ಮಂಗಳೂರು: ತನ್ವೀರ್ ಸೇಠ್ ಪ್ರಕರಣದ ಬಗ್ಗೆ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ತನ್ವೀರ್ ಸೇಠ್‌ರಿಂದ ಪಕ್ಷ ಹಾಗೂ ಮುಖ್ಯಮಂತ್ರಿಗಳು ವಿವರ ಕೇಳಿದ್ದಾರೆ ಎಂದರು.
ದೇರಳಕಟ್ಟೆ ಸಮೀಪದ ಕುತ್ತಾರ್ನಲ್ಲಿ ನಿನ್ನೆ ರಾತ್ರಿ ನಡೆದ ರಾಜಮೋಹನ್ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೈಜ ಆರೋಪಿಗಳ ಬಂಧನವಾಗಬೇಕು. ಪೊಲೀಸ್ ಆಯುಕ್ತರೇ ಹೆಚ್ಚು ಮುತುವರ್ಜಿಯಿಂದ ಪ್ರಕರಣ ಬೇಧಿಸುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಳೆದ ಹತ್ತಕ್ಕೂ ಅಧಿಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಪೊಲೀಸರಿದ್ದಾರೆ ಎಂಬ ಆರೋಪವಿದ್ದು, ಪೊಲೀಸ್ ಆಯುಕ್ತರು ಅವರನ್ನು ವರ್ಗಾಯಿಸಲಿ. ಇದರಲ್ಲಿ ತಮ್ಮದೇನು ಹಸ್ತಕ್ಷೇಪವಿಲ್ಲ. ಈ ಭಾಗದಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕು. ಇದಕ್ಕೆ ಪೂರ್ಣ ಸಹಕಾರ ನೀಡಲಾಗುವುದು ಎಂದವರು ಹೇಳಿದರು.
Click this button or press Ctrl+G to toggle between Kannada and English