ಮೇಯರ್ ಕವಿತಾ ಸನಿಲ್‌ ಮೇಲೆ ವಾಚ್‌ಮನ್ ಕುಟುಂಬದಿಂದ ಹಲ್ಲೆ ಆರೋಪ

Saturday, October 28th, 2017
mayor case

ಮಂಗಳೂರು: ಮೇಯರ್ ಕವಿತಾ ಸನಿಲ್,  ವಾಚ್‌ಮನ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದೇನೆ ಎಂಬುದು ಶುದ್ಧ ಸುಳ್ಳು. ಇದು ಬಿಜೆಪಿಯವರು ಮಾಡಿದ ಪಿತೂರಿ. ನಾನು ಮಾಡುವ ಅಭಿವೃದ್ಧಿ ಕೆಲಸವನ್ನು ಸಹಿಸಲಾಗದೆ ಇವರ ಮೂಲಕ ಸಂಚು ಮಾಡಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನವಿಡಿ ಫೋನ್ ಇನ್ ಕಾರ್ಯಕ್ರಮದಲ್ಲಿ ತೊಡಗಿದ್ದ ನನಗೆ ಮಧ್ಯಾಹ್ನದ ನಂತರವೇ ನನ್ನ ವಿರುದ್ಧ ಸುಳ್ಳು ವರದಿ ಬರುತ್ತಿರುವುದು ಬೇರೆಯವರ ಮೂಲಕ ಗೊತ್ತಾಗಿದೆ. ಅಲ್ಲಿಂದ ಮನೆಗೆ ಹೋಗಿ ಅಪಾರ್ಟ್‌ಮೆಂಟ್‌ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ, ಪಾಲಿಕೆಯಲ್ಲಿ ಪ್ರತಿಪಕ್ಷದ ಸದಸ್ಯರಾದ […]

ಆಟೋ ಓಡಿಸುವ ಮೂಲಕ ಗಮನಸೆಳೆದ ಮೇಯರ್ ಕವಿತಾ ಸನಿಲ್

Saturday, April 1st, 2017
Kavitha Sanil Auto driver

ಮಂಗಳೂರು: ಮಂಗಳೂರಿನ ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಬಡತನ ನಿರ್ಮೂಲನಾ ಕೋಶದ ಫಲಾನುಭವಿಗಳಿಗೆ ಅಟೋ ರಿಕ್ಷಾ ವಿತರಣೆ ಮಾಡಿದ ನಂತರ  ಅದೇ ಆಟೋ  ಓಡಿಸುವ ಮೂಲಕ ಗಮನಸೆಳೆದಿದ್ದಾರೆ. ಬಡತನ ನಿರ್ಮೂಲನಾ ಕೋಶದ ವಿವಿಧ ಯೋಜನೆಗಳಡಿ ವಿಕಲಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮವು ನಿನ್ನೆ ಪುರಭವನದಲ್ಲಿ ನಡೆಯಿತು. 2016-17ನೇ ಸಾಲಿನ ಪಾಲಿಕೆಯ ಶೇ. 3ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮ, ಶೇ. 7.25 ಇತರೆ ಬಡಜನರ ಕಾರ್ಯಕ್ರಮ, ಶೇ. 24.10 ಎಸ್ಸಿ-ಎಸ್ಟಿ ಮೀಸಲು ನಿಧಿಯಡಿ 952 ಫಲಾನುಭವಿಗಳಿಗೆ 88.71 […]