ಡ್ರಗ್ಸ್‌ ಮಾಫಿಯಾ ಹತ್ತಿಕ್ಕಲು ಪೊಲೀಸ್‌ ಆಯುಕ್ತರಿಗೆ ಹಿಂದೂ ಸಂಘಟನೆಗಳ ಮನವಿ.

12:35 PM, Wednesday, August 10th, 2011
Share
1 Star2 Stars3 Stars4 Stars5 Stars
(No Ratings Yet)
Loading...

VHP-Bajrangadal/ವಿಶ್ವ ಹಿಂದು ಪರಿಷದ್‌ ಹಾಗೂ ಬಜರಂಗದಳ

ಮಂಗಳೂರು : ವಿಶ್ವಹಿಂದು ಪರಿಷದ್‌ ಹಾಗೂ ಬಜರಂಗದಳ ಮಂಗಳವಾರ ದ.ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್‌ ಮಾಫಿಯಾವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿ ಮಂಗಳೂರು ಪೊಲೀಸ್‌ ಆಯುಕ್ತರಿಗೆ ಮನವಿ ನೀಡಿತು. .

ಇತ್ತೀಚೆಗೆ ಕಾಲೇಜು ವಿದ್ಯಾರ್ಥಿನಿಯೋರ್ವಳು ಇದಕ್ಕೆ ಬಲಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಡ್ರಗ್ಸ್‌ ಮಾಫಿಯಾದಲ್ಲಿ ಕಾಂಗ್ರೆಸ್‌ ಮುಖಂಡ ಅಶ್ರಫ್‌ ಅವರ ಪುತ್ರ ಆರಫನ ಕೈವಾಡವಿದ್ದು, ಆತನನ್ನು ಹಾಗೂ ಆತನ ಸ್ನೇಹಿತರನ್ನು ಬಂಧಿಸಿ ಡ್ರಗ್ಸ್‌ ಮಾಫಿಯಾವನ್ನು ಹತ್ತಿಕ್ಕಬೇಕು, ಡ್ರಗ್ಸ್‌ ಚಟಕ್ಕೆ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಲಿಯಾಗಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲವೊಂದು ಕಾರ್ಯಾಚರಿಸುತ್ತಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ಪೊಲೀಸ್‌ ಆಯುಕ್ತರು ಕಾನೂನು ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ವಿಶ್ವ ಹಿಂದು ಪರಿಷದ್‌ ಹಾಗೂ ಬಜರಂಗದಳ ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English