ಮಂಗಳೂರು : ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಬಂಧಿಸಲು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸಚಿವ ರಮಾನಾಥ ರೈ ವರ್ಚಸ್ಸನ್ನು ಕುಗ್ಗಿಸಲು ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನ ಮಾಡುತ್ತಿವೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಮಿಥುನ್, ಕಾಂಗ್ರೆಸ್‌ಗೆ ಶಾಂತಿ ಮುಖ್ಯ, ಜಿಲ್ಲೆಯ ಅಬಿವೃದ್ಧಿ ಕಾಪಾಡುವ ದೃಷ್ಟಿಯಿಂದ ರಮಾನಾಥ ರೈ ನೀಡಿರುವ ಸೂಚನೆಯನ್ನೇ ಅಪರಾಧ ಎಂಬಂತೆ ಬಿಂಬಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸ್ಥಳೀಯ ಮಾಧ್ಯಮಕ್ಕೊಂದು, ರಾಜ್ಯದ ಮಾಧ್ಯಮಕ್ಕೊಂದು ಹೇಳಿಕೆ ಕೊಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರೆಂದೂ ಧಾರ್ಮಿಕ ಮುಖಂಡ ಆಗಲಾರರು. ಆದರೆ, ಸ್ವಯಂಘೋಷಿತವಾಗಿ ಹಾಗೆ ಹೇಳಿಕೊಳ್ಳುತ್ತಿದ್ದಾರೆ. ತನ್ನನ್ನು ವಿವೇಕಾನಂದರಿಗೆ ಹೋಲಿಸಿರುವುದು ಹಾಸ್ಯಾಸ್ಪದ. ಅವರ ದ್ವೇಷ ಕಾರುವ ಭಾಷಣಗಳನ್ನು ಯೂಟ್ಯೂಬ್‌ನಲ್ಲಿ ಕಾಣಬಹುದು ಎಂದು ಅವರು ಹೇಳಿದರು.
ವಿನಾಯಕ ಬಾಳಿಗಾ, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ ಮೊದಲಾವರನ್ನು ಹಿಂದೂಗಳೇ ಹತ್ಯೆ ಮಾಡಿದಾಗ ಏಕೆ ಮಾತನಾಡಿಲ್ಲ. ಚುನಾವಣೆ ಬಂದಾಗ ಓಟಿಗಾಗಿ ಗಲಭೆ ಎಬ್ಬಿಸುವುದು ಇವರ ಜಾಯಮಾನ. ಇದಕ್ಕೆ ಉಸ್ತುವಾರಿ ಸಚಿವರು ಅವಕಾಶ ಕೊಡುವುದಿಲ್ಲ ಎಂದು ಮಿಥುನ್ ರೈ ಹೇಳಿದರು.
ಕಾರ್ಪೊರೇಟರ್‌ಗಳಾದ ಅಬ್ದುಲ್ ರವೂಫ್, ಪ್ರವೀಣ್‌ಚಂದ್ರ ಆಳ್ವ, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡರಾದ ಗಿರೀಶ್ ಆಳ್ವ, ಕಿರಣ್, ಪ್ರಸಾದ್ ಮಲ್ಲಿ, ಪ್ರಶಾಂತ್, ರೂಪೇಶ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English