ಇಂದು ಮಡಿಕೇರಿಯಲ್ಲಿ ಶ್ರೀಜಗನ್ನಾಥ ರಥಯಾತ್ರೆ

Thursday, January 30th, 2020
Iskon

ಮಡಿಕೇರಿ : ನಗರದ ಶ್ರೀ ಜಗನ್ನಾಥ ಮಂದಿರ (ಇಸ್ಕಾನ್) ವತಿಯಿಂದ ಜ.30 ರಂದು ಶ್ರೀ ಜಗನ್ನಾಥ ರಥಯಾತ್ರೆ ನಡೆಯಲಿದೆ. ಅಂದು ಸಂಜೆ 4.30 ಗಂಟೆಗೆ ಪೇಟೆ ಶ್ರೀರಾಮ ಮಂದಿರದಿಂದ ಶ್ರೀಜಗನಾಥ ಸ್ವಾಮಿಯ ರಥಯಾತ್ರೆ ಪ್ರಾರಂಭಗೊಂಡು ನಗರದ ಮುಖ್ಯ ಬೀದಿಗಳಲ್ಲಿ ಸಾಗಲಿದೆ. ರಾತ್ರಿ 8 ಗಂಟೆಗೆ ಗಾಂಧಿ ಮೈದಾನದಲ್ಲಿ ಶ್ರೀಜಗನ್ನಾಥ ಕಥಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಲಿವೆ. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗವಾಗಲಿದೆ.  

ಮಡಿಕೇರಿಯಲ್ಲಿ ಜ.30 ರಂದು ಶ್ರೀ ಜಗನ್ನಾಥ ರಥಯಾತ್ರೆ

Thursday, January 16th, 2020
iskon

ಮಡಿಕೇರಿ : ನಗರದ ಶ್ರೀ ಜಗನ್ನಾಥ ಮಂದಿರ (ಇಸ್ಕಾನ್) ವತಿಯಿಂದ ಜ.30 ರಂದು ಶ್ರೀ ಜಗನ್ನಾಥ ರಥಯಾತ್ರೆ ನಡೆಯಲಿದೆ. ಅಂದು ಸಂಜೆ 4.30 ಗಂಟೆಗೆ ಪೇಟೆ ಶ್ರೀರಾಮ ಮಂದಿರದಿಂದ ಶ್ರೀಜಗನಾಥ ಸ್ವಾಮಿಯ ರಥಯಾತ್ರೆ ಪ್ರಾರಂಭಗೊಂಡು ನಗರದ ಮುಖ್ಯ ಬೀದಿಗಳಲ್ಲಿ ಸಾಗಲಿದೆ. ರಾತ್ರಿ8 ಗಂಟೆಗೆ ಗಾಂಧಿ ಮೈದಾನದಲ್ಲಿ ಶ್ರೀಜಗನ್ನಾಥ ಕಥಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಲಿವೆ. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗವಾಗಲಿದೆ.  

ಯುವಾಬ್ರಿಗೇಡ್ ಸೋದರಿ ನಿವೇದಿತಾ ಪ್ರತಿಷ್ಠಾನ ಇದರ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ

Tuesday, September 25th, 2018
Untitled-1

ಬಂಟ್ವಾಳ: ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ 125ನೇ ಜಯಂತಿಯನ್ನು ಆಚರಿಸಿಕೊಳ್ಳುತ್ತಿರುವ ನಿಟ್ಟಿನಲ್ಲಿ ಈ ರಥಯಾತ್ರೆ ನಡೆಯುತ್ತಿದ್ದು 25-09-2018 ಬಿ.ಸಿ ರೋಡಿಗೆ ಆಗಮಿಸಿದ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಕ್ಷೇತ್ರ ಸಮಿತಿಯ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ ,ಜಿಲ್ಲಾ ವಕ್ತಾರಾದ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, , ಕ್ಷೇತ್ರದ ಪ್ರ.ಕಾರ್ಯದರ್ಶಿಯಾದ ಮೋನಪ್ಪ ದೇವಸ್ಯ ಮತ್ತು ರಾಮದಾಸ್ ಬಂಟ್ವಾಳ, ಕ್ಷೇತ್ರದ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ , ವಿಜಯ […]

ಸರಕಾರಿ ಶಾಲೆ ಉಳಿಸಿ ಅಭಿಯಾನದ ರಥಯಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಚಾಲನೆ

Thursday, September 6th, 2018
Govt-school

ಬಂಟ್ವಾಳ :  ಸೆ. 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸರಕಾರಿ ಶಾಲೆ ಉಳಿಸಿ ಅಭಿಯಾನದ ಕಾಲ್ನಡಿಗೆ ಜಾಥಕ್ಕೆ ಪೂರ್ವಭಾವಿಯಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ರಾಜ್ಯದ್ಯಂತ ಸಂಚರಿಸಲಿರುವ ರಥಯಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಬಂಟ್ವಾಳ ಬಡ್ಡಕಟ್ಟೆಯ ಹನುಮಾನ್ ದೇವಸ್ಥಾನದ ಬಳಿ ಬುಧವಾರ ಚಾಲನೆ ನೀಡಿದರು. ಕರೆಂಕಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭಗೊಂಡ ರಥಯಾತ್ರೆಗೆ ಬಡ್ಡಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಸಾಥ್ ನೀಡಿ ಬಂಟ್ವಾಳ ಪೇಟೆ ಮೂಲಕ ಬೈಪಾಸ್ ವರೆಗೆ […]

ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಡಿ. 10 ರಿಂದ ರಥಯಾತ್ರೆ

Monday, December 5th, 2016
Belthangady

ಬೆಳ್ತಂಗಡಿ: ರಾಜ್ಯ ಸರ್ಕಾರದ (ಎತ್ತಿನ ಹೊಳೆ)ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಡಿ. 10 ರಿಂದ ನಡೆಯುವ ರಥಯಾತ್ರೆಯು ಮೊದಲ ಹಂತವಾಗಿದೆ. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಹಂತವಾಗಿ ಕ್ರಾಂತಿಕಾರಕ ಹೆಜ್ಜೆಯನ್ನು ಇಡಲಿದ್ದೇವೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಸದ, ರಥಯಾತ್ರೆಯ ಗೌರವಾಧ್ಯಕ್ಷ ನಳೀನ್ ಕುಮಾರ್ ಕಟೀಲು ಎಚ್ಚರಿಕೆ ನೀಡಿದ್ದಾರೆ. ಅವರು ನಿನ್ನೆ ಬೆಳ್ತಂಗಡಿ ಸನಿಹ ಲಾಯಿಲ ಗ್ರಾ.ಪಂ. ಸಭಾಭವನದಲ್ಲಿ ಬೆಳ್ತಂಗಡಿಯಲ್ಲಿ ರಥಯಾತ್ರೆ ಹಾದುಹೋಗುವ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಭಾವನಾತ್ಮಕ ಜನಜಾಗೃತಿಗಾಗಿ […]

ಜನಚೇತನ ಯಾತ್ರೆಗೆ ಜಿಲ್ಲೆಯಲ್ಲಿ ಈಗಾಗಲೇ ಉತ್ಸಾಹದ ವಾತಾವರಣ ಮೂಡಿದೆ : ರವಿ

Tuesday, October 25th, 2011
CT Ravi

ಮಂಗಳೂರು: ಆಡ್ವಾಣಿಯವರ ಜನಚೇತನ ಯಾತ್ರೆಯ ಸಿದ್ಧತೆ ಕುರಿತಂತೆ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿವರಣೆ ನೀಡಿದರು. ಅಕ್ಟೋಬರ್ 31 ರಂದು ಜನಚೇತನ ಯಾತ್ರೆ ಮಂಗಳೂರು ನಗರಕ್ಕೆ ಬರಲಿದೆ. ನಗರದ ಕೇಂದ್ರ ಮೈದಾನಿನಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು ಬಳಿಕ ಯಾತ್ರೆ ಉಡುಪಿಗೆ ತೆರಳಲಿದೆ. ಯಾತ್ರೆಯ ಕುರಿತಂತೆ 30 ವಿವಿಧ ವಿಭಾಗಗಳನ್ನು ರಚಿಸಲಾಗಿದ್ದು ಸಿದ್ದತೆಯಲ್ಲಿ ಕಾರ್ಯೊನ್ಮುಖವಾಗಿದೆ. ಯುವಮೋರ್ಚಾದಿಂದ ಯುವಜಾಗೃತಿ ರಥಯಾತ್ರೆ ನಡೆಯಲಿದ್ದು ಜಿಲ್ಲೆಯ 8 ವಿಧಾನಸಭಾ […]

ಎಲ್‌.ಕೆ. ಆಡ್ವಾಣಿ ರಥಯಾತ್ರೆ ಹಾಸ್ಯಾಸ್ಪದ : ವಿಜಯ ಕುಮಾರ್‌ ಶೆಟ್ಟಿ

Saturday, September 17th, 2011
Vijayakumar shetty

ಮಂಗಳೂರು : ಎಲ್‌.ಕೆ. ಆಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಕೈಗೊಂಡಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ದೇಶದಲ್ಲೇ ಭ್ರಷ್ಟಾಚಾರದಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ಕರ್ನಾಟಕ ಎಂದು ಕುಖ್ಯಾತಿಗೆ ಒಳಗಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಜನಾರ್ದನ ರೆಡ್ಡಿ ಇವರೆಲ್ಲ ಹಲವು ಹಗರಣಗಳಲ್ಲಿ ಭಾಗಿಯಾಗಿ ಜೈಲು ಸೇರಬೇಕಾಯಿತು. ನಗರ ಪಾಲಿಕೆಯಲ್ಲಿಯೂ ಆಡಳಿತಯಂತ್ರ ಸಂಪೂರ್ಣ ಕುಸಿದಿದೆ. ಖಾಲಿ […]