ಮದೆಮಹೇಶ್ವರ ಪದವಿ ಪೂರ್ವ ಕಾಲೇಜ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ

Saturday, February 15th, 2020
college-madikeri

ಮಡಿಕೇರಿ : ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಮಡಿಕೇರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸೋಮೇಗೌಡ ಅವರು ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ ಮತ್ತು ಮಕ್ಕಳ ಹಕ್ಕಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜ್ ನ ಪ್ರಾಂಶುಪಾಲರಾದ ಗುಲಾಬಿ ಜನಾರ್ಧನ ಮಹಿಳೆಯರು ಹಾಗೂ ಮಕ್ಕಳು ಕಾನೂನಿನ ಕುರಿತು ಹೆಚ್ಚು ತಿಳಿದುಕೊಂಡಿರಬೇಕೆಂದರು. ಫ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್.ಗಣಪತಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.  

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

Friday, October 13th, 2017
kuppepadav

ಮಂಗಳೂರು: ಡೈರಿಗೆ ಹಾಲು ಹಾಕಿ ಮನೆಗೆ ಬರುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವನನ್ನು ಬಜಪೆ ಪೊಲೀಸರು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಪ್ಪೆಪದವು ಆಚಾರಿ ಜೋರ ನಿವಾಸಿ ಮಹಮ್ಮದ್ ಫೈಜಾಲ್ (37) ಬಂಧಿತ ಆರೋಪಿ. ಬಾಲಕಿ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದು, ಅ.10ರಂದು ಬೆಳಗ್ಗೆ ಡೈರಿಗೆ ಹಾಲು ಹಾಕಿ ಮರಳಿ ಮನೆಗೆ ಬರುತ್ತಿರುವಾಗ ಆರೋಪಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆ ಕಾರ್ಯ ನಡೆಸಿದ ಪೊಲೀಸರು ಆರೋಪಿಯನ್ನು […]

ಬಾಲಕಿಯನ್ನು ಶಿಕ್ಷಣ ನೀಡುವುದಾಗಿ ಕರೆದುಕೊಂಡು ಹೋಗಿ ಅತ್ಯಾಚಾರ: ಆರೋಪಿಗಳ ಬಂಧನ

Friday, December 23rd, 2016
Thokkottu

ಮಂಗಳೂರು: ಬಾಲಕಿಯನ್ನು ಶಿಕ್ಷಣ ನೀಡುವುದಾಗಿ ಕರೆದುಕೊಂಡು ಹೋಗಿ ಗೆಳೆಯನ ಮನೆಯಲ್ಲಿರಿಸಿ ನಿರಂತರ ಅತ್ಯಾಚಾರವೆಸಗಿದ ಘಟನೆ ಮಂಗಳೂರಿನ ತೊಕ್ಕೊಟ್ಟು ಸಮೀಪ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರವೆಸಗಿದ ಆರೋಪಿ ಡಾವರ್ನ್‌ ಡಿಸೋಜ (42) ಹಾಗೂ ಮನೆಯ ಯಜಮಾನ ಮೆಲ್ವಿನ್ ಎಂಬಿಬ್ಬರನ್ನು ಉಳ್ಳಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ. ಮೂಡಬಿದ್ರೆ ನಿವಾಸಿಯಾದ ಬಾಲಕಿಯನ್ನು ಅವಳ ಪರಿಚಿತನೊಬ್ಬ ಆಕೆಗೆ ಶಿಕ್ಷಣ ನೀಡುವುದಾಗಿ ಆಕೆಯ ತಾಯಿಯ ಮನವೊಲಿಸಿ ತೊಕ್ಕೊಟ್ಟಿನ ಅಡಂಕುದ್ರು ಬಳಿಯಿರುವ ತನ್ನ ಗೆಳೆಯ ಮೆಲ್ವಿನ್ ಮನೆಯಲ್ಲಿರಿಸಿದ್ದ. ಬಳಿಕ ಹಲವು ದಿನಗಳಿಂದ ನಿರಂತರ ಅತ್ಯಾಚಾರ […]