ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವವರಿಗೆ ಕಠಿಣ ಕ್ರಮವಾಗಬೇಕು : ಸಂಸದ ಪ್ರತಾಪ್ ಸಿಂಹ

Thursday, January 9th, 2020
pratap-simha

ಮಡಿಕೇರಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಚಾರಿತ್ರಿಕ ಕ್ರಮ ಕೈಗೊಂಡಿದೆ. ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ತೊಂದರೆ ಮಾಡುವವರ ವಿರುದ್ಧ ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಕಠಿಣ ಕಾನೂನು ಜಾರಿಯಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ 370 ನೇ ವಿಧಿ ಹಾಗೂ ತ್ರಿವಳಿ ತಲಾಕ್ ರದ್ದು ಪಡಿಸಿದೆ. ಅಯೋಧ್ಯೆ ತೀರ್ಪು ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದೆ. ಉತ್ತರ ಭಾರತದ ಗಡಿ ದೇಶಗಳಲ್ಲಿ […]

ಮಡಿಕೇರಿ-ಸಂಪಾಜೆ ರಸ್ತೆ ಮಾರ್ಗ ಸರಿಪಡಿಸಲು 58 ಕೋಟಿ ರೂ. ಮಂಜೂರು

Wednesday, January 1st, 2020
pratap

ಮಡಿಕೇರಿ : ಕಳೆದ ಎರಡು ವರ್ಷ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದ ತೀವ್ರ ಹಾನಿಯಾಗಿದ್ದ ಮಡಿಕೇರಿ-ಸಂಪಾಜೆ ರಸ್ತೆ(ಎನ್‌ಎಚ್275) ಯಲ್ಲಿ ತಡೆಗೋಡೆ ಮತ್ತಿತರ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ 58.8 ಕೋಟಿ ರೂಪಾಯಿ ಮಂಜೂರು ಮಾಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ತಡೆಗೋಡೆ, ಚರಂಡಿ, ರಸ್ತೆ ಸುರಕ್ಷತೆ ಸೇರಿದಂತೆ ವಿವಿಧ ಕಾಮಗಾರಿಗಳು ಶೀಘ್ರವೇ ಆರಂಭಗೊಳ್ಳಲಿವೆ ಎಂದು ಲೋಕಸಭಾ […]

ಕಾಂಗ್ರೆಸ್ ಅಮಾಯಕ ಮುಸ್ಲಿಂ ರಿಗೆ ಚಿತಾವಣೆ ಕೊಟ್ಟು ಗಲಭೆ ಮಾಡುತ್ತಿದೆ : ಪ್ರತಾಪ್ ಸಿಂಹ

Saturday, December 21st, 2019
pratapa-simha

ಮೈಸೂರು : ಕೇಂದ್ರ ಸರ್ಕಾರ ಪಾಕ್, ಅಪ್ಘಾನ್, ಬಾಂಗ್ಲಾದೇಶದಲ್ಲಿ ತುಳಿತಕ್ಕೊಳಗಾದ ಅಲ್ಪ ಸಂಖ್ಯಾತರಿಗೆ ಇಲ್ಲಿನ ನಾಗರಿಕತ್ವ ನೀಡುವ ಸಲುವಾಗಿ ಸಿಎಎ ಜಾರಿಗೆ ತಂದಿದೆಯೇ ಹೊರತು ಇಲ್ಲಿರುವ ಮುಸ್ಲಿಂ ಬಂಧುಗಳನ್ನು ನೀವು ಭಾರತೀಯರೇ ಹೌದಾ ಅಲ್ಲವಾ ಎಂದು ಸಾಬೀತು ಪಡಿಸಲು, ಅಥವಾ ಇಲ್ಲಿಂದ ಹೊರದಬ್ಬಲು ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟ ಪಡಿಸಿದ್ದಾರೆ. ಜಲದರ್ಶನಿ ಅತಿಥಿ ಗೃಹದ ಎದುರು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ತುಳಿತಕ್ಕೊಳಗಾದವರಿಗೆ ನಾವು ಆಶ್ರಯ ನೀಡುತ್ತಿದ್ದೇವೆ. ಕಾಂಗ್ರೆಸ್ ನವರು ಅದನ್ನು […]

ಮೈಸೂರು ದಸರಾ ಉದ್ಘಾಟನೆಗೆ ಸಿದ್ಧತೆ ಪೂರ್ಣ : ಸಂಸದ ಪ್ರತಾಪ್​​ ಸಿಂಹ

Saturday, September 28th, 2019
prathap-sinmha

ಮೈಸೂರು : ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಸಿದ್ಧತೆಗಳು ಸಂಪೂರ್ಣವಾಗಿವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 9:39ಕ್ಕೆ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಸಿಎಂ ಯಡಿಯೂರಪ್ಪ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ದಸರಾ ಉದ್ಘಾಟನೆ ಮಾಡಲಿದ್ದು, ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ರೀತಿಯ ಸಿದ್ಧತೆ ಅಂತಿಮ ಹಂತದಲ್ಲಿದೆ. ಸ್ವಚ್ಛ ವಾತಾವರಣದಲ್ಲಿ ನಾಳೆ ದಸರಾ ಉದ್ಘಾಟನೆ ಆಗಲಿದ್ದು, ಈ ಬಾರಿ ಯುವ ದಸರಾವನ್ನು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಉದ್ಘಾಟಿಸಲಿದ್ದಾರೆ. ಜೊತೆಗೆ ರಾನು […]

ಪ್ರಕಾಶ್ ರೈ ತೆರೆ ಮೇಲೆ ಮಾತ್ರ ಅಲ್ಲ ಸಾರ್ವಜನಿಕ ಜೀವನದಲ್ಲೂ ಖಳ ನಾಯಕ: ಪ್ರತಾಪ್ ಸಿಂಹ

Monday, June 4th, 2018
prathap-simha

ಮೈಸೂರು: ಕಾಲ ಚಿತ್ರಕ್ಕೂ ಕಾವೇರಿಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪ್ರಕಾಶ್ ರೈ ಮತ್ತೊಮ್ಮೆ ಕರ್ನಾಟಕ ಪಾಲಿಗೆ ಖಳ ನಾಯಕ ಎಂಬುದನ್ನ ಸಾಬೀತು ಮಾಡಿದ್ದಾರೆ. ಈ ನಟನಿಗೆ ಕಾಸು ಮಾತ್ರ ಮುಖ್ಯ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ರಜನಿಕಾಂತ್ ಅವರ ಕಾಲ ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧ ಮಾಡಿರುವುದಕ್ಕೆ ಚಿತ್ರಕ್ಕೂ ಕಾವೇರಿ ವಿಚಾರಕ್ಕೂ ಸಂಬಂಧವಿಲ್ಲ ಎಂದು ಪ್ರಕಾಶ್ ರೈ ಬರೆದುಕೊಂಡಿರುವ ಬಗ್ಗೆ ಇಂದು ಸಂಸದ ಪ್ರತಾಪ್ ಸಿಂಹ ಅವರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಬಗ್ಗೆ ಖಾರಾವಾಗಿಯೇ ಪ್ರತಿಕ್ರಿಯೆ […]

ಕರಾವಳಿ ಸ್ಥಿತಿ ಬದಲಾಗಬೇಕಾದರೆ ಸಿಎಂ ಬದಲಾಗಬೇಕು: ಪ್ರತಾಪ್‌ ಸಿಂಹ ವಾಗ್ದಾಳಿ

Monday, March 5th, 2018
pratap-simha

ಪುತ್ತೂರು: ಮತ್ತೆ ಮಂಗಳೂರು ಚಲೋ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಕರಾವಳಿ ಜನರು ಆತಂಕದಿಂದ ನೋಡುವ ಸ್ಥಿತಿ ಬದಲಾಗಬೇಕಾದರೆ ಸಿಎಂ ಬದಲಾಗಬೇಕೆಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ಚಲೋದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮೈಸೂರಿನಲ್ಲಿ ಮಹಾರಾಜರ ನೆನಪಿನ‌ ಬದಲು ಟಿಪ್ಪು ಸಂತತಿ ನೆನಪಾಗುವ ಸ್ಥಿತಿ ನಿರ್ಮಾಣವಾಗಿದೆ. ಹಿಂದೂಗಳ ಹಬ್ಬವನ್ನು ಹತ್ತಿಕ್ಕುವ ಕೆಲಸ ಸಿದ್ದರಾಮಯ್ಯ ಆಡಳಿತದಲ್ಲಿ ನಡೆದಿದೆ. ಜನರು ಎಚ್ಚೆತ್ತುಕೊಳ್ಳದಿದ್ದಲ್ಲಿ ಜಿಹಾದಿ ಮನಸ್ಥಿತಿ ಕಪಿಮುಷ್ಠಿಯೊಳಗೆ ಕರಾವಳಿ ಹೋಗಬಹುದು ಎಂದರು. ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ […]

ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ

Tuesday, February 27th, 2018
pratap-simha

ಮೈಸೂರು: ಸಂಸದ ಪ್ರತಾಪ ಸಿಂಹ ವಿರುದ್ಧ ಬಹುಭಾಷಾ ಕಲಾವಿದ, ನಟ ಪ್ರಕಾಶ್ ರೈ ಇಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯೇ ನಗರಕ್ಕೆ ಆಗಮಿಸಿದ್ದ ನಟ ರೈ, ಆಪ್ತರು, ವಕೀಲರು ಹಾಗೂ ಪ್ರಗತಿಪರ ಚಿಂತಕರ ಜತೆ ಸಮಾಲೋಚನೆ ನಡೆಸಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಪ್ರತಾಪ ಸಿಂಹ, ಟ್ವೀಟರ್, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ್ದಲ್ಲದೆ ಟ್ರೋಲ್ ಗೂಂಡಾಗಿರಿ ನಡೆಸಿದ್ದಾರೆ ಎಂಬುದು ಪ್ರಕಾಶ್ ರೈ ಆರೋಪ. ಕೆಲ ದಿನಗಳ ಹಿಂದೆ […]

ಅನಂತ್‌ ಕುಮಾರ್ ಹೆಗಡೆ ಒಬ್ಬ ರಾಕ್ಷಸ; ಪ್ರಕಾಶ್‌ ರೈ

Monday, February 26th, 2018
prakash-rai

ಮೈಸೂರು: ಕೋಮುವಾದವನ್ನು ಹಾಗೂ ಅದರ ಪ್ರಸಾರಕರನ್ನು ಕಠು ಶಬ್ದಗಳಲ್ಲಿ ಖಂಡಿಸುತ್ತಿರುವ ನಟ ಪ್ರಕಾಶ್ ರೈ, ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ಅವರನ್ನು ‘ರಾಕ್ಷಸ’ ಎಂದು ಕರೆದಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು, ಅಪ್ಪಟ ಕೋಮುವಾದಿ ಎಂದೇ ಗುರುತಿಸಲ್ಪಡುವ ಅನಂತ್‌ಕುಮಾರ್ ಹೆಗಡೆ ಅವರನ್ನು ರಾಕ್ಷಸರಿಗೆ ಹೋಲಿಸಿದ್ದಾರೆ. ಅನಂತ್‌ಕುಮಾರ್ ಹೆಗಡೆ ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಹರಿಹಾಯ್ದ ಪ್ರಕಾಶ್ ರೈ ಅವರು ‘ಅವರ ಮಾತು ಕೇಳಿದರೆ ಭಯವಾಗುತ್ತದೆ, ದೇಶದಲ್ಲಿ ಕೋಮುವಾದ ಬೆಳೆಸಲು ಸಂಸದ, […]

ಉಪ ಆಯುಕ್ತರನ್ನು ತರಾಟೆ ತೆಗದುಕೊಂಡ ಸಂಸದ ಪ್ರತಾಪ್ ಸಿಂಹ

Saturday, January 27th, 2018
pratap-simha

ಮೈಸೂರು: ಹುಣಸೂರು ನಗರದಲ್ಲಿ ಶನಿವಾರ ಆಯೋಜಿಸಿರುವ ಹನುಮ ಜಯಂತಿಯ ವೇಳೆ ಮಾಧ್ಯಮಗಳನ್ನು ನಿಯಂತ್ರಿಸಲು ಬಂದ ಉಪ ಆಯುಕ್ತರನ್ನು ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವೇನೂ ಭಿಕ್ಷೆ ನೀಡಿ ನಮಗೆ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ನೀವು ಸೂಚಿಸಿದ ಮಾರ್ಗದಲ್ಲಿ ನಾವು ತೆರಳುತ್ತಿದ್ದೇವೆ. ನಮ್ಮ ಮೇಲೆ ಒತ್ತಡ ಹಾಕಿದ್ರೆ ನಾನು ಇಲ್ಲೆ ರಸ್ತೆಯಲ್ಲೇ ಕೂರುತ್ತೇನೆ ಎಂದು ಪ್ರತಾಪ್ ಸಿಂಹ ಉಪ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾದ್ರೆ ಕೋಪ ಬರುತ್ತೆ. ಕೋಪ ಬಂದಾಗ ಗಲಾಟೆ ಆಗುತ್ತೆ. […]

ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆ: ಗೋವಾ ಸಚಿವನ ವಿರುದ್ಧ ಬಿಜೆಪಿ ನಾಯಕರು ಗರಂ

Monday, January 15th, 2018
pratap-simha

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌‌ ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆಯನ್ನು ರಾಜ್ಯ ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ಗೋವಾ ಸಚಿವ ವಿನೋದ್‌ ಪಾಲೇಕರ್‌‌ ಬೆಳಗಾವಿ ಜಿಲ್ಲೆಯ ಕಣಕುಂಬಿಗೆ ಭೇಟಿ ನೀಡಿದ ಬಳಿಕ ‘ಕನ್ನಡಿಗರು ಹರಾಮಿಗರು’ ಎಂದು ಉದ್ಧತಟನದ ಹೇಳಿಕೆ ಕೊಟ್ಟಿದ್ದರು. ಪಾಲೇಕರ್‌‌ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದ ಪ್ರತಾಪ್‌ ಸಿಂಹ ಕೂಡ ಗೋವಾ ಸಚಿವ […]