ಡಿಜಿಟಲ್ ಪಾವತಿಗಾಗಿರುವ ಡಿಜಿಧನ್ ಮೇಳದ 32ನೇ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಚಾಲನೆ

12:09 PM, Thursday, January 26th, 2017
Share
1 Star2 Stars3 Stars4 Stars5 Stars
(No Ratings Yet)
Loading...

Dijidhan-Melaಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಡಿಜಿಟಲ್ ಪಾವತಿಗಾಗಿರುವ ಡಿಜಿಧನ್ ಮೇಳದ 32ನೇ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಚಾಲನೆ ದೊರೆತಿದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮೇಳವನ್ನು ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಅವರು, ಭಾರತವನ್ನು ವಿಶ್ವದಲ್ಲೇ ಪರಿಣಾಮಕಾರಿ, ಪ್ರಾಮಾಣಿಕ ಹಾಗೂ ಉತ್ತರದಾಯಿ ದೇಶವನ್ನಾಗಿ ಮಾಡುವ ಸಲುವಾಗಿ ಡಿಜಿಟಲ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇಡೀ ದೇಶವನ್ನು ಬದಲಾವಣೆಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ದೊಡ್ಡ ನೋಟ ರದ್ಧತಿಯಿಂದ ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ, ವೇಶ್ಯಾವಾಟಿಕೆ ಹಾಗೂ ಇನ್ನಿತರ ಮಾನವ ಕಳ್ಳಸಾಗಾಣಿಕೆಗಳಿಗೂ ತಡೆಯಾಗಿದೆ. ದಲ್ಲಾಳಿಗಳು ಬಾಂಗ್ಲಾದೇಶ ಹಾಗೂ ಈಶಾನ್ಯ ಭಾಗಗಳಿಂದ ಯುವತಿಯರನ್ನು ಸಾಗಾಣಿಕೆ ಮಾಡುತ್ತಿದ್ದರು. ಇಲ್ಲೆಲ್ಲಾ 500-1000 ರೂ. ನೋಟುಗಳ ಮೂಲಕ ವ್ಯವಹಾರ ಕುದುರಿಸಲಾಗುತ್ತಿತ್ತು. ಇದೀಗ ಇವೆಲ್ಲವೂ ಕಡಿಮೆಯಾಗಿದೆ ಎಂದರು.

ಪ್ರತಿಯೊಬ್ಬ ಅಂಗಡಿ ಮಾಲೀಕರೂ ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅಷ್ಟೇ ಏಕೆ ದೇವಸ್ಥಾನಗಳಲ್ಲೂ ಡಿಜಿಟಲ್ ಪಾವತಿಯಾಗುತ್ತಿರುವುದು ಈ ಯೋಜನೆಗೆ ಸಂದ ಯಶಸ್ಸು. ದೇಶದಲ್ಲಿ 125 ಕೋಟಿ ಜನಸಂಖ್ಯೆ ಇದ್ದರೂ ಮೂರು ಕೋಟಿ ಜನ ಮಾತ್ರವೇ ಆದಾಯ ತೆರಿಗೆ ಪಾವತಿಸುತ್ತಿದ್ದರು. ನೋಟು ರದ್ಧತಿಯ ಬಳಿಕ 36 ಸಾವಿರ ಕೋಟಿ ರೂ. ದೇಶಕ್ಕೆ ಉಳಿತಾಯವಾಗಿದೆ ಎಂದರು.

ಇದಕ್ಕೂ ಮುನ್ನ ಇಲ್ಲಿನ ಮಳಿಗೆಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಇದೇ ವೇಳೆ ನಗದು ರಹಿತ ವ್ಯವಹಾರ ಮಾಡಿದ ಲಕ್ಕಿ ಗ್ರಾಹಕರನ್ನು ಆಯ್ಕೆ ಮಾಡಲಾಯಿತು. ಅದೃಷ್ಟವಂತ ಗ್ರಾಹಕರಿಗೆ ಹಾಗೂ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಸ್ಲೋಗನ್ ಬರವಣಿಗೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English