ಬಸ್ ನಿರ್ವಾಹಕ ದೇವದಾಸ್‌ರವರ ನಿವಾಸಕ್ಕೆ ಕೆಎಸ್ಆರ್‌ಟಿಸಿ ವರ್ಕರ್ಸ್‌ ಯೂನಿಯನ್‌ ಪದಾಧಿಕಾರಿಗಳು ಭೇಟಿ

2:30 PM, Friday, October 7th, 2016
Share
1 Star2 Stars3 Stars4 Stars5 Stars
(No Ratings Yet)
Loading...

devadas-homeಮಂಗಳೂರು: ಯುವತಿಯೊಂದಿಗೆ ಚಿಲ್ಲರೆ ವಿಚಾರದಲ್ಲಿ ನ್ಯಾಯ ಸಿಗದೆ ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಬಸ್ ನಿರ್ವಾಹಕ ದೇವದಾಸ್‌ರವರ ನಿವಾಸಕ್ಕೆ ಕೆಎಸ್ಆರ್‌ಟಿಸಿ ವರ್ಕರ್ಸ್‌ ಯೂನಿಯನ್‌ ಪದಾಧಿಕಾರಿಗಳು ಮತ್ತು ಆಲಂಕಾರು ವ್ಯಾಪ್ತಿಯ ಸಾಮಾಜಿಕ ಕಾರ್ಯಕರ್ತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ವೇಳೆ ದೇವದಾಸ್‌ರವರ ಪತ್ನಿ ಅಂಗನವಾಡಿ ಕಾರ್ಯಕರ್ತೆ ಉಷಾ ತನ್ನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದರು. ನಾವು ಕೇವಲ ಏಳು ಸೆಂಟ್ಸ್ ಜಾಗದಲ್ಲಿ ಸಣ್ಣ ಮನೆ ಮಾಡಿ ಪತಿ ದೇವದಾಸ್‌ರವರ ಸಂಪಾದನೆಯಲ್ಲಿ ನಮ್ಮ ಜೀವನ ಸಾಗಿಸುತ್ತಿದ್ದೆವು. ಸತ್ಯ ಧರ್ಮದ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತನ್ನ ಪತಿಯನ್ನು ಅಪರಾಧಿ ಸ್ಥಾನದಲ್ಲಿ ತಂದಿರಿಸಿ ಅವಮಾನಿಸಿದರು. ಏಕಪಕ್ಷಿಯವಾಗಿ ನಿರ್ಧರಿಸಿ ನನ್ನ ಪತಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದರು. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದರು.

ಠಾಣೆಯಲ್ಲಿ ಯುವತಿಯ ಮುಂದೆ ಬಟ್ಟೆಯನ್ನು ಬಿಚ್ಚಿಸಿ ಅವಮಾನಿಸಿದ್ದರು. ಒಬ್ಬ ಕರ್ತವ್ಯದಲ್ಲಿದ್ದ ನೌಕರನನ್ನು ಈ ರೀತಿ ಆಮಾನುಷವಾಗಿ ನಡೆಸಿಕೊಂಡಿರುವುದು ಯಾವ ನ್ಯಾಯ? ತನ್ನ ಮಗನಿಗೆ ಮರ್ಯಾದೆ ಕೊಡುವುದು ಬೇಡ ಅವನು ಹಾಕಿದ ಸಮವಸ್ತ್ರಕ್ಕಾದರೂ ಮರ್ಯಾದೆ ಕೊಡಬಹುದಿತ್ತಲ್ಲವೇ? ಠಾಣೆಯಲ್ಲಿ ಠಾಣಾಧಿಕಾರಿಗಳು ಇಲ್ಲದ ಸಮಯದಲ್ಲಿ ಈ ರೀತಿಯ ಪ್ರಕರಣ ನಡೆದಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಆ ಸಮಯದಲ್ಲಿ ಠಾಣೆಯಲ್ಲಿದ್ದ ಪೊಲೀಸರನ್ನು ಕಾನೂನು ತನಿಖೆಗೆ ಒಳಪಡಿಸಿದಾಗ ಸಾವಿನ ಹಿಂದಿನ ಸತ್ಯ ಬಯಲಿಗೆಳೆಯಬಹುದು ಎಂದು ಮೃತರ ಮೃತರ ತಾಯಿ ದೇವಕಿ ಬೇಡಿಕೊಂಡರು.

18 ವರ್ಷದಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ ನೌಕರ ತನಗಾದ ಅವಮಾನವನ್ನು ತಾಳಲಾರದೆ ಸಾವಿಗೆ ಶರಣಾಗಿದ್ದಾನೆ. ಚಿಲ್ಲರೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯದೇ ಏಕಪಕ್ಷಿಯವಾಗಿ ನಿರ್ಧಾರ ಕೈಗೊಂಡು ಆತನ ಪ್ರಾಣದೊಂದಿಗೆ ಚೆಲ್ಲಾಟ ವಾಡಲಾಗಿದೆ. ತಪ್ಪಿತಸ್ಥರಿಗೆ ಒಂದು ತಿಂಗಳ ಒಳಗೆ ಕಾನೂನು ಬದ್ಧ ಶಿಕ್ಷೆಯಾಗಬೇಕು. ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಹೇಳಿದರು.

ಕೆಎಸ್ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದ ಉಪಾಧ್ಯಕ್ಷ ಅಬ್ಬಾಸ್ ಕೋಚಕಟ್ಟೆ, ಕೆಎಸ್ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರವೀಣ್, ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ರೈ ಪರಾರಿಗುತ್ತು, ವಿಶ್ರಾಂತ ಪ್ರಾಂಶುಪಾಲ ವಿಠಲ್ ರೈ ಕೊಣಾಲುಗುತ್ತು, ಬಾಲಕೃಷ್ಣ ಪೂಜಾರಿ ಪೆರಾಬೆ ಮೊದಲಾದವರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English