ಮಂಗಳೂರು : ಸಂದೀಪ್ ಪಣಿಯೂರು ನಿರ್ದೇಶನದ ಹಾರರ್ ತುಳು ಚಲನ ಚಿತ್ರ ‘ಗುಡ್ಡೆದ ಭೂತ’ ಶುಕ್ರವಾರ ನಗರದ ಪ್ರಭಾತ್ ಚಿತ್ರ ಮಂದಿರದಲ್ಲಿ ಬಿಡುಗಡೆಗೊಂಡಿತು.
ಚಲನ ಚಿತ್ರ ನಿರ್ದೇಶಕ, ಸಾಹಿತಿ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ದೀಪ ಬೆಳಗಿಸುವ ಮೂಲಕ ‘ಗುಡ್ಡೆದ ಭೂತ’ ಚಲನ ಚಿತ್ರವನ್ನು ಬಿಡುಗಡೆಗೊಳಿಸಿದರು.
ಕರಾವಳಿ ಸಿನಿಮಾ ಪ್ರೇಕ್ಷಕರು ಹಾಸ್ಯ ಪ್ರಧಾನ ಚಿತ್ರಗಳಿಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಇದರ ಜತೆಯಲ್ಲಿ ಹೊಸ ಪ್ರತಿಭೆಗಳು ಮಾಡುವ ಚಿತ್ರಗಳಿಗೂ ತುಳುವರ ಪ್ರೋತ್ಸಾಹ, ಸಹಕಾರ ಅಗತ್ಯ ಎಂದು ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.
‘ಗುಡ್ಡೆದ ಭೂತ’ ಹಾರಾರ್ ಬೇಸ್ಡ್ ಮೂವಿಯಾದರೂ ಚಿತ್ರದಲ್ಲಿ ಹೊಸತನವಿದೆ. ಉಡುಪಿ ಮೂಲದ ಬ್ಯಾನರ್ ಆಗಿರುವುದರಿಂದ ದ.ಕ ಜಿಲ್ಲೆಯವರು ಅಲ್ಲಿಯವರಿಗೂ ಸಹಕಾರ, ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ಮೂಲಕ ಹೊಸ ಪ್ರತಿಭೆಗಳು ಮತ್ತಷ್ಟೂ ಬೆಳೆದು ಬರಬೇಕು ಎಂದರು.
ಚಿತ್ರದ ನಿರ್ದೇಶಕ ಸಂದೀಪ್ ಪಣಿಯೂರು ಮಾತನಾಡಿ, ಚಿತ್ರದಲ್ಲಿ ಹಿಂದೂ- ಮುಸ್ಲಿಂ ಸಾಮರಸ್ಯದ ಕತೆಯನ್ನು ಹೇಳಲಾಗಿದೆ. ತುಳುವಿನಲ್ಲಿ ಇದೊಂದು ವಿಭಿನ್ನ ಪಾತ್ರವಾಗಿದೆ ಎಂದರು.
ಈ ಸಂದರ್ಭ ಚಿತ್ರದಲ್ಲಿ ನಟಿಸಿದ ದಿನೇಶ್ ಅತ್ತಾವರ್, ಸಂದೀಪ್ ಭಕ್ತ, ಅಶ್ವಿತಾ ನಾಯಕ್, ನಟ ಭೋಜರಾಜ ವಾಮಂಜೂರು ಮೊದಲಾದವರು ಉಪಸ್ಥಿತರಿದ್ದರು.
ಚಲನಚಿತ್ರವು ಮಂಗಳೂರಿನಲ್ಲಿ ಪ್ರಭಾತ್, ಪಿವಿಆರ್, ಬಿಗ್ ಸಿನೆಮಾ, ಸಿನಿಪೊಲಿಶ್, ಪುತ್ತೂರಿನ ಅರುಣಾ, ಸಕಲೇಶ ಪುರದಲ್ಲಿ ಜೈಮಾರುತಿ, ಕಾರ್ಕಳದ ಪ್ಲಾನೆಟ್ ನಲ್ಲಿ ಬಿಡುಗಡೆಗೊಂಡಿದೆ.
Click this button or press Ctrl+G to toggle between Kannada and English