ಕರಾವಳಿ ಜಿಲ್ಲೆಯಲ್ಲಿ ಕೋಮುಸಾಮರಸ್ಯಕ್ಕೆ ಸಾಕ್ಷಿಯಾದ ಉಳ್ಳಾಲದ ಬ್ರಹ್ಮಕಲಶೋತ್ಸವ ಮೆರವಣಿಗೆ

11:50 AM, Saturday, January 7th, 2017
Share
1 Star2 Stars3 Stars4 Stars5 Stars
(No Ratings Yet)
Loading...

Ullalaಮಂಗಳೂರು: ಕೋಮು ಗಲಭೆಯಿಂದಲೇ ಸುದ್ದಿಯಲ್ಲಿರುವ ಕರಾವಳಿ ಜಿಲ್ಲೆ ಇದೀಗ ಕೋಮುಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೌದು, ಉಳ್ಳಾಲದ ಬ್ರಹ್ಮಕಲಶೋತ್ಸವ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ, ಭಕ್ತರಿಗೆ ತಂಪುಪಾನೀಯ ಪೂರೈಸಿದರು.

ಉಳ್ಳಾಲದ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ತೊಕ್ಕೊಟ್ಟಿನಿಂದ ಕ್ಷೇತ್ರದವರೆಗೆ ಹಸಿರುವಾಣಿ ಹೊರೆಕಾಣಿಕೆ ವೈಭವದ ಮೆರವಣಿಗೆ ನಡೆಯಿತು.

ಈ ವೇಳೆ ಮೆರವಣಿಗೆಯನ್ನು ಮಾಸ್ತಿಕಟ್ಟೆಯಲ್ಲಿ ಮುಸ್ಲಿಂ ಬಾಂಧವರು ಸ್ವಾಗತಿಸಿದರು. ಜೊತೆಗೆ ತಂಪುಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿದ್ದರು.

Ullalaಜನವರಿ 6 ರಿಂದ 12ರ ವರೆಗೆ ನಡೆಯಲಿರುವ ಉಳ್ಳಾಲ್ತಿ ಧರ್ಮ ಅರಸರ ನಡಾವಳಿ ಮಹೋತ್ಸವ ಹಾಗೂ ಅದಕ್ಕೂ ಮುನ್ನ ನಡೆಯಲಿರುವ ಬ್ರಹ್ಮಕಲಶೋತ್ಸವ ಅಂಗವಾಗಿ ತೊಕ್ಕೊಟ್ಟು ಜೈವೀರಮಾರುತಿ ವ್ಯಾಯಾಮ ಶಾಲೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಉಳ್ಳಾಲ ಉಮಾಪುರಿಯ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್ ಇದಕ್ಕೆ ಚಾಲನೆ ನೀಡಿದರು.

ಉಳ್ಳಾಲ ನಗರಸಭೆ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮಾತನಾಡಿ, ಉಳ್ಳಾಲದಲ್ಲಿ ಎಲ್ಲರೂ ಜೊತೆಯಾಗಿ ಬಾಳುತ್ತಿದ್ದೇವೆ. ಉಳ್ಳಾಲದಲ್ಲಿ ಕೆಡುಕು ಉಂಟು ಮಾಡುವವರಿಗೆ ಈ ಒಂದು ಘಳಿಗೆ ತಕ್ಕ ಪಾಠವಾಗಿದೆ. ಮುಂದೆಯೂ ಹೀಗೆ ಬಾಳುತ್ತೇವೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English