ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆಯನ್ನು ರಾಜ್ಯ ಬಿಜೆಪಿ ಮುಖಂಡರು ಖಂಡಿಸಿದ್ದಾರೆ.
ಗೋವಾ ಸಚಿವ ವಿನೋದ್ ಪಾಲೇಕರ್ ಬೆಳಗಾವಿ ಜಿಲ್ಲೆಯ ಕಣಕುಂಬಿಗೆ ಭೇಟಿ ನೀಡಿದ ಬಳಿಕ ‘ಕನ್ನಡಿಗರು ಹರಾಮಿಗರು’ ಎಂದು ಉದ್ಧತಟನದ ಹೇಳಿಕೆ ಕೊಟ್ಟಿದ್ದರು. ಪಾಲೇಕರ್ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದ ಪ್ರತಾಪ್ ಸಿಂಹ ಕೂಡ ಗೋವಾ ಸಚಿವ ವಿನೋದ್ ಪಾಲೇಕರ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಕರ್ನಾಟಕ,ಕನ್ನಡ,ಕನ್ನಡಿಗರ ವಿಚಾರಕ್ಕೆ ಯಾರಿಗೂ ಪ್ರವೇಶವಿಲ್ಲ.ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ಮತ್ತು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲಿನ್ಕರ್ ಅವರು ಮಾತಾಡುವ ಭರದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ನಾನು ಅವರ ಮಾತನ್ನು ಕಟುವಾಗಿ ಖಂಡಿಸುತ್ತೇನೆ ಮತ್ತು ಈ ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ.
‘ಕರ್ನಾಟಕ, ಕನ್ನಡ, ಕನ್ನಡಿಗರ ವಿಚಾರಕ್ಕೆ ಯಾರಿಗೂ ಪ್ರವೇಶವಿಲ್ಲ. ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ಮತ್ತು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಮಾತಾಡುವ ಭರದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ನಾನು ಅವರ ಮಾತನ್ನು ಖಂಡಿಸುತ್ತೇನೆ ಮತ್ತು ಈ ಕೂಡಲೇ ಅವರು ಕನ್ನಡಿಗರ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ’ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್‌ನ ಹೊಲಸು ರಾಜಕೀಯ ಹೊರತಾಗಿಯೂ ಉದಾರತೆ ತೋರಿದ್ದರಿಂದ ಮನೋಹರ್ ಪರಿಕ್ಕರ್ ಜಿ ನಾವು ನಿಮ್ಮನ್ನು ಗೌರವಿಸುತ್ತೇವೆ. ಪದ ಬಳಕೆ ಉಚಿತ, ಆದರೆ, ಮಾತನಾಡುವಾಗ ಎಚ್ಚರದಿಂದ ಪದ ಬಳಸಬೇಕು. ಕರ್ನಾಟಕಕ್ಕೆ ಕಾಲಿಡುವ ಮುನ್ನ ಸರಿಯಾದ ಶಬ್ದ ಬಳಸಲು ನಿಮ್ಮ ಸಚಿವ ವಿನೋದ್ ಪಾಲೇಕರ್‌ಗೆ ತಿಳಿ ಹೇಳಿ. ಇಲ್ಲದಿದ್ದರೆ ನಾವೇ ಪಾಠ ಕಲಿಸುತ್ತೇವೆ’ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್‌ನಲ್ಲಿ ಗುಡುಗಿದ್ದಾರೆ.
Click this button or press Ctrl+G to toggle between Kannada and English