ಮೈಸೂರು: ಭಾರತರತ್ನ ಅಂಬೇಡ್ಕರ್ ಅವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುವ ಮುನ್ನ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಆರ್‌ಎಸ್ಎಸ್, ಬಿಜೆಪಿ ಹಾಗೂ ಬಜರಂಗದಳ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದು, ಅಂಬೇಡ್ಕರ್ ಅನುಯಾಯಿಗಳು ಹಿಂದುತ್ವ ಪ್ರತಿಪಾದಿಗಳನ್ನು ನಂಬಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಕಾಂಗ್ರೆಸ್ ಏಕೆ ನೀಡಲಿಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅವರಿಗೆ ಪ್ರಶಸ್ತಿ ಕೊಟ್ಟಿದೆ. ಅಲ್ಲದೇ ಜಯಂತ್ಯುತ್ಸವವನ್ನು ನಡೆಸಲು ಪ್ರಧಾನಿ ಮೋದಿಯವರೆ ಬರಬೇಕಿತ್ತು ಎಂದು ಹೇಳಿದರು.
ನೀಟ್ ಪರೀಕ್ಷೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲವೆಂದು ಸಿಎಂ ಹೇಳುತ್ತಾರೆ. ಆದರೆ ವಿಜ್ಞಾನವನ್ನು ಮಕ್ಕಳಿಗೆ ಕನ್ನಡದಲ್ಲಿಯೇ ರಾಜ್ಯಾದ್ಯಂತ ಬೋಧನೆ ಮಾಡುತ್ತಿದ್ದಿರಾ? ಮೊದಲು ವಿದ್ಯಾರ್ಥಿಗಳಿಗೆ ವಿಜ್ಞಾನ ಪಠ್ಯವನ್ನು ಕನ್ನಡದಲ್ಲಿ ಬೋಧಿಸಲು ವ್ಯವಸ್ಥೆ ಮಾಡಿ, ನಂತರ ಎಲ್ಲ ಸಂಸದರನ್ನು ಕೇಂದ್ರದತ್ತ ಕರೆದುಕೊಂಡು ಹೋಗಲಿ ಎಂದರು.
ನಂಜನಗೂಡು ಉಪ ಚುನಾವಣೆಯಲ್ಲಿ ಸಿಎಂಗೆ ತವರು ಜಿಲ್ಲೆಯಲ್ಲಿ ಮುಖಭಂಗವಾಗುವ ಎಲ್ಲ ಲಕ್ಷಣಗಳು ಕಾಣತೊಡಗಿವೆ. ಇನ್ನು ಸಿಎಂ ಅವರು ಅಭ್ಯರ್ಥಿಗಳ ಹುಡುಕಾಟದಲ್ಲಿಯೇ ಇರುವವರು. ಅವರು ಮುಂದಿನ ಚುನಾವಣೆಯಲ್ಲಿ ಸ್ಥಿರತೆ ಕಳೆದುಕೊಳ್ಳಲಿದ್ದಾರೆ ಎಂದು ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Click this button or press Ctrl+G to toggle between Kannada and English