ಜಿಲ್ಲೆಯ ವಿಶಿಷ್ಟ ಆಚರಣೆ ‘ಪೊಕರೆ ಕಂಬಲ ಕೋರಿ’ – ಭತ್ತದ ಕೃಷಿ ಉತ್ಸವಗಳಿಗೆ ಆರ್ಥಿಕ ನೆರವು ನೀಡಲು ಒತ್ತಾಯ.

8:44 PM, Tuesday, March 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Tuluvere Koota ಮಂಗಳೂರು : ‘ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಆಚರಣೆ ‘ಪೊಕರೆ ಕಂಬಲ ಕೋರಿ’ ಮತ್ತು ದೈವಾರಾಧನೆಗೆ ಸಂಬಂಧಪಟ್ಟು ವಿವಿಧ ಸ್ತರಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವವರಿಗೆ ಮಾಸಿಕ ವೇತನ ನೀಡಲು  ಮಂಗಳೂರಿನ ಕೆ.ಜಿ ಜಿಲ್ಲಾಧಿಕಾರಿ ಜಗದೀಶ್ ಮೂಲಕ ಮಂಗಳವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಪತ್ರವನ್ನು ತುಳುವೆರೆ ಜಾನಪದ ಕೂಟದ ಸದಸ್ಯರು ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಎಂದರೆ ಕೇವಲ ಕೋಣದ ಓಟವಲ್ಲ, ಅದು ಊರಿನ ಕೃಷಿ ಉತ್ಸವ ಪೂಕರೆ ಆಚರಣೆಯ ಒಂದು ಭಾಗ. ಊರಿನ ಭತ್ತದ ಕೃಷಿಕರೆಲ್ಲರೂ ವರ್ಷಕ್ಕೊಂದು ಸಾರಿ ಈ ಉತ್ಸವವನ್ನು ಆಚರಿಸುತ್ತಾರೆ. ತುಳು ಜನಾಂಗ ಮೂಲತಃ ಪ್ರಕೃತಿಯ ಆರಾಧಕರು, ದಟ್ಟವಾದ ಕಾಡುಗಳು, ವಿಶಾಲ ಸಮುದ್ರದ ನಡುವಿನ ಭೂಭಾಗದಲ್ಲಿ ಕೃಷಿಯನ್ನು ಜೀವನದ ಅಗತ್ಯವಾಗಿ ಕಂಡುಕೊಂಡು ತಾವು ನಂಬಿದ ಶಕ್ತಿಗಳೊಂದಿಗೆ ನಾಗಾರಾಧನೆ, ದೈವಾರಾಧನೆ, ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಸೇರಿಕೊಂಡು ಊರಿನ ಒಳಿತು ಕೆಡಕುಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು ಕಂಬಳ ಕೋರಿ ಉತ್ಸವವನ್ನು ಆಚರಿಸುತ್ತಿದ್ದರು. ಇಂದು ಭತ್ತಕ್ಕೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗದೆ ಇರುವುದು ಕೃಷಿ ಕೆಲಸಗಾರರಿಗೆ ದುಬಾರಿ ವೇತನ ನೀಡುವ ಅನಿವಾರ್ಯತೆ ಉಂಟಾಗಿರುವುದು ಭತ್ತದ ಕೃಷಿಯನ್ನು ನಷ್ಟದ ವೃತ್ತಿಯನ್ನಾಗಿಸಿದೆ. ಈ ನಡುವೆ ಭತ್ತದ ಗದ್ದೆಗಳಿಗೆ ಮಣ್ಣು ತುಂಬಿಸಿ ಕಂಕ್ರೀಟ್ ಕಟ್ಟಡಗಳು, ಕಾರ್ಖಾನೆಗಳು ತಲೆ ಎತ್ತಿವೆ. ಈ ಕಾರಣದಿಂದ ಭತ್ತದ ಕೃಷಿ ಇಲ್ಲವಾಗಿ ಪೂಕರೆ ಆಚರಣೆಗಳು ನಾಶದ ಅಂಚಿಗೆ ತಲುಪಿದೆ. ಅಳಿದುಳಿದ ತುಳುವರ ಮೂಲ ಸಂಸ್ಕøತಿ ಆಚರಣೆಯಾದ ಪೂಕರೆ ಆಚರಣೆಗೆ ದೊಡ್ಡ ಮೊತ್ತದ ಹಣ ಖರ್ಚಾಗುತ್ತಿದ್ದು ಈ ಹಣವನ್ನು ಹೊಂದಿಕೆ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಕಾರ ಪ್ರತೀ ವರ್ಷ ಸಾಂಸ್ಕøತಿಕ ಇಲಾಖೆಯ ಅಡಿಯಲ್ಲಿ ವಾರ್ಷಿಕ ಅನುದಾನ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ.

Tuluvere Koota ಇದೇ ರೀತಿಯಲ್ಲಿ ದೈವಾರಾಧನೆಯ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಅರೆಹೊಟ್ಟಯ ಕೆಲಸಗಾರರಿಗೂ ಕೇರಳ ಸರಕಾರದ ಮಾದರಿಯಲ್ಲಿ ತಿಂಗಳ ಮಾಸಿಕ ಗೌರವ ಧನ ನೀಡಬೇಕೆಂದು ತುಳುವರ ಜನಪದ ಕೂಟ ಒತ್ತಾಯಿಸುತ್ತಿದೆ. ತುಳು ಸಂಘಟಕ, ಹರಿಕೃಷ್ಣ ಪುನರೂರು, ತುಳುವರ ಜನಪದ ಕೂಟದ ‘ಪೂಕರೆ ಕಂಬಳ ಉತ್ಸವ’ ಸಂಚಾಲಕ ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ತುಳುವರೆ ಜನಪದ ಕೂಟದ ಮುಖಂಡರಾದ ರಾಮಕೃಷ್ಣ ಕುಲಾಲ್ ಕುಕ್ಕುದಕಟ್ಟೆ, ವಿಶ್ವಜಿತ್ ಶೆಟ್ಟಿ ಎಕ್ಕಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಆಳ್ವ, ಪರಿಸರ ಹೋರಾಟಗಾರ, ಶಶಿಧರ್ ಶೆಟ್ಟಿ ಇದ್ದರು.

ಮಂಗಳೂರು ಜಿಲ್ಲಾಧಿಕಾರಿಗಳ ಮುಖಾಂತರ ತುಳುವರ ಜನಪದ ಕೂಟ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English