ಕಾಪು ಕಡಲ ಕಿನಾರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು

4:20 PM, Thursday, August 11th, 2011
Share
1 Star2 Stars3 Stars4 Stars5 Stars
(No Ratings Yet)
Loading...

 Abhijit Singh, Janakish / ಅಭಿಜಿತ್‌ ಸಿಂಗ್‌,  ಜಾನಾ ಕಿಶ್‌

ಮಂಗಳೂರು : ಮಣಿಪಾಲ ಎಂ.ಐ.ಟಿಯ ಇಬ್ಬರು ವಿದ್ಯಾರ್ಥಿಗಳು ಅಲೆಗಳ ಸೆಳೆತಕ್ಕೆ ಸಮುದ್ರಪಾಲದ ಘಟನೆ ಬುಧವಾರ ಸಂಜೆ ಕಾಪು ಕಡಲ ಕಿನಾರೆಯಲ್ಲಿ ಸಂಭವಿಸಿದೆ. ನಾಲ್ವರು ವಿದೇಶಿಯರು ಮತ್ತು ಓರ್ವ ಭಾರತೀಯ ಸೇರಿದಂತೆ ಐದು ಮಂದಿ ವಿದ್ಯಾರ್ಥಿಗಳೂ ಕಾಪು ಕಡಲ ಕಿನಾರೆಗೆ ಆಗಮಿಸಿದ್ದರು. ಲೈಟ್‌ ಹೌಸ್‌ನ ಮುಂಭಾಗದಲ್ಲಿ ಕಡಲು ಸಂಪೂರ್ಣವಾಗಿ ವಿಸ್ತರಿಸಿಕೊಂಡಿರುವುದರಿಂದ ಐವರು ಕೂಡಾ ಕಡಲಿಗೆ ಇಳಿದಿದ್ದರು. ಆದರೆ ಸಮುದ್ರದ ಅಲೆಗಳ ರಭಸಕ್ಕೆ ಅಂಜಿದ ಮೂವರು ದಡದಲ್ಲೇ ಕುಳಿತರೆ, ಅಭಿಜಿತ್‌ ಸಿಂಗ್‌ (18)ಮತ್ತು ಜಾನಾ ಕಿಶ್‌ (೨೧ ಈಜುವ ಉದ್ದೇಶದಿಂದ ಕಡಲಿಗಿಳಿದಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಅವರನ್ನು ಸಮುದ್ರದ ಅಲೆ ಸೆಳೆದುಕೊಂಡಿತು.

ಮೃತರಾದ ಅಭಿಜಿತ್‌ ಸಿಂಗ್‌ ಉತ್ತರ ಭಾರತ ಮೂಲದವನಾಗಿದ್ದು, ಜಾನಾ ಕಿಶ್‌ ಮೆಸಿಡೊನಿಯಾ ಮೂಲದವಳು. ಮಳೆಗಾಲವಾಗಿರುವುದರಿಂದ ಕಡಲುಬ್ಬರ ಹೆಚ್ಚಳವಾಗಿದ್ದು, ವಿದ್ಯಾರ್ಥಿಗಳು ನೀರಿಗಿಳಿಯುವಾಗಲೇ ಸ್ಥಳೀಯರು ನೀರಿನ ಸೆಳೆತದ ಕುರಿತಾಗಿ ಎಚ್ಚರಿಕೆಯನ್ನು ನೀಡಿದ್ದರು. ಅದನ್ನು ಕಡೆಗಣಿಸಿ ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈಗಾಗಲೇ ಹತ್ತಾರು ಮಂದಿ ಇಲ್ಲಿ ಸಮುದ್ರಕ್ಕೆ ಆಹಾರವಾಗಿದ್ದು, ಇವರಲ್ಲಿ ಬಹುತೇಕರು ಯುವಕರು ಎನ್ನುವುದು ಖೇದಕರವಾದ ವಿಷಯವಾಗಿದೆ. ಕಾಪು ಕಡಲ ಕಿನಾರೆಯಲ್ಲಿ ಜೀವರಕ್ಷಕರ ಮತ್ತು ಲೈಫ್‌ ಜಾಕೆಟ್‌ನ ಅವಶ್ಯಕತೆಯಿದೆ ಎಂದು ಹಲವಾರು ಬಾರಿ ಸ್ಥಳೀಯರು ಪ್ರವಾಸೋದ್ಯಮ ಇಲಾಖೆಗೆ ತಮ್ಮ ಬೇಡಿಕೆಯನ್ನಿರಿಸಿದ್ದರೂ ಇನ್ನೂ ದೊರಕಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ.

ಮಣಿಪಾಲ ಎಂ.ಐ.ಟಿಯ ಉನ್ನತಾದಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಪು ವೃತ್ತ ನಿರೀಕ್ಷಕ ಚೆಲುವರಾಜು ಸ್ಥಳಕ್ಕೆ ಭೇಟಿಯಿತ್ತಿದ್ದು ಕಾಪು ಠಾಣಾದಿಕಾರಿ ಮೋಹನ ಕೊಟ್ಟಾರಿ ಪ್ರಕರಣ ದಾಖಳಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

1 ಪ್ರತಿಕ್ರಿಯೆ - ಶೀರ್ಷಿಕೆ - ಕಾಪು ಕಡಲ ಕಿನಾರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು

  1. pshtovbp, xoavognxhzgy.com/

    MQjYqs gntigzjucxga, [url=http://jpsoaimpiqwg.com/]jpsoaimpiqwg[/url], [link=http://etqwfjsndjjy.com/]etqwfjsndjjy[/link], http://tamehsrftmyu.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English