ಮಂಗಳೂರು ಮೂಲದ ಸೋದರರಿಬ್ಬರು ಹಾಸನದಲ್ಲಿ ಆತ್ಮ ಹತ್ಯೆ

11:40 PM, Tuesday, March 7th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

youth diedಮಂಗಳೂರು  : ವಿಪರೀತ ಸಾಲ ಮಾಡಿ ತೀರಿಸಲಾಗದೆ ಮಂಗಳೂರಿನ ಸೋದರರಿಬ್ಬರೂ ಹಾಸನದ ವಸತಿಗೃಹವೊಂದರಲ್ಲಿ ನೇಣಿಗೆ ಶರಣಾದ ಘಟನೆ ಮಂಗಳವಾರ ಬೆಳಿಗ್ಗೆ  ನಡೆದಿದೆ.

ಆತ್ಮ ಹತ್ಯೆ ಮಾಡಿಕೊಂಡವರನ್ನು ಮಂಗಳೂರು ಮೂಲದ ಲೋಕನಾಥ್ (43) ಹಾಗೂ ಪುರುಷೋತ್ತಮ್ (46) ಎನ್ನಲಾಗಿದ್ದು,  ಇವರು ನಗರದ ಬಿ.ಎಂ. ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ನೇಣಿಗೆ ಶರಣಾದ ದುರ್ದೈವಿಗಳಾಗಿದ್ದಾರೆ.

ಇಬ್ಬರು ಸಹೋದರರು ಕಳೆದ ನಾಲ್ಕು ದಿನಗಳ ಹಿಂದೆ ವಸತಿಗೃಹವೊಂದರಲ್ಲಿ ರೂಂನ್ನು ಬಾಡಿಗೆಗೆ ಪಡೆದಿದ್ದು, ಮಾರ್ಚ್ 5ರ ವರೆಗೂ ಇಬ್ಬರೂ ತಿರುಗಾಡಿಕೊಂಡು ಇದ್ದರು. ನಂತರದಲ್ಲಿ ಇಬ್ಬರೂ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ವಸತಿಗೃಹ ಸಿಬ್ಬಂದಿ ಈ ರೂಂನ ಬಳಿ ಹೋಗುವಾಗ ಕೆಟ್ಟ ವಾಸನೆ ಬಂದಿದೆ. ನಂತರ ಅನುಮಾನದಲ್ಲಿ ಬಾಗಿಲ ಬಳಿ ಬಂದಾಗ ವಾಸನೆ ಮತ್ತಷ್ಟು ಹೆಚ್ಚಾಗಿರುವುದು ಕಂಡು ಬಂದಿತು.

ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಅವರು ವಸತಿ ಗೃಹದ ಬಾಗಿಲು ತೆರೆದು ನೋಡಿದಾಗ ಇಬ್ಬರು ಒಬ್ಬರಿಗೊಬ್ಬರೂ ತಬ್ಬಿಕೊಂಡಂತೆ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.

ಸಹೋದರರು ಮಂಗಳೂರಿನ ವೆಲೆನ್ಸಿಯಾಯದಲ್ಲಿ ಮೀನಿನ ಅಂಗಡಿ ಇರಿಸಿದ್ದು. ಚಿಟ್ ಫಂಡ್ ವ್ಯವಹಾರದಲ್ಲಿ ತೊಡಗಿದ್ದರು. ಕೋಟ್ಯಂತರ ರೂಪಾಯಿಯ ಚಿಟ್ ಫಂಡ್ ನ್ನು ನಗದೀಕರಿಸಿದ್ದು  ಅದನ್ನು ಕಟ್ಟಲಾಗದೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರೂ ಕೋಟ್ಯಂತರ ರೂಪಾಯಿಯ ಸಾಲವನ್ನು  ಮಾಡಿದ್ದಾರೆ ಎಂದು  ಶಂಕಿಸಲಾಗಿದೆ.

ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English