ಪ್ರಥಮ ಬಾರಿಗೆ ತುಳುನಾಡಿನ ದೈವಾರಾಧಕರ ಸಮಾವೇಶ

2:56 PM, Monday, November 28th, 2016
Share
1 Star2 Stars3 Stars4 Stars5 Stars
(No Ratings Yet)
Loading...

Mahalingeshwara templeಪುತ್ತೂರು: ಪ್ರಥಮ ಬಾರಿಗೆ ತುಳುನಾಡಿನ ದೈವಾರಾಧಕರ ಸಮಾವೇಶ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ದೈವಾರಾಧನೆ ಅಂದ್ರೆ ಸತ್ಯದ ಆರಾಧನೆ. ಹಿಂದೆ ದೈವ ಎಂಬ ಹೆಸರು ಇರಲಿಲ್ಲ, ಸತ್ಯ ಎಂದೇ ಕರೆಯುತ್ತಿದ್ದರು. ಈ ಆರಾಧನೆಯಲ್ಲಿ ಎಲ್ಲಾ ಜಾತಿಯವರಿಗೆ ಜವಾಬ್ದಾರಿ ಹಂಚಿಕೆಯಾಗಿದೆ. ಯಾವ ಜಾತಿಯವವರು ಇಲ್ಲದಿದ್ದರೂ ನೇಮ ಆಗುವುದಿಲ್ಲ. ಇದು ಇಲ್ಲಿ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು ಎಂಬುದನ್ನು ಸೂಚಿಸುತ್ತದೆ ಎಂದರು.

ದೈವದ ಆರಾಧನೆಗೆ ಶ್ರದ್ಧೆ, ಭಕ್ತಿ ಬೇಕು, ಆಡಂಬರದ ದೈವಾರಾಧನೆ ಅಲ್ಲ, ತುಳುನಾಡಿನ ನಿಜವಾದ ಶಕ್ತಿ ಇರುವುದು ಭಕ್ತಿ, ಆರಾಧನೆ, ನಂಬಿಕೆ, ಶ್ರದ್ಧೆಯಲ್ಲಿ. ಇವು ದೈವಗಳಿಗೆ ಶಕ್ತಿ ನೀಡಿವೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ದೈವಾರಾಧಕರ ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಡಾ. ನಿರಂಜನ ರೈ, ಮಾತನಾಡಿ, ದೈವಾರಾಧನೆಗೆ ಸಂಬಂಧಿಸಿದಂತೆ ತುಳುನಾಡಿಗೆ ಸಾಂಸ್ಕೃತಿಕವಾಗಿ ಪ್ರತ್ಯೇಕ ಅಕಾಡೆಮಿ ಆಗಬೇಕೆಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಿದ್ದೇವೆ ಎಂದರು.

ವೇದಿಕೆಯಲ್ಲಿ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೂರೇಲು ಸಂಜೀವ ಪೂಜಾರಿ, ದೈವಾರಾಧಕರ ಕೂಟ ಕೇಂದ್ರ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವ ನರ್ತಕ ಲೋಕಯ್ಯ ಸೇರಾ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಕೋಟಿ ಪರವ, ದೈವಾರಾಧಕರ ಸಮಾವೇಶ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English