ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾವಣೆ: ಗ್ರಾಹಕರಲ್ಲಿ ಆತಂಕ

10:03 AM, Wednesday, November 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

Saltಸುಳ್ಯ: ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾಗುತ್ತಿರುವ ಪ್ರಸಂಗ ಗ್ರಾಹಕರಲ್ಲಿ ಆತಂಕ ಮತ್ತು ಗೊಂದಲ ಸೃಷ್ಠಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಅನ್ನಭಾಗ್ಯ ಯೋಜನೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾದ ಉಪ್ಪಿನ ಪ್ಯಾಕೇಟ್‍ನಲ್ಲಿ ಬರುವ ಉಪ್ಪನ್ನು ಬಳಸಿದಾಗ ಆಹಾರದ ಬಣ್ಣ ಬದಲಾಗಿದೆ. ದ್ವಿಗುಣ ಬಲವರ್ಧಿತ ಕಬ್ಬಿಣಾಂಶಯುಕ್ತ ಅಯೋಡಿನ್‍ಯುಕ್ತ ಉಪ್ಪನ್ನು ಬಳಸಿದಾಗ ಆಹಾರ ವಸ್ತುಗಳ ಬಣ್ಣ ಕೆಲವೇ ಕ್ಷಣದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತಿದೆ.

ಸುಳ್ಯ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ಅಜ್ಜಾವರ ಶಾಖೆಯ ನ್ಯಾಯಬೆಲೆ ಅಂಗಡಿಯಿಂದ ಉಪ್ಪಿನ ಪೊಟ್ಟಣ ಖರೀದಿಸಿದ್ದ ಗೋಪಾಲ ಮೇನಾಲ ಅವರು ಮನೆಯಲ್ಲಿ ಬೆಳಗ್ಗೆ ಹಿಟ್ಟಿನ ಅಕ್ಕಿ ಕಡೆದು ಅದಕ್ಕೆ ಉಪ್ಪು ಹಾಕಿದಾಗ ಅದು ನೀಲಿ ಬಣ್ಣಕ್ಕೆ ತಿರುಗಿದೆ.

ಇದರಿಂದ ಆತಂಕಗೊಂಡ ಅವರು ಉಪ್ಪಿನ ಪೊಟ್ಟಣವನ್ನು ಸಿಎ ಬ್ಯಾಂಕಿನ ನ್ಯಾಯ ಬೆಲೆ ಅಂಗಡಿಗೆ ತಂದಿದ್ದಾರೆ. ಅಲ್ಲಿಯೂ ಅಕ್ಕಿ ಪುಡಿಗೆ ಉಪ್ಪನ್ನು ಹಾಕಿ ಪರೀಕ್ಷಿಸಿದಾಗ ಅದು ನೀಲಿ ಬಣ್ಣಕ್ಕೆ ತಿರುಗಿದೆ. ಕಂದು ಬಣ್ಣದ ಪ್ಯಾಕೇಟ್‍ನಲ್ಲಿ ಬಂದ ದ್ವಿಗುಣ ಬಲವರ್ಧಿತ ಕಬ್ಬಿಣಾಂಶದ ಉಪ್ಪು ಬಣ್ಣ ಬದಲಾವಣೆಯ ಆತಂಕ ಸೃಷ್ಠಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English