ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಡಿ. 10 ರಿಂದ ರಥಯಾತ್ರೆ

12:38 PM, Monday, December 5th, 2016
Share
1 Star2 Stars3 Stars4 Stars5 Stars
(No Ratings Yet)
Loading...

Belthangadyಬೆಳ್ತಂಗಡಿ: ರಾಜ್ಯ ಸರ್ಕಾರದ (ಎತ್ತಿನ ಹೊಳೆ)ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಡಿ. 10 ರಿಂದ ನಡೆಯುವ ರಥಯಾತ್ರೆಯು ಮೊದಲ ಹಂತವಾಗಿದೆ. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಹಂತವಾಗಿ ಕ್ರಾಂತಿಕಾರಕ ಹೆಜ್ಜೆಯನ್ನು ಇಡಲಿದ್ದೇವೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಸದ, ರಥಯಾತ್ರೆಯ ಗೌರವಾಧ್ಯಕ್ಷ ನಳೀನ್ ಕುಮಾರ್ ಕಟೀಲು ಎಚ್ಚರಿಕೆ ನೀಡಿದ್ದಾರೆ.

ಅವರು ನಿನ್ನೆ ಬೆಳ್ತಂಗಡಿ ಸನಿಹ ಲಾಯಿಲ ಗ್ರಾ.ಪಂ. ಸಭಾಭವನದಲ್ಲಿ ಬೆಳ್ತಂಗಡಿಯಲ್ಲಿ ರಥಯಾತ್ರೆ ಹಾದುಹೋಗುವ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಭಾವನಾತ್ಮಕ ಜನಜಾಗೃತಿಗಾಗಿ ಡಿ.10, 11, 12 ರಂದು ಜಿಲ್ಲೆಯಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ಸು ನಮ್ಮ ನಿಮ್ಮೆಲ್ಲರ ಕೈಯಲ್ಲಿದೆ. ಜಾತಿ, ಮತ, ಪಂಥ ಮರೆತು ಒಂದಾಗಬೇಕಾಗಿದೆ ಮತ್ತು ಎಲ್ಲಾ ರಾಜಕೀಯ ಮುಖಂಡರಿಗೆ ಆಹ್ವಾನ ನೀಡಿಯೇ ಮುಂದಡಿಯಿಡುತ್ತಿದ್ದೇವೆ. ಈಗಾಗಲೇ ಮಾಜಿ ಸಚಿವ ಜನಾರ್ದನ ಪೂಜಾರಿ, ಶಾಸಕರಾದ ಲೋಬೊ, ವಸಂತ ಬಂಗೇರ ಬೆಂಬಲ ಸೂಚಿಸಿದ್ದಾರೆ ಎಂದರು.

ಬೀದಿ ಹೋರಾಟ, ಕಾನೂನು ಹೋರಾಟಗಳು ಕಳೆದ ಕೆಲ ಸಮಯಗಳಿಂದ ನಡೆಯುತ್ತಿದೆ. ಕಾನೂನು ಹೋರಾಟದ ವಿಚಾರದಲ್ಲಿ ತೀರ್ಪುಗಳು ನಮ್ಮ ಪರವಾಗಿಯೇ ಬರಲಿವೆ. ಹೀಗಾಗಿ ಕಾನೂನಿನ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English