ಮಂಗಳೂರು: ಮನೆಗೆ ನುಗ್ಗಿದ ತಂಡವೊಂದು ನಾಲ್ಕು ಮಂದಿಗೆ ಹಲ್ಲೆಗೈದ ಘಟನೆ ಬೆಂಗ್ರೆಯಲ್ಲಿ ನಡೆದಿದ್ದು, ಹಲ್ಲೆಗೊಳಗಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ಸಾಗಿಸುವ ದಾರಿ ನಡುವೆ ಅರ್ಧದಲ್ಲಿಯೇ ಕೆಳಗಿಳಿಸಿ ಪೊಲೀಸರು ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗ್ರೆಯ ಮಹಮ್ಮೂದ್, ಫಮೀನಾ ದಂಪತಿ ಹಾಗೂ ಮಕ್ಕಳಾದ ಸಲ್ಮಾನ್ ಫಾರಿಶ್, ಸಮ್ನಾನ ಎಂಬವರ ಮೇಲೆ ತಂಡವೊಂದು ಮಾರಾಣಾಂತಿಕ ಜಾಗದ ವಿವಾದದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೆಂಗ್ರೆಯ ಅನ್ವರ್ ಹುಸೈನ್, ಮುಮ್ತಾಝ್, ಶಮೀಮಾ, ಹಂಝ ಎಂಬವರು ಮಹಮ್ಮೂದ್ ಮನೆಗೆ ನುಗ್ಗಿ ಮಾರಾಣಾಂತಿಕ ಹಲ್ಲೆ ನಡೆಸಿ, ಮನೆಯಲ್ಲಿದ್ದ ಪತ್ನಿ ಫಮೀನಾ ಹಾಗೂ ಮಕ್ಕಳಾದ ಸಲ್ಮಾನ್ ಫಾರಿಷ್ ಹಾಗೂ ಶಮ್ಮಾನ್ ಮೇಲೂ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾಗಿ ಗಾಯಗೊಂಡವರನ್ನು ಸ್ಥಳೀಯರ ನೆರವಿನಿಂದ ಪೊಲೀಸರು ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಕೂಳೂರು ಬಳಿ ಗಾಯಾಳುಗಳನ್ನು ಕೆಳಗಿಳಿಸಿ ನಮಗೆ ಬೇರೆ ತುರ್ತು ಕೆಲಸವಿದೆ. ರಿಕ್ಷಾದಲ್ಲಿ ಆಸ್ಪತ್ರೆಗೆ ಹೋಗಿ ಎಂದು ಹೇಳಿ ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರ ವರ್ತನೆಯನ್ನು ಮಹಮ್ಮೂದ್ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಡಿವೈಎಫ್ಐ ಕಾರ್ಯಕರ್ತರು ಮಹಮ್ಮೂದ್ ಅವರ ಮನವೊಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Click this button or press Ctrl+G to toggle between Kannada and English