ಮಂಗಳೂರು : ಸಂದೀಪ್ ಪಣಿಯೂರು ನಿರ್ದೇಶನದ ಹಾರರ್ ತುಳು ಚಲನ ಚಿತ್ರ ‘ಗುಡ್ಡೆದ ಭೂತ’ ಶುಕ್ರವಾರ ನಗರದ ಪ್ರಭಾತ್ ಚಿತ್ರ ಮಂದಿರದಲ್ಲಿ ಬಿಡುಗಡೆಗೊಂಡಿತು. ಚಲನ ಚಿತ್ರ ನಿರ್ದೇಶಕ, ಸಾಹಿತಿ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ದೀಪ ಬೆಳಗಿಸುವ ಮೂಲಕ ‘ಗುಡ್ಡೆದ ಭೂತ’ ಚಲನ ಚಿತ್ರವನ್ನು ಬಿಡುಗಡೆಗೊಳಿಸಿದರು. ಕರಾವಳಿ ಸಿನಿಮಾ ಪ್ರೇಕ್ಷಕರು ಹಾಸ್ಯ ಪ್ರಧಾನ ಚಿತ್ರಗಳಿಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಇದರ ಜತೆಯಲ್ಲಿ ಹೊಸ ಪ್ರತಿಭೆಗಳು ಮಾಡುವ ಚಿತ್ರಗಳಿಗೂ ತುಳುವರ ಪ್ರೋತ್ಸಾಹ, ಸಹಕಾರ ಅಗತ್ಯ ಎಂದು ಚಿತ್ರ ನಿರ್ದೇಶಕ ವಿಜಯ […]
ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್ ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಬರ್ಸ’ ತುಳು ಚಲನ ಚಿತ್ರದ ಮೂಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ ಜರಗಿತು. ಶರವು ರಾಘವೇಂದ್ರ ಶಾಸ್ತ್ರಿ ಕ್ಯಾಮರಾ ಚಾಲನೆ ಮಾಡಿದರು. ಉದ್ಯಮಿ ಮುಖೇಶ್ ಹೆಗ್ಡೆ ಎಕ್ಕಾರ್ ಕ್ಲ್ಯಾಪ್ ಮಾಡಿದರು. ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ಬೊಳ್ಳಿ ಮೂವೀಸ್ ಲಾಂಛನದಲ್ಲಿ ತಯಾರಾಗುತ್ತಿರುವ ಮೂರನೇ ಚಿತ್ರ ‘ಬರ್ಸ’ದಲ್ಲಿ ಉತ್ತಮ ಹಾಸ್ಯ ಮನರಂಜನೆಯ ಜತೆಗೆ […]
ಮಂಗಳೂರು : ‘ನಮ್ಮ ಕುಡ್ಲ’ ತುಳು ಚಲನಚಿತ್ರ ಕರಾವಳಿಯಾದ್ಯಂತ ಚಾಂದ್ರಮಾನ ಯುಗಾದಿಯ ಶುಭದಿನ ಎಪ್ರಿಲ್ 8 ಶುಕ್ರವಾರ ಮಂಗಳೂರು, ಉಡುಪಿ ಸೇರಿದಂತೆ ಒಟ್ಟು 13 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರದ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಅದಕ್ಕೂ ಮೊದಲು ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಚಿತ್ರ ತಂಡದ ನಾಯಕ, ನಾಯಕಿ ಹಾಗೂ ಇನ್ನಿತರ ನಟರು ವಾಹನ ಜಾಥ ನಡೆಸಿದರು. ಆಸರೆ ಪೌಂಡೇಶನ್ ಮಂಗಳೂರು ಇದರ ಮುಖ್ಯಸ್ಥೆ, ಡಾ. ಆಶಾ ಜ್ಯೋತಿ ರೈ ದೀಪ ಬೆಳಗಿಸುವುದರ […]
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್‌ನ 2015-18 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯ ಮುಖ್ಯಸ್ಥ ಡಾ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಚುನಾಯಿತರಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಗುರುವಪ್ಪ ಎನ್.ಟಿ.ಬಾಳೇಪುಣಿ, ಕಾರ್ಯದರ್ಶಿಯಾಗಿ ಆಗ್ನೆಲ್ ರೋಡ್ರಿಗಸ್,ಕೋಶಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ ರಾವ್ ಮತ್ತು ಆಂತರಿಕ ಲೆಕ್ಕ ಪರಿಶೋಧಕರಾಗಿ ಸುರೇಶ್ ಬೆಳಗಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಮಕೃಷ್ಣ ಆರ್, ಕಿರಣ್ ಯು ಸಿರ್ಸಿಕರ್, ಮುಹಮ್ಮದ್ ಆರೀಫ್, ಇಬ್ರಾಹಿಂ ಅಡ್ಕಸ್ಥಳ, ಆತ್ಮ ಭೂಷಣ್, ರಾಜೇಶ್ ಶೆಟ್ಟಿ […]