ವಿಟ್ಲ: ಭೂ ಲೋಕದ ಕೈಲಾಸ ಎಂದೇ ಪ್ರಸಿದ್ದವಾಗಿರುವ ತಾಣ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಶನಿವಾರ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರದ್ದಾ ಭಕ್ತಿಯಿಂದ ಆಟಿ ಅಮಾವಾಸ್ಯೆ ತೀರ್ಥಸ್ನಾನ ಮಾಡಿದರು.
ನರಹರಿ ಬೆಟ್ಟ ಸಮುದ್ರ ಮಟ್ಟದಿಂದ ಸಾವಿರ ಅಡಿಗೂ ಹೆಚ್ಹು ಎತ್ತರದಲ್ಲಿದ್ದು ಪ್ರಕೃತಿಯ ಸೌಂದರ್ಯದ ನಡುವೆ ಸದಾಶಿವ ದೇವರ ಸಾನಿಧ್ಯವಿದೆ. ತುಳು ಪರಂಪರೆಯ ಆಟಿ ಅಮಾವಾಸ್ಯೆ ತೀರ್ಥಸ್ನಾನದ ಪವಿತ್ರ ದಿನದಂದು ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥ ಕೂಪದಲ್ಲಿ ಮಿಂದು, ನಾಗರಾಜನಿಗೆ, ವಿನಾಯಕನಿಗೆ, ಸದಾಶಿವನಿಗೆ ಸೇವೆ ಸಲ್ಲಿಸಿಸುವುದು ಇಲ್ಲಿನ ವಾಡಿಕೆಯಾಗಿದೆ.
ನಾಟಕ, ಚಲನಚಿತ್ರ ಕಲಾವಿದ ನವೀನ್ ಡಿ ಪಡೀಲ್, ಜಿ.ಪಂ.ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಮೊದಲಾದವರು ಆಟಿ ಮಾವಾಸ್ಯೆ ತೀರ್ಥ ಸ್ನಾನದಲ್ಲಿ ಪಾಲ್ಗೊಂಡರು. ದೇವಸ್ಥಾನದ ಅಡಳಿತ ಮೊಕ್ತೇಸರ ಪಿ.ದೇವದಾಸ ಶೆಣೈ ಅವರು ಭಕ್ತಾದಿಗಳನ್ನು ಸ್ವಾಗತಿಸಿದರು. ಚಿತ್ರ : ಕಾರ್ತಿಕ್ ಸ್ಟುಡಿಯೋ
Click this button or press Ctrl+G to toggle between Kannada and English