ಕೊಂಕಣ ರೈಲ್ವೆ ಇಲಾಖೆಯ ನಕಲಿ ಟಿಸಿ ಬಂಧನ

Wednesday, November 11th, 2020
fake TC

ಉಡುಪಿ : ರೈಲ್ವೆ ಇಲಾಖೆಯಲ್ಲಿ ಟಿಸಿ ಆಗಿರುವುದಾಗಿ ಉಡುಪಿ ಮತ್ತು ಹೊರ ಜಿಲ್ಲೆಗಳಲ್ಲಿ ಸಾರ್ವಜನಿಕರನ್ನು ನಂಬಿಸಿ ಹಣ ವಂಚಿಸಿ ಮೋಸ ಮಾಡುತ್ತಿದ್ದ ಆರೋಪದಲ್ಲಿ ಓರ್ವ ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹೊನ್ನವರ ನಿವಾಸಿ ಗಣೇಶ್ ನಾಯ್ಕ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಅ. 25ರಂದು ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿಸಿ ಆಗಿರುವುದಾಗಿ ಹೇಳಿಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿರುವ ಮಥಾಯಿಸ್ ಎಂಬವರ ಬಳಿ ಬಂದಿದ್ದು, ರೈಲ್ವೆ ಯಲ್ಲಿ ಉದ್ಯೋಗ ಕೊಡುವುದಾಗಿ ಮಥಾಯಿಸ್ ಅವರನ್ನು ನಂಬಿಸಿ 20,000 ರೂ. […]

ಸ್ವತ್ಛ ಭಾರತ ಅಭಿಯಾನಕ್ಕೆ ಪ್ರತಿಯೋರ್ವ ನಾಗರಿಕನ ಸಹಕಾರ ಅಗತ್ಯ: ಅಭಿನವ್‌ ಯಾದವ್‌

Thursday, September 29th, 2016
udupi-free-city

ಉಡುಪಿ: ಭಾರತ ದೇಶವೇ 2019ರ ವೇಳೆಗೆ ಬಯಲು ಶೌಚ ಮುಕ್ತವಾಗಬೇಕು ಎಂಬುದು ಸ್ವತ್ಛ ಭಾರತ ಅಭಿಯಾನದ ಪ್ರಮುಖ ಗುರಿ. ಇದರ ಸಾಕಾರಕ್ಕೆ ಪ್ರತಿಯೋರ್ವ ನಾಗರಿಕನ ಸಹಕಾರ ಅಗತ್ಯ ಎಂದು ಸ್ವತ್ಛ ಭಾರತ ಅಭಿಯಾನದ ಮಾಪನ ಸಂಸ್ಥೆ ಕ್ವಾಲಿಟಿ ಕೌನ್ಸಿಲ್‌ ಆಫ್ ಇಂಡಿಯಾದ ಮುಖ್ಯಸ್ಥ ಅಭಿನವ್‌ ಯಾದವ್‌ ಅವರು ಹೇಳಿದರು. ಸ್ವತ್ಛ ಭಾರತ ಅಭಿಯಾನದಡಿ “ಬಯಲು ಶೌಚ ಮುಕ್ತ ನಗರ’ ಎಂದು ಘೋಷಿಸಲಾಗಿರುವ ಉಡುಪಿ ನಗರಸಭೆಗೆ ಸೆ. 28ರಂದು ಪ್ರಮಾಣಪತ್ರ ಹಸ್ತಾಂತರಿಸಿ ಅವರು ಮಾತನಾಡಿದರು. ಬಯಲು ಶೌಚ ಮುಕ್ತ […]

ಉಡುಪಿಯಲ್ಲಿ ನರ್ಮ್-ಕೆಎಸ್‌ಆರ್‌ಟಿಸಿ ಸಿಟಿ ಬಸ್‌ಗಳ ಓಡಾಟಕ್ಕೆ ಚಾಲನೆ

Thursday, September 8th, 2016
udupi-nurm-bus

ಉಡುಪಿ: ಉಡುಪಿ ನಗರ ಮತ್ತು ಗ್ರಾಮೀಣ ಭಾಗಗಳಿಂದ ಬೇಡಿಕೆ ಬಂದರೆ ಮತ್ತಷ್ಟು ಸರಕಾರಿ ಬಸ್‌ಗಳನ್ನು ಓಡಿಸಲು ಸರಕಾರ ಸಿದ್ಧವಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ. ಸೆ. 7ರಂದು ಉಡುಪಿಯಲ್ಲಿ ನರ್ಮ್-ಕೆಎಸ್‌ಆರ್‌ಟಿಸಿ ಸಿಟಿ ಬಸ್‌ಗಳ ಓಡಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಖಾಸಗಿ ಬಸ್‌ ಮಾಲಕರ ಲಾಬಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಉಡುಪಿ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಆರಂಭವಾಗುತ್ತಿರುವುದು ಐತಿಹಾಸಿಕ. ಖಾಸಗಿ ಬಸ್‌ ಮಾಲಕರ ಒತ್ತಡ ಇದ್ದರೂ ಅದನ್ನು ಲೆಕ್ಕಿಸದೆ ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಧಿಗಳ ಹಿತದೃಷ್ಟಿಯಿಂದ ನರ್ಮ್ […]