ಮನೆಗೆ ನುಗ್ಗಿ ನಾಲ್ಕು ಮಂದಿಗೆ ಹಲ್ಲೆಗೈದ ತಂಡ, ಪೊಲೀಸರು ಗಾಯಾಳುಗಳನ್ನು ದಾರಿಯಲ್ಲಿಯೇ ಬಿಟ್ಟು ಹೋದರು

Tuesday, February 7th, 2017
Bengre Dispute

ಮಂಗಳೂರು: ಮನೆಗೆ ನುಗ್ಗಿದ ತಂಡವೊಂದು ನಾಲ್ಕು ಮಂದಿಗೆ ಹಲ್ಲೆಗೈದ ಘಟನೆ ಬೆಂಗ್ರೆಯಲ್ಲಿ ನಡೆದಿದ್ದು, ಹಲ್ಲೆಗೊಳಗಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ಸಾಗಿಸುವ ದಾರಿ ನಡುವೆ ಅರ್ಧದಲ್ಲಿಯೇ ಕೆಳಗಿಳಿಸಿ ಪೊಲೀಸರು ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗ್ರೆಯ ಮಹಮ್ಮೂದ್, ಫಮೀನಾ ದಂಪತಿ ಹಾಗೂ ಮಕ್ಕಳಾದ ಸಲ್ಮಾನ್ ಫಾರಿಶ್, ಸಮ್ನಾನ ಎಂಬವರ ಮೇಲೆ ತಂಡವೊಂದು ಮಾರಾಣಾಂತಿಕ ಜಾಗದ ವಿವಾದದ ಹಿನ್ನೆಲೆಯಲ್ಲಿ  ಹಲ್ಲೆ ನಡೆಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೆಂಗ್ರೆಯ ಅನ್ವರ್ ಹುಸೈನ್, ಮುಮ್ತಾಝ್, ಶಮೀಮಾ, ಹಂಝ ಎಂಬವರು […]

ಕೌಟುಂಬಿಕ ಆಸ್ತಿ ವಿವಾದ ; ಪಾಲಿಕೆಯ ವಾಹನ ಚಾಲಕನಿಗೆ ಮಾರಣಾಂತಿಕ ಹಲ್ಲೆ

Sunday, July 21st, 2013
MCC driver

ಮಂಗಳೂರು : ಕೌಟುಂಬಿಕ ಆಸ್ತಿ ವಿವಾದದ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವಾಹನ ಚಾಲಕ ಅಶೋಕನಗರದ ರೋಹಿತ್‌ (26) ಅವರನ್ನು ಶನಿವಾರ ಬೆಳಗ್ಗೆ ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ರೋಹಿತ್‌ ಅವರು ಬೆಳಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕರೆ ತರಲು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿದ ನಾಲ್ವರು ಅಪರಿಚಿತರು ಲೇಡಿಹಿಲ್‌ನಲ್ಲಿ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದರು  ಎಂದು ಆರೋಪಿಸಲಾಗಿದೆ. ಗಾಯಾಳು ರೋಹಿತ್‌ ಅವರನ್ನು ಆಸ್ಪತ್ರೆಗೆ […]

ಆಸ್ತಿ ವಿವಾದ : ಚಿಕ್ಕಪ್ಪನಿಂದ ಕೊಲೆಯಾದ ಯುವಕ

Wednesday, April 3rd, 2013
Sullia Youth killed

ಸುಳ್ಯ : ಆಲೆಟ್ಟಿ ಗ್ರಾಮದ ಬೊಳ್ಳೂರು ಎಂಬಲ್ಲಿ ಆಸ್ತಿ ವಿವಾದದಿಂದಾಗಿ ಯುವಕನೋರ್ವ ಆತನ ಚಿಕ್ಕಪ್ಪನಿಂದಲೇ ಕೊಲೆಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೊಳ್ಳೂರು ಬೆಳ್ಳಂಪಾರೆಯ ಅಪ್ಪಯ್ಯ ನಾಯ್ಕ ಎಂಬವರ ಪುತ್ರ ಸದಾಶಿವ ನಾಯ್ಕ(೨೬) ಮೃತ ವ್ಯಕ್ತಿ ಯಾಗಿದ್ದು, ಈತ  ಹಾಗು ಈತನ ಚಿಕ್ಕಪ್ಪ ನಾರಾಯಣ ನಾಯ್ಕ ಈ ಇಬ್ಬರ ಕುಟುಂಬದ ನಡುವೆ ಆಸ್ತಿ ವಿಷಯವಾಗಿ ಆಗಾಗ್ಗೆ  ಕಲಹ ನಡೆಯುತ್ತಿದ್ದು ನಿನ್ನೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆ ಆರೋಪಿನಾರಾಯಣ ನಾಯ್ಕ ಸುಳ್ಯ ರೋಟರಿ ಶಾಲೆಯಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ […]