ಮಂಗಳೂರು : ದೀಪಾವಳಿ ಹಬ್ಬಕ್ಕಾಗುವಾಗ ಚಿನ್ನದ ಬೆಲೆ 10 ಗ್ರಾಂಗೆ 27,000 ರೂ. ಆಗಲಿದೆ. ಶೇರು ಮಾರುಕಟ್ಟೆ ಕುಸಿಯುತ್ತಿದ್ದರೂ ಚಿನ್ನ ಮಾತ್ರ ಬೆಲೆಯೇರಿಕೆಯಲ್ಲಿ ನಾಗಾಲೋಟದಲ್ಲಿ ತೊಡಗಿರುವುದರಿಂದ ಇನ್ನೆರಡು ತಿಂಗಳಲ್ಲಿ ಅದು 27,000 ರೂ. ದಾಟಿದರೂ ಆಶ್ಚರ್ಯವಿಲ್ಲ ಎಂದು ಮಾರುಕಟ್ಟೆ ಪಂಡಿತರು ಹೇಳಿದ್ದಾರೆ.
ಜಾಗತಿಕ ಪರಿಸ್ಥಿತಿ ಇದೇ ರೀತಿ ದೃಢವಾಗಿದ್ದರೆ ದೀಪಾವಳಿ ಹಬ್ಬಕ್ಕಾಗುವಾಗ ಚಿನ್ನ 27,000 ರೂ.ಗೆ ತಲುಪುತ್ತದೆ. ಕೋಲ್ಕತಾದಲ್ಲಿ ಮಂಗಳವಾರ ಮತ್ತೆ ರೂ. 160 ಏರಿಕೆಯಾಗಿ 25,995 ರೂ. ತಲುಪಿದ್ದರೆ ಚೆನ್ನೈಯಲ್ಲಿ 395 ರೂ. ಏರಿಕೆಯಾಗಿ 24,930 ರೂ.ಗೇರಿದೆ. ಏರಿಕೆಯ ಗತಿ ಇದೇ ರೀತಿ ಮುಂದುವರಿದರೆ ಚಿನ್ನ ಸಾರ್ವಕಾಲಿಕ ದಾಖಲೆಯನ್ನು ಮಾಡಲಿದೆ ಎಂದು ಬಾಂಬೆ ಬುಲಿಯನ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಹುಂಡಿಯಾ ಹೇಳಿದ್ದಾರೆ.
ದಿಲ್ಲಿಯಲ್ಲಿ 25,230 ರೂ. ಮತ್ತು ಮುಂಬಯಿಯಲ್ಲಿ 24,930 ರೂ.ಗೆ ಬಂದು ನಿಂತಿದೆ. ದಿಲ್ಲಿಯಲ್ಲಿ ಕಳೆದ ಆಗಸ್ಟ್ 2ರಿಂದೀಚೆಗೆ ಚಿನ್ನದ ಬೆಲೆಯಲ್ಲಿ 1,540 ರೂ. ಏರಿಕೆಯಾಗಿದೆ. ಚಿನ್ನ ಹಠಾತ್ 25,000 ರೂ. ಗಡಿ ದಾಟಿರುವುದು ಆಶ್ಚರ್ಯವುಂಟು ಮಾಡಿದೆ. ಆದರೆ ಬೆಲೆಯೇರಿಕೆಯಿಂದಾಗಿ ಬೇಡಿಕೆ ಕುಸಿಯುವ ಭೀತಿ ಎದುರಾಗಿದೆ. ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದರೆ ಚಿನ್ನದ ಆಮದು ಕೂಡ ಶೇ. 20ರಷ್ಟು ಕುಸಿಯಬಹುದು ಎಂದು ಹುಂಡಿಯಾ
Click this button or press Ctrl+G to toggle between Kannada and English
December 16th, 2011 at 07:41:06
1yQDLW pvjhxsggqcuz, [url=http://ougeaeoxbsjr.com/]ougeaeoxbsjr[/url], [link=http://jpncshewwsys.com/]jpncshewwsys[/link], http://drcxvozxlyfo.com/