ಕಾಂಗ್ರೆಸ್ ಅಮಾಯಕ ಮುಸ್ಲಿಂ ರಿಗೆ ಚಿತಾವಣೆ ಕೊಟ್ಟು ಗಲಭೆ ಮಾಡುತ್ತಿದೆ : ಪ್ರತಾಪ್ ಸಿಂಹ

3:50 PM, Saturday, December 21st, 2019
Share
1 Star2 Stars3 Stars4 Stars5 Stars
(No Ratings Yet)
Loading...

pratapa-simhaಮೈಸೂರು : ಕೇಂದ್ರ ಸರ್ಕಾರ ಪಾಕ್, ಅಪ್ಘಾನ್, ಬಾಂಗ್ಲಾದೇಶದಲ್ಲಿ ತುಳಿತಕ್ಕೊಳಗಾದ ಅಲ್ಪ ಸಂಖ್ಯಾತರಿಗೆ ಇಲ್ಲಿನ ನಾಗರಿಕತ್ವ ನೀಡುವ ಸಲುವಾಗಿ ಸಿಎಎ ಜಾರಿಗೆ ತಂದಿದೆಯೇ ಹೊರತು ಇಲ್ಲಿರುವ ಮುಸ್ಲಿಂ ಬಂಧುಗಳನ್ನು ನೀವು ಭಾರತೀಯರೇ ಹೌದಾ ಅಲ್ಲವಾ ಎಂದು ಸಾಬೀತು ಪಡಿಸಲು, ಅಥವಾ ಇಲ್ಲಿಂದ ಹೊರದಬ್ಬಲು ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟ ಪಡಿಸಿದ್ದಾರೆ.

ಜಲದರ್ಶನಿ ಅತಿಥಿ ಗೃಹದ ಎದುರು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ತುಳಿತಕ್ಕೊಳಗಾದವರಿಗೆ ನಾವು ಆಶ್ರಯ ನೀಡುತ್ತಿದ್ದೇವೆ. ಕಾಂಗ್ರೆಸ್ ನವರು ಅದನ್ನು ಅರ್ಥಮಾಡಿಕೊಳ್ಳಿ. ತಾವು ಇತಿಹಾಸದಲ್ಲಿ ಮಾಡಿರುವ ದ್ರೋಹ ಮುಚ್ಚಲು ಕಾಂಗ್ರೆಸ್ ಅಮಾಯಕ ಮುಸ್ಲಿಂ ರಿಗೆ ಚಿತಾವಣೆ ಕೊಟ್ಟು ನಿಮ್ಮನ್ನೆಲ್ಲ ಹೊರಗಡೆ ಹಾಕ್ತಿದ್ದಾರೆ ಎಂದು ಭಯ ಸೃಷ್ಟಿಸುವ ಕೆಲಸ ಮಾಡುತ್ತಿದೆ ಮುಸಲ್ಮಾನ್ ಬಂಧುಗಳು ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ ನಿಮ್ಮನ್ನು ಯಾರೂ ದೇಶದಿಂದ ಹೊರ ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನಿನ್ನೆ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಇಬ್ಬರು ತೀರಿಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇಡೀ ರಾಜ್ಯಾದ್ಯಂತ ಗಲಭೆಯ ವಾತಾವರಣ ಸೃಷ್ಟಿಯಾಗಿದೆ. ಮಂಗಳೂರಿನಲ್ಲಿ ಇಬ್ಬರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನಲ್ಲಿ ಟೌನ್ ಹಾಲ್ ನಲ್ಲಿ ಕೂಡ ಉದ್ವಿಗ್ನ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿನಲ್ಲಿಯೂ ಅದೇ ಪ್ರಯತ್ನ ನಡೆಯುತ್ತಿದೆ. ಇಡೀ ರಾಜ್ಯ 144 ಸೆಕ್ಷನ್ ಜಾರಿಗೊಳಿಸಿದರೂ ಅದನ್ನು ಉಲ್ಲಂಘನೆ ಮಾಡಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುವ ಪ್ರಯತ್ನ ಕೂಡ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ನೇರವಾಗಿ ಕರ್ನಾಟಕದ ಕಾಂಗ್ರೆಸ್ ಪಕ್ಷ ಹೊಣೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗಲೂ ಕೂಡ ಸಚಿವರಾಗಿದ್ದ ಯು.ಟಿ.ಖಾದರ್ ಸಿಎಎ ಜಾರಿಯಾದರೆ ರಾಜ್ಯಾದ್ಯಂತ ಬೆಂಕಿ ಹೊತ್ತಿ ಉರಿಯತ್ತೆ ಎನ್ನುವ ಹೇಳಿಕೆ ನೀಡಿದ್ದು, ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದ ನಾಯಕನ ಬಾಯಲ್ಲಿ ಇಂತಹ ಮಾತುಗಳು ಬಂದರೆ ಅವರನ್ನೇ ಅನುಸರಿಸುವ ಉಳಿದವರು ಏನು ಮಾಡುತ್ತಾರೆ? ಅಂದರೆ ನಮ್ಮ ನಾಯಕರೇ ಹೇಳುತ್ತಿದ್ದಾರೆ ಹಚ್ಚಿ ಬೆಂಕಿ ಎಂದು ಚಿತಾವಣೆ ಕೊಟ್ಟ ಹಾಗೆ ಆಗತ್ತೆ. ಖಾದರ್ ಕೊಟ್ಟಿರುವ ಚಿತಾವಣೆಯಿಂದಲೇ 2ಜನ ಪ್ರಾಣ ಕಳೆದುಕೊಳ್ಳುವ ಹಾಗಾಗಿದೆ ಎಂದು ಆರೋಪಿಸಿದರು. ಮೈಸೂರಿನಲ್ಲಿಯೂ ಎಸ್ ಡಿ ಪಿಐ ನವರು 144ಸೆಕ್ಷನ್ ಇದ್ದರೂ ಕಾನೂನು ಉಲ್ಲಂಘನೆ ಮಾಡಿ ಪದೇ ಪದೇ ಮೈಸೂರು ನಗರದಲ್ಲಿ ರ್ಯಾಲಿ ತರ ಹೋಗುವಂಥದ್ದು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಮೈಸೂರಿನಲ್ಲಿ ಕೂಡ ಗಲಭೆ ಸೃಷ್ಟಿ ಮಾಡುವಂತಹ ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಾಂಗ್ರೆಸ್ ಪಕ್ಷದವರು ಅವರಿಗೆ ನಿಜವಾಗಿಯೂ ಕಾನೂನು ಸುವ್ಯವಸ್ಥೆಯ ಬಗ್ಗೆ ಕಾಳಜಿ ಇತ್ತು ಅಂತ ಆದರೆ ಯು.ಟಿ.ಖಾದರ್ ನಡೆದುಕೊಂಡಿರುವ ರೀತಿಯನ್ನು ಖಂಡಿಸಬೇಕು. ಮಂಗಳೂರಿನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿರುವುದಕ್ಕೆ ಯು.ಟಿ.ಖಾದರ್ ಅವರೇ ನೇರ ಕಾರಣ ಎಂಬ ನೈತಿಕ ಹೊಣೆಯನ್ನು ಹೊತ್ತು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನವರಿಗೆ ಕೇಳಿಕೊಳ್ಳುತ್ತೇನೆ ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆ. ಅದರಲ್ಲಿ ಸಿಎಎ, ಸಿಎಬಿ ಯಲ್ಲಿ ಏನಿದೆ? ಯಾಕೆ ಮಂಗಳೂರಿನಲ್ಲಿ ಗಲಾಟೆ ಮಾಡಬೇಕು? ಮೈಸೂರಿನಲ್ಲಿ ಯಾಕೆ ಗಲಾಟೆ ಸೃಷ್ಟಿಸೋಕೆ ಪ್ರಯತ್ನಿಸಬೇಕು? ಬೆಂಗಳೂರಿನ ಜನರಲ್ಲಿ ಯಾಕೆ ಭಯದ ವಾತಾವರಣ ಸೃಷ್ಟಿಸಬೇಕು? ಯಾರಿಗೆ ಆಶ್ರಯ ಕೊಡ್ತಿದ್ದೇವೆ? ಈ ದೇಶದಲ್ಲಿರೋರನ್ನು ಹೊರಗಡೆ ದಬ್ಬೋ ಪ್ರಯತ್ನ ನಡೆಯುತ್ತಿದೆಯಾ? ಅದಕ್ಕೂ ಸಿಎಎಗೂ ಏನು ಸಂಬಂಧವಿದೆ ಎಂದು ಕೇಳಿದರಲ್ಲದೇ ಬಾಂಗ್ಲಾ, ಪಾಕ್, ಅಪಘಾನ್ ನಲ್ಲಿ ತುಳಿತಕ್ಕೊಳಗಾಗಿ ಭಾರತಕ್ಕೆ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕಾಗಿಯೇ ಹೊರತು ಭಾರತದಲ್ಲಿದ್ದವರನ್ನು ಹೊರದಬ್ಬುವುದಕ್ಕಲ್ಲ ಎಂದು ಸ್ಪಷ್ಟಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English