ಬಜಪೆ : ಕುಪ್ಪೆಪದವು ಸಮೀಪದ ಕೊಳವೂರು ಗ್ರಾಮದಲ್ಲಿ ಸದಾಶಿವ ಪೂಜಾರಿಯವರ ಹಟ್ಟಿಯಿಂದ ಅ.31ರಂದು ರಾತ್ರಿ 3ದನಗಳನ್ನು ಕಳವಿಗೆ ಸಂಬಂಧಿಸಿ ಬಜಪೆ ಪೊಲೀಸರು 6 ದನಕಳ್ಳರ ಬಂಧನ, 3 ಕಾರು , ಒಂದು ಬೆೈಕ್ , 2 ತಲವಾರು , 6ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬಜಪೆ ಠಾಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವತಿಯಿಂದ ದನಕಳ್ಳರನ್ನು ಕೂಡಲೇ ಬಂಧಿಸುವಂತೆ ಇನ್‌ಸ್ಪೆಕ್ಟರ್ ಡಿ.ಟಿ.ನಾಗರಾಜ್ ಅವರಿಗೆ ನ.1ರಂದು ಮನವಿ ನೀಡಲಾಗಿತ್ತು.
ಅದೇ ದಿನ ಈ ಪ್ರಕರಣದ ಪ್ರಮುಖ ಆರೋಪಿ ಕಾವೂರು ಶಾಂತಿನಗರದ ಈಗ ಕರಂಬಾರಿನಲ್ಲಿ ವಾಸವಾಗಿರುವ ನವಾಜ್ ಯಾನೆ ಅಬ್ದುಲ್ ನವಾಜ್(30) ಸ್ವಿಪ್ಟ್ ಕಾರಿನಲ್ಲಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಕಾರಣ ಬಜಪೆ ಕಿನ್ನಿಪದವಿನಲ್ಲಿ ಎಸ್‌ಐ ರಾಜ್‌ರಾಮ್ ಹಾಗೂ ಸಿಬಂದಿಗಳು ಆತನನ್ನು ಬಂಧಿಸಲು ಹೋದಾಗ ಕಾರನ್ನು ಪೊಲೀಸರ ಮೇಲೆ ಹಾಯಿಸಿ ಕೊಲೆಗೆ ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದನು ಈ ಬಗ್ಗೆ ಅತನ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಶನಿವಾರದಂದು ಬಜಪೆ ಇನ್‌ಸ್ಟೆಕ್ಟರ್ ಟಿ.ಡಿ.ನಾಗರಾಜ್ ,ಎಸ್.ಐ.ಸತೀಶ್ ಮತ್ತು ಸಿಬಂದಿಗಳು ಗುರುಪುರ ಕೈಕಂಬದ ಪೊಳಲಿ ದ್ವಾರದ ಬಳಿ ಆರೋಪಿಗಳಾದ ನವಾಜ್ ಯಾನೆ ಅಬ್ದುಲ್ ನವಾಜ್(30),ಉಳ್ಳಾಲದ ಕೋಟೆಕಾರು ಕೆ.ಸಿ.ರೋಡ್‌ನ ಮಹಮ್ಮದ್ ಮನ್ಸೂರ್(29),ಬಂಟ್ವಾಳ ಅಮ್ಮೆಮಾರ್‌ನ ಇಮ್ರಾನ್(28),ಇಮಿ¤ಯಾಜ್ (32),ಕೆ.ಸಿ.ರೋಡ್‌ನ ಅಸYರ್ ಯಾನೆ ಅಬ್ಟಾಸ್ (30) ,ಅಡ್ಯಾರು ಅರ್ಕುಳ ಕೋಟೆಯ ಬಾತಿಷ್ (30) ಬಂಧಿಸಿದ್ದಾರೆ.
ಈ ಆರೋಪಿಗಳಲ್ಲಿ ನವಾಜ್ ಕಾವೂರಿನಲ್ಲಿ ನಡೆದ ದರೋಡೆ ಪ್ರಕರಣ ಪ್ರಯತ್ನದ ಪ್ರಮುಖ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದ. ಇಮ್ರಾನ್ ಸಕೇಶ್‌ಪುರದಲ್ಲಿ ಲಾರಿ ಚಾಲಕನ ಕೊಲೆ ಹಾಗೂ ಉಳ್ಳಾಲ ಠಾಣೆಯಲ್ಲಿ 3 ಪ್ರಕರಣದಲ್ಲಿ ಈತನ ಮೇಲೆ ದಾಖಲಾಗಿದೆ.ಬಾತಿಷ್ ಅರ್ಕುಳ ಅವನ ಮನೆಯ ಸಮೀಪದಲ್ಲಿ ಅಕ್ರಮ ಖಾಸಗಿ ಕಸಾಯಿಖಾನೆ ನಡೆಸುತ್ತಿದ್ದ.
ಕಾರನ್ನು ಬಾಡಿಗೆ ರೂಪದಲ್ಲಿ ಅಥವಾ ಮದುವೆ ಸಮಾರಂಭಕ್ಕೆಂದು ಪಡೆಯುತ್ತಿದ್ದ ಅರೋಪಿಗಳು ಹಗಲು ಹೊತ್ತು ಕಾರಿನಲ್ಲಿ ದನದ ಕೊಟ್ಟಿಗೆ ಹಾಗೂ ಮನೆಯ ಪರಿಸರದ ಬಗ್ಗೆ ಮಾಹಿತಿ ತಿಳಿಯುತ್ತಿದ್ದರು.ರಾತ್ರಿ ಹೊತ್ತು ಮನೆಯಲ್ಲಿ ನಾಯಿಗಳಿದ್ದರೆ ಅದಕ್ಕೆ ಸ್ವೀಟ್ ಬ್ರೆಡ್ ಹಾಕುತ್ತಿದ್ದರು.ದನದ ಹಟ್ಟಿಗೆ ಒಳಗೆ ಹೋಗಿ ಕಟ್ಟಿ ಹಾಕಿದ್ದ ದನದ ಹಗ್ಗವನ್ನು ತೆಗೆದು ಅದಕ್ಕೆ ಸ್ವೀಟ್ ಬ್ರೆಡ್ ಹಾಕುತ್ತಿದ್ದರು.ದನ ಕೆಳದಿದ್ದರೆ ಅದರ ಬಾಯಿಗೆ ಗಮ್‌ಗೆàಪ್ ಹಾಕುತ್ತಿದ್ದರು.ಕಾರಿನ ಹಿಂದಿನ ಸೀಟ್‌ನ್ನು ಕಳಚಿ ಅದರಲ್ಲಿ ಇಕ್ಕಟ್ಟಾಗಿ ಸಾಗಿಸುತ್ತಿದ್ದರು.
ಬೈಕ್ ಬೆಂಗಾವಲಾಗಿ ಉಪಯೋಗಿಸುತ್ತಿದ್ದರು.ವಿಚಾರಣೆ ವೇಳೆ ಹಲವು ತಂಡಗಳ ಮಾಹಿತಿ ,ಅಕ್ರಮ ಕಸಾಯಿಖಾನೆಯ ಬಗ್ಗೆ ಮಾಹಿತಿ ದೊರಕಿದೆ.
ತೆಗೆದುಕೊಂಡ ಹೋದ ದಿನವೇ ಕಸಾಯಿಖಾನೆಗೆ ಕದ್ದ ದನವನ್ನು ಅಂದೇ ಕಸಾಯಿಖಾನೆಯಲ್ಲಿ ಕಡಿದು ಮಾಂಸ ಮಾಡಲಾಗುತ್ತಿತ್ತು.ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಬಾತಿಷ್ ಮನೆಯಿಂದ ಮರದ ತುಂಡು,ಕೊಕ್ಕೆ,ಮಚ್ಚುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಮಾಂಸ ಮಾರಾಟ ಮಾಡಿ ಬಂದ 5,100 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.ಕಾರಿನಲ್ಲಿದ್ದ ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇವರ ಮೇಲೆ ದನಕಳ್ಳತನ,ಅಕ್ರಮ ಶಸ್ತಾÅಸ್ರ ಕಾಯಿದೆ,ಪೊಲೀಸ್ ಕೊಲೆ ಯತ್ನ,ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ಜು.20ರಂದು ಹಟ್ಟಿಯಿಂದ 2 ದನಕಳ್ಳತನ ಈ ತಂಡ ಮಾಡಿದೆ.
ಕಾರ್ಯಾಚರಣೆ
ಪೊಲೀಸ್ ಕಮಿಷನರ್ ಎಂ.ಚಂದ್ರಸೇಖರ್,ಡಿಸಿಪಿಗಳಾದ ಕೆ.ಎಂ.ಶಾಂತರಾಜು,ಡಾ.ಸಂಜೀವ ಎಂ.ಪಾಟೀಲ್ ಅವರ ನಿರ್ದೇಶನದೊಂದಿಗೆ .ಎಸಿಪಿ ರಾಜೇಂದ್ರ ಡಿ.ಎಸ್.,ಬಜಪೆ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಅವರ ನೇತೃತ್ವದಲ್ಲಿ ಬಜಪೆ ಎಸ್‌ಐ ಸತೀಶ್,ಎಚ್‌ಸಿಗಳಾದ ಮಹಮದ್, ರಾಮಚಂದ್ರ, ಚಂದ್ರಶೇಖರ್,ಪಿಸಿಗಳಾದ ಶಶಿಧರ್,ಜಯಾನಂದ,ಪ್ರೇ ಮ್ ಮತ್ತು ಭರತ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ದನಕಳ್ಳತನದ ಬಗ್ಗೆ ಪೊಲೀಸ್‌ರಿಗೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ಬಜಪೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
Click this button or press Ctrl+G to toggle between Kannada and English