ಮಂಗಳೂರು: ಕಟೀಲು ದೇವಳದ ಅರ್ಚಕ ವಾಸುದೇವ ಅವರ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಭಂಡಾರಿಬೆಟ್ಟು ಬೈಲು ಮನೆ ನಿವಾಸಿ ಭರತ್ ಶೆಟ್ಟಿ (30), ಮೆಲ್ಕಾರ್ ನಿವಾಸಿ ಮುಹಮ್ಮದ್ ಅಲಿ (35), ಹಳೆಯಂಗಡಿ ಪಾವಂಜೆ ನಿವಾಸಿ ಪುರುಷೋತ್ತಮ (44) ಮತ್ತು ಸೋಮೇಶ್ವರ ಸಂಕೊಲಿಗೆ ನಿವಾಸಿ ಹರೀಶ್ ಗಟ್ಟಿ (41) ಬಂಧಿತರು. ಬಂಧಿತರಿಂದ 450 ಗ್ರಾಂ ಚಿನ್ನಾಭರಣ, ರಿವಾಲ್ವರ್, ಸಜೀವ ಗುಂಡುಗಳು, ಬ್ರೀಚ್ ಲೋಡಿಂಗ್ ಗನ್, ಪಿಸ್ತೂಲ್, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಭಟ್ ಸೇರಿದಂತೆ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಅ.4ರಂದು ಮಧ್ಯರಾತ್ರಿ ವಾಸುದೇವ ಆಸ್ರಣ್ಣರವರ ಮನೆಗೆ ನುಗ್ಗಿದ ದರೋಡೆಕೋರರು, ಮನೆಮಂದಿಯನ್ನು ಕಟ್ಟಿ ಹಾಕಿ 80 ಪವನ್ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು.
ಇದೀಗ ಪ್ರಕರಣವನ್ನು ಬೇಧಿಸಿರುವ ಸಿಸಿಬಿ ಮತ್ತು ಬಜ್ಪೆ ಪೊಲೀಸ್ ತಂಡಕ್ಕೆ ತಲಾ 10 ಸಾವಿರ ರೂ. ಬಹುಮಾನವನ್ನು ಕಮಿಷನರ್ ಎಂ. ಚಂದ್ರಶೇಖರ್ ಘೋಷಿಸಿದ್ದಾರೆ.
Click this button or press Ctrl+G to toggle between Kannada and English