ಮಂಗಳೂರು : ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಇದರ ಗ್ರಂಥಿ ವಿಜ್ಞಾನ ಮತ್ತು ನರ್ಸಿಂಗ್ ವಿಭಾಗವು ಉಪಶಮನ ನಿಗಾ ಘಟಕದ ವಿಷಯದಲ್ಲಿ ಆಯೋಜಿಸಿದ ಕಾರ್ಯಾಗಾರವನ್ನು ಬುಧವಾರ ಅವರು ಜಿಲ್ಲಾಧಿಕಾರಿ ಡಾ| ಎನ್. ಎಸ್. ಚನ್ನಪ್ಪ ಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಬಡ ಜನರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಷೆಗಳು ಸೇವೆಯಾಗಿ ಸಿಗಬೇಕು ಎಂದು ಹೇಳಿದರು.
ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡಿರುವ ಕಾರಣ ಎಲ್ಲರಿಗೂ ಸಮಾನ ವೈದ್ಯಕೀಯ ಸೇವೆಗಳು ಲಭ್ಯವಾಗುತ್ತಿಲ್ಲ. ವೈದ್ಯರು ಮಾನವೀಯ ಕಳಕಳಿಯನ್ನು ಅಳವಡಿಸಿಕೊಂಡು ಸೇವೆ ನೀಡಬೇಕು. ಫಾದರ್ ಮುಲ್ಲರ್ ಆಸ್ಪತ್ರೆ ಹಲವಾರು ವರ್ಷಗಳಿಂದ ಬಡವರ ಬಗ್ಗೆ ಕಾಳಜಿ ವಹಿಸಿ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಆದ್ಯತೆ ವಹಿಸುತ್ತಿರುವುದು ಶ್ಲಾಘನೀಯ ಎಂದರು.
ವಾಮಂಜೂರು ಆವೆಮರಿಯ ಉಪಶಮನ ನಿಗಾ ಘಟಕದ ನಿರ್ದೇಶಕಿ ಡಾ| ಲವೀನಾ ನೊರೊನ್ಹಾ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಫಾದರ್ ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ಆಡಳಿತಾಧಿಕಾರಿ ರೆ| ಫಾ| ರಿಚರ್ಡ್ ಕುವೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ರೆ| ಫಾ| ಡೆನ್ನಿಸ್ ಡೇಸಾ, ಸಿಎಂಎಸ್ ಡಾ| ಬಿ. ಎಸ್. ರೈ, ಕಾರ್ಯಾಗಾರದ ಸಂಯೋಜಕಿ ಐಲೀನ್ ಮಥಾಯಿಸ್ ಅವರು ಉಪಸ್ಥಿತರಿದ್ದರು.
ಮೆಡಿಕಲ್ ಕಾಲೇಜಿನ ಡೀನ್ ಡಾ| ಜೆ. ಪಿ. ಆಳ್ವ ಸ್ವಾಗತಿಸಿದರು. ಕಾರ್ಯಾಗಾರದ ಆಯೋಜನಾ ಸಮಿತಿ ಮುಖ್ಯಸ್ಥ ಡಾ| ನವೀನ್ ರುಡಾಲ್ಫ್ ರೊಡ್ರಿಗಸ್ ವಂದಿಸಿದರು.
Click this button or press Ctrl+G to toggle between Kannada and English