ಪುತ್ತೂರು: ಮತ್ತೆ ಮಂಗಳೂರು ಚಲೋ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಕರಾವಳಿ ಜನರು ಆತಂಕದಿಂದ ನೋಡುವ ಸ್ಥಿತಿ ಬದಲಾಗಬೇಕಾದರೆ ಸಿಎಂ ಬದಲಾಗಬೇಕೆಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಚಲೋದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮೈಸೂರಿನಲ್ಲಿ ಮಹಾರಾಜರ ನೆನಪಿನ ಬದಲು ಟಿಪ್ಪು ಸಂತತಿ ನೆನಪಾಗುವ ಸ್ಥಿತಿ ನಿರ್ಮಾಣವಾಗಿದೆ. ಹಿಂದೂಗಳ ಹಬ್ಬವನ್ನು ಹತ್ತಿಕ್ಕುವ ಕೆಲಸ ಸಿದ್ದರಾಮಯ್ಯ ಆಡಳಿತದಲ್ಲಿ ನಡೆದಿದೆ. ಜನರು ಎಚ್ಚೆತ್ತುಕೊಳ್ಳದಿದ್ದಲ್ಲಿ ಜಿಹಾದಿ ಮನಸ್ಥಿತಿ ಕಪಿಮುಷ್ಠಿಯೊಳಗೆ ಕರಾವಳಿ ಹೋಗಬಹುದು ಎಂದರು.
ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎ ಸರ್ಕಾರ ನಿರ್ಮಾಣವಾಗುತ್ತಿದೆ. ಈ ಬದಲಾವಣೆ ನೋಡಿದರೆ ಮುಂದಕ್ಕೆ ರಾಜ್ಯದಲ್ಲೂ ಬಿಜೆಪಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಕೊಲೆ, ದರೋಡೆ ನಡೆದಿವೆ. ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಿದೆ ಎಂದು ಹೇಳುವ ಗೃಹ ಸಚಿವ ರಾಮಲಿಂಗಾರೆಡ್ಡಿ ಹೊಸದಾಗಿ ಬಂದ ಎಂಬಿಬಿಎಸ್ ವೈದ್ಯರಂತಾಗಿದ್ದಾರೆ ಎಂದು ಟೀಕಿಸಿದರು.
Click this button or press Ctrl+G to toggle between Kannada and English