ಉಡುಪಿ: ಭಾರತ ದೇಶವೇ 2019ರ ವೇಳೆಗೆ ಬಯಲು ಶೌಚ ಮುಕ್ತವಾಗಬೇಕು ಎಂಬುದು ಸ್ವತ್ಛ ಭಾರತ ಅಭಿಯಾನದ ಪ್ರಮುಖ ಗುರಿ. ಇದರ ಸಾಕಾರಕ್ಕೆ ಪ್ರತಿಯೋರ್ವ ನಾಗರಿಕನ ಸಹಕಾರ ಅಗತ್ಯ ಎಂದು ಸ್ವತ್ಛ ಭಾರತ ಅಭಿಯಾನದ ಮಾಪನ ಸಂಸ್ಥೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯಸ್ಥ ಅಭಿನವ್ ಯಾದವ್ ಅವರು ಹೇಳಿದರು.
ಸ್ವತ್ಛ ಭಾರತ ಅಭಿಯಾನದಡಿ “ಬಯಲು ಶೌಚ ಮುಕ್ತ ನಗರ’ ಎಂದು ಘೋಷಿಸಲಾಗಿರುವ ಉಡುಪಿ ನಗರಸಭೆಗೆ ಸೆ. 28ರಂದು ಪ್ರಮಾಣಪತ್ರ ಹಸ್ತಾಂತರಿಸಿ ಅವರು ಮಾತನಾಡಿದರು.
ಬಯಲು ಶೌಚ ಮುಕ್ತ ನಗರ ಎಂದು ಘೋಷಿಸುವ ಮೊದಲು ದಾಖಲೆಗಳ ಪರಿಶೀಲನೆ ಮತ್ತು ಸ್ಥಳ ಪರಿಶೀಲನೆ ನಡೆಸಲಾಗುತ್ತದೆ.
ಉಡುಪಿ ನಗರದಲ್ಲಿಯೂ ಇದೇ ರೀತಿ ಮಾಡಲಾಗಿದೆ. ನಗರಸಭೆ ಅಥವಾ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರಿಂದ ಅಭಿಧಿಪ್ರಾಯ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಇದೇ ರೀತಿಯ ಸಮೀಕ್ಷೆ ನಡೆಸಲಾಗುವುದು ಎಂದು ಅಭಿನವ್ ಯಾದವ್ ಅವರು ತಿಳಿಸಿದರು.
ನಗರದಲ್ಲಿ ಸ್ಥಳಾವಕಾಶದ ಕೊರತೆ ಇರುವಲ್ಲಿ ವೈಯಕ್ತಿಕ ಶೌಚಾಲಯದ ಬದಲಾಗಿ ಸಮುದಾಯ ಶೌಚಾಲಯಕ್ಕೆ ಆದ್ಯತೆ ನೀಡಲಾಗುವುದು. ಸಾರ್ವಧಿಜನಿಕ ಶೌಚಾಲಯಗಳ ಸಂಖ್ಯೆ ಕೂಡ ಹೆಚ್ಚಿಸಧಿಲಾಗುಧಿವುದು. ಇದಕ್ಕಾಗಿ ಈಗಾಗಲೆ ಸ್ಥಳ ಕಾದಿರಿಸಿ 40 ಲ. ರೂ. ಮೀಸಲಿಡಲಾಗಿದೆ. ವಲಸೆ ಕಾರ್ಮಿಕಧಿರಿಗೆ ಗುಡಿಸಲು ನಿರ್ಮಿಸಿ ಕೊಟ್ಟು ಬಾಡಿಗೆ ವಸೂಲಿ ಮಾಡಿದರೂ ಅವರಿಗೆ ಸೂಕ್ತ ರೀತಿ ಶೌಚಾಲಯ ವ್ಯವಸ್ಥೆ ಮಾಡಿಕೊಡದ ಜಾಗದ ಮಾಲಕರಿಗೆ ಕಟ್ಟುಧಿನಿಟ್ಟಿನ ಸೂಚನೆ ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಶಾಂತ್ ಭಟ್, ಮಾಜಿ ಅಧ್ಯಕ್ಷ ಯುವರಾಜ್, ನಗರಸಭಾ ಸದಸ್ಯರು, ವಾರ್ತಾಧಿಕಾರಿ ರೋಹಿಣಿ, ಸಹಾಯಕ ಕಾರ್ಯಧಿಪಾಲಕ ಎಂಜಿನಿಯರ್ ಪುರಂದರ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಪರಿಸರ ಎಂಜಿನಿಯರ್ ರಾಘವೇಂದ್ರ ಪ್ರಸ್ತಾವನೆಗೈದರು. ಸುಧಾಕರ್ ಕಾರ್ಯಕ್ರಮ ನಿರ್ವಹಿಸಿದರು.
ನಗರದ ನಿಟ್ಟೂರು, ಕೊಡಂಕೂರು ಸೇರಿಧಿದಂತೆ ಹಲವೆಡೆ ವಲಸೆ ಕಾರ್ಮಿಕರಿಗೆ ಗುಡಿಧಿಸಲು ನಿರ್ಮಿಸಿ ಕೊಟ್ಟು ಅವರಿಗೆ ಶೌಚಾಲಯ ವ್ಯವಸ್ಥೆ ಮಾಡಿಕೊಡದ 48 ಮಂದಿ ಜಾಗದ ಮಾಲಕರಿಗೆ ಈಗಾಗಲೇ ನೋಟಿಸ್ ನೀಡಧಿಲಾಗಿದೆ. ಜಿಲ್ಲಾಧಿಕಾರಿ ಅವರಿಂದ ಒಪ್ಪಿಗೆ ಪಡೆದು ಇಂತಹ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಚಿವ ಪ್ರಮೋದ್ ಮಧ್ವರಾಜ್ ಕೂಡ ಶೌಚಾಲಯ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಿ ನಗರಧಿಸಭೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಪೌರಾಯುಕ್ತ ಮಂಜುನಾಥಯ್ಯ ತಿಳಿಸಿದರು.
Click this button or press Ctrl+G to toggle between Kannada and English