ಸೋನಿಯಾ ಗಾಂಧಿ ಗುಣಮುಖರಾಗಲು ಪೂಜಾರಿ ನೇತೃತ್ವದಲ್ಲಿ ಉರುಳು ಸೇವೆ

3:46 PM, Sunday, August 7th, 2011
Share
1 Star2 Stars3 Stars4 Stars5 Stars
(No Ratings Yet)
Loading...

Janardhana Poojary/ಪೂಜಾರಿ ನೇತೃತ್ವದಲ್ಲಿ ಉರುಳು ಸೇವೆ

ಮಂಗಳೂರು : ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ವಿಶೇಷ ಪೂಜೆ ಹಾಗೂ ಉರುಳು ಸೇವೆ ಜರಗಿತು. ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ವಿಶೇಷ ಪೂಜೆ ಹಾಗೂ ಉರುಳು ಸೇವೆ ಜರಗಿತು.

ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ನ್ಯೂಯಾರ್ಕ್‌ ಸ್ಲೋವನ್‌ ಕೆಟರಿಂಗ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸೋನಿಯಾ ಆವರು ಇನ್ನೂ ಒಂದು ತಿಂಗಳು ಚಿಕಿತ್ಸೆ ಪಡೆಯಬೇಕು. ಅವಶ್ಯ ಬಿದ್ದರೆ ಮುಂದೆ ರೇಡಿಯೋ ಥೆರಪಿ ಪ್ರಯೋಗಿಸಬಹುದು ಎಂದು ಆಂಧ್ರಪ್ರದೇಶ ಮೂಲದ ವಿಶ್ವವಿಖ್ಯಾತ ಕ್ಯಾನ್ಸರ್‌ ತಜ್ಞ ಡಾ. ದತ್ತಾತ್ರೇಯುಡು ನೋರಿ ಹೇಳಿದ್ದಾರೆ.

ಸೋನಿಯಾಗೆ ಗರ್ಭಕೋಶದ ಕ್ಯಾನ್ಸರ್‌?: ಸೋನಿಯಾ ಅವರಿಗೆ ಗರ್ಭಕೋಶ (ಸರ್ವೈಕಲ್‌) ಕ್ಯಾನ್ಸರ್‌ ಆಗಿದ್ದು, ಮಾರಕ ಕಾಯಿಲೆಯನ್ನು ಮುಚ್ಚಿಟ್ಟಿದ್ದು ಏಕೆ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದೆ. ಕಳೆದ 8 ತಿಂಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಕಾಂಗ್ರೆಸ್‌ ಮೂಲಗಳಾಗಲಿ, ಗಾಂಧಿ ಕುಟುಂಬವಾಗಲಿ ಸೋನಿಯಾಗೆ ಏನಾಗಿದೆ ಎಂಬುದನ್ನು ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ.

ಕ್ಯಾನ್ಸರ್‌ ತಗುಲಿದೆ ಎಂಬುದು ಜಗಜ್ಜಾಹೀರಾದ ನಂತರ, ಸೋನಿಯಾ ಸರ್ಜರಿ ಯಶಸ್ವಿಯಾಗಿದ್ದನ್ನು ಮಾತ್ರ ಸ್ಪಷ್ಟಪಡಿಸಲಾಗಿತ್ತು. ಸೋನಿಯಾರ ಆರೋಗ್ಯದ ಬಗ್ಗೆ ಅನೇಕ ಊಹಾಪೋಹಗಳು ಎದ್ದಿವೆ. ಮುಂದಿನ ದಿನಗಳಲ್ಲಿ ಸೋನಿಯಾ ಎಷ್ಟರ ಮಟ್ಟಿಗೆ ರಾಜಕೀಯದಲ್ಲಿ ಸಕ್ರಿಯರಾಗಿರುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.

ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಳು ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಮೃತ್ಯುಂಜಯ ಹೋಮ ನಡೆಸಲಾಯಿತು. ಬಳಿಕ ಹರಿಕೆ ರೂಪದಲ್ಲಿ ಬೆಳ್ಳಿ ರಥ ಉತ್ಸವ ನೆರವೇರಿತು. ಗೋಕರ್ಣನಾಥ ಹಾಗೂ ಅನ್ನಪೂರ್ಣೇಶ್ವರಿ ದೇವರು ಆರೂಢರಾಗಿದ್ದ ಬೆಳ್ಳಿರಥ ಸಾಗುತ್ತಿದ್ದಂತೆಯೇ ಅದರ ಮುಂದೆ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ದೇವಾಲಯದ ಸುತ್ತ ಉರುಳು ಸೇವೆ ನಡೆಸಿದರು. ಇವರ ಜೊತೆ ನಟ ನಂಜುಂಡಿ, ಅಭಯಯಚಂದ್ರ ಜೈನ್, ಯು. ಟ. ಖಾದರ್, ಕೆ. ಪಿ. ಸಿ. ಸಿ. ಕಾರ್ಯದರ್ಶಿ ಐವನ ಡಿ ಸೋಜ, ಹರೀಶ್ ಕುಮಾರ, ಮೊಯಿದಿನ್ ಬಾವ ಮೊದಲಾದವರು ಉಪಸ್ಥಿತರಿದ್ದರು.

ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಳು ರಾಷ್ಟ್ರ ಹಾಗೂ ರಾಜ್ಯದ ಅನೇಕ ನಾಯಕರು ಶುಭ ಹಾರೈಸಿದ್ದಾರೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English