ಕದ್ರಿ ಮಾರುಕಟ್ಟೆ ದುರವಸ್ಥೆಯನ್ನು ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

7:28 PM, Thursday, November 24th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

trv ಮಂಗಳೂರು : ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕದ್ರಿ ಮಾರುಕಟ್ಟೆ ದುರವಸ್ಥೆಯನ್ನು ವಿರೋಧಿಸಿ ಗುರವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಕದ್ರಿ ಪ್ರದೇಶವು ಇತಿಹಾಸ ಪ್ರಸಿದ್ಧ ದೇವಸ್ಥಾನ, ಚರ್ಚ್ ಸೇರಿದಂತೆ ಹೆಚ್ಚಿನ ವಸತಿ ಸಂಕೀರ್ಣ, ಆಸ್ಪತ್ರೆ, ಮದುವೆ ಸಭಾಂಗಣಗಳು ಹೊಂದಿವೆ. 2000 ನೇ ಇಸವಿಯಲ್ಲಿ ಆತುರದಲ್ಲಿ ಪ್ರಾರಂಭವಾದ ಕದ್ರಿ ಮಲ್ಲಿಕಟ್ಟೆಯ ಮಾರುಕಟ್ಟೆಯು ಸಮಸ್ಯೆಗಳ ಆಗರವಾಗಿದೆ ಎಂದಿದ್ದಾರೆ.

ಕದ್ರಿ ಮಾರುಕಟ್ಟೆ 1980ರ ದಶಕದ ತನಕ ಮಹಿಳೆ-ಆರೋಗ್ಯ ಮತ್ತು ಹೆರಿಗೆ ಆಸ್ಪತ್ರೆಯಾಗಿತ್ತು. ಮಾರುಕಟ್ಟೆ ಆರಂಭವಾಗಿ 16 ವರ್ಷಗಳ ಬಳಿಕ ತಾತ್ಕಾಲಿಕವಾಗಿ ಇತ್ತೀಚೆಗೆ ಸರಿಮಾಡಿರುವುದು ಕಾಂಗ್ರೇಸ್ ಪಕ್ಷದ ಕಛೇರಿವೊಂದರ ಉದ್ಘಾಟನಾ ಸಮಾರಂಭಕ್ಕಾಗಿ ರಿಪೇರಿ ಮಾಡಲಾಯಿತು ಎಂದು ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ.

ಮಾರ್ಕೆಟನ್ನು ಸುಮಾರು 50 ಮೀ. ಹಿಂದಕ್ಕೆ ಸರಿಸುವ ಸಂದರ್ಭ ಇದ್ದರೂ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಎದ್ದು ಕಾಣುತ್ತಿದೆ. ಮೀನು ಮಾರುವ ಶೆಡ್ ಸೋರುತ್ತಿದ್ದು, ಕಂಬಗಳು ತುಕ್ಕು ಹಿಡಿದಿದ್ದು ಮಹಿಳೆಯರು ತಮ್ಮ ಜೀವ ಭಯದಲ್ಲಿ ಮೀನು ಮಾರಾಟ ಮಾಡುವ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

ಕದ್ರಿ ಕಾಂಪ್ಲೆಕ್ಸ್ ಆಧಾಯವಿಲ್ಲದೆ ಅಂಗಡಿಗಳನ್ನು ಮುಚ್ಚಿ ನಮ್ಮ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಆದುದರಿಂದ ಮೇಲ್ಕಾಣಿಸಿದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿದರು.

trvದಕ್ಷಿಣ ಜಿಲ್ಲಾ ಉಪಾಧ್ಯಕ್ಷ ಜೆರಾಲ್ಡ್ ಟವರ‍್ಸ್ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಸಂಬಂಧಪಟ್ಟ ಜನಪ್ರತಿನಿಧಿ ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು. ಕೂಡಲೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಕ್ಕೆ ಮಂಗಳೂರಿನ ಸಾರ್ವಜನಿಕರ ಬೆಂಬಲದೊಂದಿಗೆ ನಗರಪಾಲಿಕೆ ಚಲೋ, ನಗರಪಾಲಿಕೆಯ ಮುಂದೆ ಧರಣಿ ಸತ್ಯಾಗ್ರಹದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಮುಖಂಡರುಗಳ ಎಚ್ಚರಿಸಿದರು. ಸಭೆಯಲ್ಲಿ ಪ್ರಾಸ್ತವಿಕ ಭಾಷಣವನ್ನು ಸಿರಾಜ್ ಅಡ್ಕರೆ ಮಾಡಿದರು.

ಸಭೆಯಲ್ಲಿ ಅಬ್ದುಲ್ ರಶೀದ್ ಜಪ್ಪು, ಜ್ಯೋತಿಕಾ ಜೈನ್, ಆನಂದ್ ಅಮೀನ್ ಅಡ್ಯಾರ್, ರಕ್ಷಿತ್ ಬಂಗೇರ ಕುಡುಪು, ಹರೀಶ್ ಶೆಟ್ಟಿ ಶಕ್ತಿನಗರ, ರಾಜೇಶ್ ಕುತ್ತಾರ್, ನವಾಜ್ ಬಜಾಲ್, ತಾರನಾಥ್ ಜತ್ತಣ್ಣ, ರಹೀಂ ಕುತ್ತಾರ್, ಜನಾರ್ಧನ ಬೆಂಗ್ರೆ, ಚಂದ್ರಶೇಖರ್ ಕಣ್ಣಗುಡ್ಡೆ, ಕಾಮಾಕ್ಷಿ ಮತ್ತು ಮೀನಿನ ವ್ಯಾಪಾರ ಮಾಡುವ ಮಹಿಳೆಯರು ಉಪಸ್ಥಿತರಿದ್ದರು.

trv

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English