ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್‌‌ಗಳಲ್ಲಿ ಸಾಲ ಪಡೆದು ವಂಚಿಸುತ್ತಿದ್ದ ಜಾಲ ಪತ್ತೆ

4:50 PM, Wednesday, November 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

Lorryಮಂಗಳೂರು: ಲಾರಿ ಚಾಸಿಸ್ ಮತ್ತು ಇಂಜಿನ್ ನಂಬರ್ ಬದಲಾಯಿಸಿ, ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್‌‌ಗಳಲ್ಲಿ ಸಾಲ ಪಡೆದು ವಂಚಿಸುತ್ತಿದ್ದ ಜಾಲವೊಂದನ್ನು ಬರ್ಕೆ ಪೊಲೀಸರು ಬಯಲಿಗೆಳೆದಿದ್ದಾರೆ.

ಬಂಧಿತರನ್ನ ಕುಲಶೇಖರದ ಅನಿಲ್ ಕಿರಣ್ ನರೋನ್ಹಾ, ಮರೋಳಿಯ ಸುಧೀರ್, ಉಳಾಯಿಬೆಟ್ಟು ಮಂಜಗುಡ್ಡೆಯ ನವೀನ್ ನರೋನ್ಹಾ ಯಾನೆ ಮೆಲ್ವಿನ್ ನರೋನ್ಹಾ, ಪಾವೂರು ಮಜ್ಜಕಟ್ಟೆ ವಲ್ಲಿ ಯಾನೆ ವಲೇರಿಯನ್ ಡಿ. ಸೋಜಾ ಹಾಗೂ ಜಬ್ಬಾರ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್, 93,94,020 ಸಾಲ ಪಡೆದು ವಂಚಿಸಲಾಗಿದ್ದು, 80 ಲಕ್ಷ ಮೌಲ್ಯದ ನಾಲ್ಕು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೂರು ಲಾರಿಗಳಿಗೆ ಏಳು ಕಡೆ ಸಾಲ ಮಾಡಿದ್ದಾರೆ ಎಂದು ತಿಳಿಸಿದರು.

ನಗರದ ವೇರ್‌ಹೌಸ್ ಜಂಕ್ಷನ್ ಬಳಿ ನಿನ್ನೆ ಬೆಳಗಿನ ಜಾವ ಮಹಾ ಶೋ ರೂಂ ಬಳಿ ಬರ್ಕೆ ಪೊಲೀಸ್ ಠಾಣಾ ಅಪರಾಧ ವಿಭಾಗದ ಪಿಎಸ್ಐ ನರೇಂದ್ರ ಮತ್ತು ಎಎಸ್ಐ ಪ್ರಕಾಶ್ ಹಾಗೂ ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದಾಗ ಕೆಎ 19, ಎಬಿ-6078 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ಹೆಸರನ್ನು ಕೇಳಿದಾಗ, ಕಿರಣ್ ನೊರೋನ್ಹಾ, ಸುಧೀರ್ ಮತ್ತು ಜಬ್ಬಾರ್ ಎಂದು ಹೇಳಿದ್ದರು.

ಲಾರಿಯ ದಾಖಲೆ ಮತ್ತಿತರ ವಿವರ ಕೇಳಿದಾಗ ಸರಿಯಾದ ಉತ್ತರ ನೀಡಿಲ್ಲ. ಇದರಿಂದ ಅನುಮಾನ ಬಂದು ಪೊಲೀಸರು ಲಾರಿಯ ಒಳಗೆ ಕ್ಯಾಬಿನ್‌‌ನಲ್ಲಿ ಶೋಧಿಸಿದಾಗ ಹಸಿರು ಬಣ್ಣದ ಸ್ಕೂಲ್ ಬ್ಯಾಗ್‌‌ಒಳಗೆ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಲಾರಿಯ ಟ್ಯಾಂಪರಿಂಗ್ ಮಾಡುವ ಇಂಗ್ಲಿಷ್ ವರ್ಣಮಾಲೆಯ ಮತ್ತು 0-9ರ ವರೆಗಿನ ಸಂಖ್ಯೆಗಳಿರುವ ಪಂಚ್‌‌ಗಳು ಪತ್ತೆಯಾಗಿವೆ.

ಈ ಕುರಿತು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದೆ ನುಣುಚಿಕೊಳ್ಳಲು ಯತ್ನಿಸಿದ್ದರು. ಪೊಲೀಸರು ಲಾರಿಯನ್ನು ಠಾಣೆಗೆ ತಂದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ವಿಚಾರಿಸಿದಾಗ ನಗರದ ವಿವಿಧೆಡೆ ಬಚ್ಚಿಟ್ಟಿದ್ದ ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡು ಕೊಣಾಜೆಯ ಪಜೀರು ಬಳಿ ವಲೇರಿಯನ್ ಡಿ.ಸೋಜಾನನ್ನು ಬಂಧಿಸಲಾಗಿತ್ತು.

ಅನಿಲ್ ಕಿರಣ್, ಸುಧೀರ್ ಮತ್ತು ಜಬ್ಬಾರ್ ನೀಡಿದ ಹೇಳಿಕೆಯಂತೆ ಇವರು ಉಳಾಯಿಬೆಟ್ಟುವಿನ ಅನಿಲ್ ಯಾನೆ ಮೆಲ್ವಿನ್ ನೊರೊನ್ಹಾ ಎಂಬಾತನ ಜತೆ ಸೇರಿಕೊಂಡು ಬಂಟ್ವಾಳ ವಗ್ಗ ಸಮೀಪ ಕಾವಳಕಟ್ಟೆಯ ನಿವಾಸಿ ಅಬ್ದುಲ್ ಜಬ್ಬಾರ್ ಎಂಬಾತನ ಮೂಲಕ ಲಾರಿಗಳ ನಕಲಿ ಇಂಜಿನ್ ಮತ್ತು ಚಾಸಿಸ್ ನಂಬರ್‌‌‌ಗಳನ್ನು ತಯಾರು ಮಾಡುವ ಸಾಧನಗಳನ್ನು ಬಳಸಿಕೊಂಡು ಲಾರಿಗಳ ಚಾಸಿಸ್ ಮತ್ತು ಇಂಜಿನ್ ನಂಬರ್‌‌ಗಳನ್ನು ಟ್ಯಾಂಪರ್ ಮಾಡುತ್ತಿದ್ದರು.

ಸಾರಿಗೆ ಕಚೇರಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಂಗಳೂರಿನ ಬೇರೆ ಬೇರೆ ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ ಲಾರಿಗಳ ನಕಲಿ ದಾಖಲೆಗಳನ್ನು ನೀಡಿ ಸಾಲವನ್ನು ಪಡೆದುಕೊಂಡು ಬ್ಯಾಂಕ್ ಮತ್ತು ಸೊಸೈಟಿಗಳಿಗೆ ವಂಚಿಸುತ್ತಿದ್ದರು.

ಕೆನರಾ ಬ್ಯಾಂಕ್, ಸಿಂಡಿಕೇಟ್, ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್‌‌ನಲ್ಲಿ ಸಾಲ ಪಡೆದು ವಂಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರ ಬಂಧನವಾಗಬೇಕಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English