ಆಟೋ ಓಡಿಸುವ ಮೂಲಕ ಗಮನಸೆಳೆದ ಮೇಯರ್ ಕವಿತಾ ಸನಿಲ್

8:11 PM, Saturday, April 1st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Kavitha Sanil Auto driverಮಂಗಳೂರು: ಮಂಗಳೂರಿನ ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಬಡತನ ನಿರ್ಮೂಲನಾ ಕೋಶದ ಫಲಾನುಭವಿಗಳಿಗೆ ಅಟೋ ರಿಕ್ಷಾ ವಿತರಣೆ ಮಾಡಿದ ನಂತರ  ಅದೇ ಆಟೋ  ಓಡಿಸುವ ಮೂಲಕ ಗಮನಸೆಳೆದಿದ್ದಾರೆ.

ಬಡತನ ನಿರ್ಮೂಲನಾ ಕೋಶದ ವಿವಿಧ ಯೋಜನೆಗಳಡಿ ವಿಕಲಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮವು ನಿನ್ನೆ ಪುರಭವನದಲ್ಲಿ ನಡೆಯಿತು. 2016-17ನೇ ಸಾಲಿನ ಪಾಲಿಕೆಯ ಶೇ. 3ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮ, ಶೇ. 7.25 ಇತರೆ ಬಡಜನರ ಕಾರ್ಯಕ್ರಮ, ಶೇ. 24.10 ಎಸ್ಸಿ-ಎಸ್ಟಿ ಮೀಸಲು ನಿಧಿಯಡಿ 952 ಫಲಾನುಭವಿಗಳಿಗೆ 88.71 ಲಕ್ಷ ರೂ.ಗಳ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಶೇ.7.25 ಯೋಜನೆಯಡಿ 60 ಜನರಿಗೆ ಆಟೋ ರಿಕ್ಷಾ ಖರೀದಿಗಾಗಿ 30 ಲಕ್ಷ ರೂ. ಧನಸಹಾಯ ಮಂಜೂರಾಗಿದ್ದು, 37 ಫಲಾನುಭವಿಗಳಿಗೆ ಬ್ಯಾಂಕ್‌ಗಳಿಂದ ಸಾಲ ಮಂಜೂರು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1706 ಫಲಾನುಭವಿಗಳು 1.97 ಕೋಟಿ ರೂ. ಮೊತ್ತದ ಪ್ರಯೋಜನ ಪಡೆದುಕೊಂಡಿದ್ದಾರೆ.

ಈ ಸಂದರ್ಭ ವಿತರಣೆ ಮಾಡಿದ ಮೇಯರ್‌, ಅದೇ ಅಟೋ ರಿಕ್ಷಾದಲ್ಲಿ ತಮ್ಮ ಸಹೋದ್ಯೋಗಿಗಳಾದ ಶಶಿಧರ್ ಹೆಗ್ಡೆ, ಸಬಿತಾ ಮಿಸ್ಕಿತ್ ಅವರನ್ನು ಕೂರಿಸಿಕೊಂಡು ಪುರಭವನದ ಸುತ್ತ ರಿಕ್ಷಾ ಓಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English