ಮಂಗಳೂರು: ಬಾಲಕಿಯನ್ನು ಶಿಕ್ಷಣ ನೀಡುವುದಾಗಿ ಕರೆದುಕೊಂಡು ಹೋಗಿ ಗೆಳೆಯನ ಮನೆಯಲ್ಲಿರಿಸಿ ನಿರಂತರ ಅತ್ಯಾಚಾರವೆಸಗಿದ ಘಟನೆ ಮಂಗಳೂರಿನ ತೊಕ್ಕೊಟ್ಟು ಸಮೀಪ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರವೆಸಗಿದ ಆರೋಪಿ ಡಾವರ್ನ್ ಡಿಸೋಜ (42) ಹಾಗೂ ಮನೆಯ ಯಜಮಾನ ಮೆಲ್ವಿನ್ ಎಂಬಿಬ್ಬರನ್ನು ಉಳ್ಳಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.
ಮೂಡಬಿದ್ರೆ ನಿವಾಸಿಯಾದ ಬಾಲಕಿಯನ್ನು ಅವಳ ಪರಿಚಿತನೊಬ್ಬ ಆಕೆಗೆ ಶಿಕ್ಷಣ ನೀಡುವುದಾಗಿ ಆಕೆಯ ತಾಯಿಯ ಮನವೊಲಿಸಿ ತೊಕ್ಕೊಟ್ಟಿನ ಅಡಂಕುದ್ರು ಬಳಿಯಿರುವ ತನ್ನ ಗೆಳೆಯ ಮೆಲ್ವಿನ್ ಮನೆಯಲ್ಲಿರಿಸಿದ್ದ. ಬಳಿಕ ಹಲವು ದಿನಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ.
ವಿಷಯ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಡಾವರ್ನ್ ಡಿಸೋಜ ತಲೆಮರೆಸಿಕೊಂಡಿದ್ದ. ನಿನ್ನೆ ಈತ ಮತ್ತೆ ಬಂದಾಗ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಈ ನಡುವೆ ಬಾಲಕಿಯನ್ನು ಡಾವರ್ನ್ ಜೊತೆಗೆ ಕಳುಹಿಸಿದ್ದಕ್ಕಾಗಿ ಆಕೆಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.
Click this button or press Ctrl+G to toggle between Kannada and English