ಶ್ರೀಲಂಕಾದಲ್ಲಿರುವ ಹಿಂದೂಗಳ ರಕ್ಷಣೆಗೆ ಮುಂದಾದ ಭಾರತ ಹಿಂದೂ ಸಂಘಟನೆಗಳು

6:49 PM, Thursday, June 15th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

sachidanandanಗೋವಾ : “ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಯುದ್ಧದಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಶೇ. 30 ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.15 ಕ್ಕೆ ಅಂದರೆ ಕೇವಲ 20 ಲಕ್ಷಕ್ಕೆ ಬಂದಿದೆ. ಮತಾಂತರವಾಗಲು ಹಿಂದೂಗಳ ಮೇಲೆ ಸತತವಾಗಿ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳಿಗೆ ನ್ಯಾಯ ನೀಡಲು ಭಾರತದಲ್ಲಿರುವ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮುಂದಾಳತ್ವ ವಹಿಸುವುದು ಅವಶ್ಯವಾಗಿದೆ”, ಎಂದು ಭಾವನಾತ್ಮಕ ಕರೆಯನ್ನು ಶ್ರೀಲಂಕಾದ 76 ವರ್ಷದ ಮರವನಪುಲಾವೂ ಸಚ್ಚಿದಾನಂದನ್ ಇವರು ನೀಡಿದರು. ಅವರು ಗೋವಾದ ರಾಮನಾಥಿ ದೇವಸ್ಥಾನದಲ್ಲಿ ನಡೆಯುತ್ತಿರುವ ಆರನೇ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ಎರಡನೇ ದಿನದಂದು ‘ವಿದೇಶಿ ಹಿಂದೂಗಳ ಸುರಕ್ಷೆ’ ಈ ವಿಷಯದ ಚರ್ಚೆಯ ಸಮಯದಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆಯ ಅಧ್ಯಕ್ಷ ರವೀಂದ್ರ ಘೋಷರವರು ಮಾತನಾಡುತ್ತಾ, “ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದ್ದು ಚಿಕ್ಕಪುಟ್ಟ ಕಾರಣಗಳಿಗಾಗಿ ಹಿಂದೂಗಳನ್ನು ಸೆರೆಮನೆಗೆ ತಳ್ಳುತ್ತಾರೆ. ಎಷ್ಟೇ ಅಡಚಣೆಯಾದರೂ ಕೊನೆಯ ಉಸಿರು ಇರುವ ತನಕ ಬಾಂಗ್ಲಾದೇಶದ ಹಿಂದೂಗಳಿಗಾಗಿ ಹೋರಾಡುವೆವು” ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English