ಹಿಂದೂ ವಿರೋಧಿ ಕೋಮು ಹಿಂಸೆ ತಡೆ ಶಾಸನ ಜಾರಿಯನ್ನು ನಿಲ್ಲಿಸಬೇಕು : ಮುತಾಲಿಕ್

2:00 PM, Monday, August 1st, 2011
Share
1 Star2 Stars3 Stars4 Stars5 Stars
(No Ratings Yet)
Loading...

Muthalik/ಮುತಾಲಿಕ್

ಮಂಗಳೂರು : ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಭಾನುವಾರ ಕೇಂದ್ರ ಸರಕಾರ ಕೋಮು ಹಿಂಸೆ ತಡೆ ಶಾಸನ ಜಾರಿಗೆ ತರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ದೇಶದಲ್ಲೂ ಇಂತಹ ಶಾಸನ ಜಾರಿಗೊಳಿಸಿಲ್ಲ. ಬಹುಸಂಖ್ಯಾಕರನ್ನು ದಮನ ಮಾಡುವ ಹಾಗೂ ಮತ ಗಳಿಸುವ ಉದ್ದೇಶದಿಂದ ಈ ಕಾನೂನು ಜಾರಿಗೆ ತರಲಾಗುತ್ತಿದೆ. ಯಾವುದೇ ಹಿಂದೂ ನಾಯಕರನ್ನು, ಸಂಘಟನೆಗಳನ್ನು ಗುರಿಯಾಗಿಟ್ಟುಕೊಂಡು ಈ ಶಾಸನ ರಚಿಸಲಾಗಿದೆ. ಸಂಸತ್ತಿನಲ್ಲಿ ಈ ಶಾಸನ ಜಾರಿಗೊಳಿಸುವುದನ್ನು ವಿರೋಧಿಸಲು ರಾಜ್ಯದ ಎಲ್ಲ ಸಂಸದರಿಗೆ ಮನವಿ ಮಾಡಲಾಗಿದೆ ಎಂದರು.

ಮುಂಬೈಯಲ್ಲಿ ಇತ್ತೀಚೆಗೆ ನಡೆದ ಸ್ಫೋಟಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆಯ ಸಂದರ್ಭ ಭಟ್ಕಳಕ್ಕೆ ಸಂಪರ್ಕ ಇರುವ ಮಾಹಿತಿ ದೊರೆತಿದೆ. ಬೆಳಗಾವಿ ಜೈಲ್‌ನಲ್ಲಿರುವ ಮಲಬಾರಿಯಿಂದ ದೂರವಾಣಿ ಕರೆಗಳು ಹೋಗಿವೆ. ಈ ಎಲ್ಲ ಹಿನ್ನಲೆಯಲ್ಲಿ ಜಗನ್ನಾಥ ಶೆಟ್ಟಿ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ಎಂದು ಕರ್ನಾಟಕ ಸರಕಾರವನ್ನು ಹಾಗೂ ಕೇಂದ್ರ ಗೃಹ ಸಚಿವರನ್ನು ಮುತಾಲಿಕ್‌ ಆಗ್ರಹಿಸಿದರು.

ಶ್ರೀರಾಮ ಸೇನೆಯ ಮುಖಂಡರಾದ ಪ್ರಸಾದ್‌ ಅತ್ತಾವರ, ಮಹೇಶ್‌ ಕೊಪ್ಪ, ಕುಮಾರ್‌ ಮಾಲೆಮಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English