ಬೆಳ್ತಂಗಡಿ: ನೇತ್ರಾವತಿ ನದಿ ಎಂಬುದು ಯಾವೂದೇ ಪಕ್ಷಕ್ಕೆ ಸಂಬಂಧಿಸಿದಲ್ಲ. ಇದು ಜಿಲ್ಲೆಯ ಜನರ ಜನರ ಸ್ವತ್ತು. ಎತ್ತಿನಹೊಳೆ ವಿರೋಧಿ ಹೋರಾಟ ಯಾವೂದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಇದು ನಮ್ಮ ಜಿಲ್ಲೆಯ ಜನತೆಯ ಬದುಕಿನ ಪ್ರಶ್ನೆ ಎತ್ತಿನಹೊಳೆ ಯೋಜನೆ ಹಣ ಮಾಡುವ ಯೋಜನಯೇ ಹೊರತು ಯಾರಿಗೂ ನೀರು ಕೊಡುವ ಉದ್ದೇಶ ಇದರಲ್ಲಿ ಇಲ್ಲ ಎಂದು ಯಾತ್ರೆ ಸಮಿತಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಅವರು ಧರ್ಮಸ್ಥಳದಲ್ಲಿ ಎತ್ತಿನಹೊಳೆ ವಿರೋಧಿಸಿ-ನೇತ್ರಾವತಿ ಉಳಿಸಿ ಸಮಿತಿಯ ವತಿಯಿಂದ ಪಂಚತೀರ್ಥ- ಸಪ್ತಕ್ಷೇತ್ರ ರಥಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ನಿಮ್ಮ ಮನೆಮಂದಿ ನೇತ್ರಾವತಿಯ ನೀರೇ ಕುಡಿಯುವುದು. ನಿಮಗೆ ಅಧಿಕಾರ, ಹಣ. ಓಟು ಬೇಕಾ ಇಲ್ಲ ಜಿಲ್ಲೆಯ ಜನತೆ ಬೇಕಾ ಎಂಬುದನ್ನು ತೀರ್ಮಾನಿಸಿ ಜಿಲ್ಲೆಯ ಉಳಿವಿಗಾಗಿ, ನೇತ್ರಾವತಿಗಾಗಿ ಜಿಲ್ಲೆಯ ಶಾಸಕರು ಸಹಿತ ನೀವೂ ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಜಿಲ್ಲೆಯ ಸಚಿವರನ್ನು ಎಚ್ಚರಿಸಿದರು.
ರಥಯಾತ್ರೆಯ ಸಂಚಾಲಕ ಮೋನಪ್ಪ ಭಂಡಾರಿ ಮಾತನಾಡಿದರು. ಉಪಾಧ್ಯಕ್ಷರುಗಳಾದ ಪಿ.ಎಂ.ರಹೀಂ ಬಂಟ್ವಾಳ, ಉಮಾನಾಥ ಕೋಟ್ಯಾನ್, ಪ್ರಭಾಕರ ಬಂಗೇರ, ಭುಜಬಲಿ ಧರ್ಮಸ್ಥಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಚಾಲಕರಾದ ಗೋಪಾಲಕೃಷ್ಣ ಹೇರಳೆ, ಪುರುಷೋತ್ತಮ ಚಿತ್ರಾಪುರ, ಸಹ ಸಂಚಾಲಕರಾದ ದಿನಕರ ಶೆಟ್ಟಿ, ಸತ್ಯಜಿತ್ ಸುರತ್ಕಲ್, ನಿರ್ವಹಣೆ ಸಮಿತಿಯ ದೇವದಾಸ್ ಶೆಟ್ಟಿ, ಎಂ.ಜಿ. ಹೆಗ್ಡೆ, ಶಶಿರಾಜ ಶೆಟ್ಟಿ ಕೊಳಂಬೆ ಮತ್ತಿತರರು ಇದ್ದರು.
Click this button or press Ctrl+G to toggle between Kannada and English