ಬಂಟ್ವಾಳ: ಇತಿಹಾಸ ಪ್ರಸಿದ್ದ ಬಂಟ್ವಾಳ ತಾಲೂಕಿನ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ಉತ್ಸವಾದಿಗಳು ನಡೆಯುವ ಸಂದರ್ಭ ದೈವಸ್ಥಾನದ ವಿದ್ಯುತ್ ಅಲಂಕಾರ, ದೈವಸ್ಥಾನಕ್ಕೆ ಬಣ್ಣ ಬಳಿಯುವುದು, ಪುಪ್ಪಾಲಂಕಾರ ಮಾಡುವ ಗುತ್ತಿಗೆಯನ್ನು ಹಿಂದೂಗಳ ಹೊರತು ಅನ್ಯ ಮತೀಯರಿಗೆ ನೀಡಬಾರದು ಎಂದು ಆಗ್ರಹಿಸಿ ಬಂಟ್ವಾಳ ತಾ. ಹಿಂದೂ ಪರಿಷತ್ ಹಾಗೂ ಭಜರಂಗದಳ ಸಜೀಪ ವಲಯದ ವತಿಯಿಂದ ಆಡಳಿತಾಧಿಕಾರಿಯವರಿಗೆ ಮನವಿ ನೀಡಲಾಯಿತು.
ಕಳೆದ ವಾರ್ಷಿಕ ಉತ್ಸವ ಸಂದರ್ಭ ಅನ್ಯಮತೀಯರಿಗೆ ಗುತ್ತಿಗೆಯನ್ನು ನೀಡಿದ ಕಾರಣ ಪುಷ್ಪಾಲಂಕಾರ ಮಾಡುವಾಗ ನಾಗನ ಕಟ್ಟೆಗೆ ತುಳಿಯುವುದು, ಹಿಂದೂ ಹುಡುಗಿಯರನ್ನು ಚುಡಾಯಿಸುವುದು, ಕ್ಷೇತ್ರದ ಭಕ್ತರಿಗೆ ನೋವುಂಟು ಮಾಡಿದೆ. ಈ ಹಿನ್ನಲೆಯಲ್ಲಿ ಈ ಬಾರಿ ವಾರ್ಷಿಕ ಉತ್ಸವದ ಸಂದರ್ಭ ಗುತ್ತಿಗೆದಾರರನ್ನು ಆಯ್ಕೆಮಾಡುವಾಗ ಹಿಂದೂಗಳ ಹೊರತಾಗಿ ಅನ್ಯ ಮತೀಯರಿಗೆ ಯಾವುದೇ ಕಾರಣಕ್ಕೂ ಗುತ್ತಿಗೆ ನೀಡುವುದಿಲ್ಲ ಎನ್ನುವ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಅನ್ಯ ಮತೀಯರು ಶ್ರೀ ಕ್ಷೇತ್ರದ ಕೆಲಸ ಕಾರ‍್ಯದಲ್ಲಿ ತೊಡಗಬಾರದು ಈ ಎಲ್ಲಾ ಮನವಿಯ ಬಳಿಕವೂ ಅವರಿಗೆ ಗುತ್ತಿಗೆ ನೀಡಿ ಅನಪೇಕ್ಷಿತ ಘಟನೆ ನಡೆದರೆ ಇಲಾಖೆಯು ಹೊಣೆಯಾಗುತ್ತದೆ ಮತ್ತು ಉಗ್ರವಾದ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡುತ್ತೇವೆ ಎನ್ನುವ ಮನವಿಯನ್ನು ಮಾಡಲಾಯಿತು.
ಈ ಸಂದರ್ಭ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಬಜರಂದ ದಳ ಜಿಲ್ಲಾ ಸಹಸಂಚಾಲಕ್ ಗುರುರಾಜ್ ಬಂಟ್ವಾಳ, ಸಜೀಪ ವಲಯ ಸಂಚಾಲಕ್ ದಕ್ಷಣ್ ಸಜೀಪ, ಕಲ್ಲಡ್ಕ ವಲಯ ಸಂಚಾಲಕ ನವೀನ್ ಕಲ್ಲಡ್ಕ, ಲೋಹಿತ್ ಪನೋಲಿಬೈಲು, ಪುಷ್ಪರಾಜ್ ಕಲ್ಲಡ್ಕ, ವಿನೋದ್ ಮೆಲ್ಕಾರ್, ಹರೀಶ್ ಬೈಪಾಸ್, ಮೋಹನ್ ಕಲ್ಲಡ್ಕ, ಪ್ರಕಾಶ್ ಕಲ್ಲಡ್ಕ, ಪ್ರದೀಪ್ ಕಲ್ಲಡ್ಕ, ರವೀಂದ್ರ ಕುಲಾಲ್ ಕಂದೂರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English