ಮಂಗಳೂರು: ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಘ ಸಂಸ್ಥೆಗೂ ಒಕ್ಕೂಟ ರಚಿಸುವಂತೆ ತುಳುನಾಡ ರಕ್ಷಣಾ ವೇದಿಕೆ ದ. ಕ. ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ, ಅನಾಥಾಶ್ರಮ ಮತ್ತು ವೃದ್ಧಾಶ್ರಮ ಇನ್ನಿತರ ಸಮಾಜಮುಖಿ ಸೇವೆಗೆ ಸರ್ಕಾರದಿಂದ ಸಿಗುವ ಸವಲತ್ತು ದುರ್ಬಳಕೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಘಸಂಸ್ಥೆಗಳು ಒಕ್ಕೂಟ ರಚಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಬೇಕೆಂದರು.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಂಘ ಸಂಸ್ಥೆಗಳಿಗೆ ಸರ್ಕಾರದ ಸವಲತ್ತುಗಳು ದೊರೆಯುತ್ತಿಲ್ಲ. ಕೆಲವು ಸರಕಾರೇತರ ಸಂಘಸಂಸ್ಥೆಗಳು ನೆಪಮಾತ್ರಕ್ಕೆ ಆಶ್ರಮ, ಅನಾಥಶ್ರಮ, ವೃದ್ಧಾಶ್ರಮಗಳನ್ನು ಕಟ್ಟಿ, ಭೂಕಬಳಿಕೆ, ಅಕ್ರಮ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿವೆ. ವೃದ್ಧಾಶ್ರಮದ ಸವಲತ್ತು ಪ್ರಾಮಾಣಿಕವಾಗಿ ಸೇವೆ ಮಾಡುವವರಿಗೆ ಸಿಗದೆ, ಸೇವೆಯನ್ನು ವ್ಯವಹಾರವಾಗಿ ತೆಗೆದುಕೊಂಡವರಿಗೆ ಸಿಗುತ್ತಿದೆ ಎಂದು ಆರೋಪಿಸಿದರು.
Click this button or press Ctrl+G to toggle between Kannada and English