಲಿಕೆ ಮಾಡುವಂತೆ ಕೆಎಸ್ಸಾರ್ಟಿಸಿಯ ಅಧಿಕಾರಿಗಳು ಜಿಲ್ಲಾ ದಂಡಾಧಿಕಾರಿಯವರಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಜಿಲ್ಲಾಧಿಕಾರಿ, ಎರಡು ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಿದ್ದಾರೆ. ಇದರ ಹೊರತಾಗಿ ನಿಷೇಧಾಜ್ಞೆ ಎಂದಿನಂತೆ ಮುಂದುವರಿಯಲಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English