ಅಪಘಾತಕ್ಕೀಡಾಗಿದ್ದ ಮುಸ್ಲಿಂ ಕುಟುಂಬಕ್ಕೆ ನೇರವಾದ ಹಿಂದೂ ಯುವಕರು

8:50 PM, Sunday, July 9th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Hindu-youthsಮಂಗಳೂರು  : ಹಿಂದೂ ಜಾಗರಣ ವೇದಿಕೆಯ ಪುತ್ತೂರು ಘಟಕದ ಅದ್ಯಕ್ಷ ಸಚಿನ್ ಪಾಪೆಜಾಲ್ ಮತ್ತು ಸಂಘ ಪರಿವಾರದ ಸದಸ್ಯ ಹಾಗು ಅರಿಯಡ್ಕ ಗ್ರಾಮ ಪಂಚಾಯತ್ತು ಸದಸ್ಯ ಗಲಭೆಯ ನಡುವೆ ಅಪಘಾತಕ್ಕೆ ಒಳಗಾದ ಮುಸ್ಲಿಂ ಕುಟುಂಬಕ್ಕೆ ಮಂಗಳೂರು ಆಸ್ಪತ್ರೆ ತಲುಪಿಸಿದ ಮಾನವೀಯ ಘಟನೆ ಪ್ರಸಂಶೆಗೆ ಪಾತ್ರವಾಗಿದೆ .

ವಿದೇಶ ಪ್ರಯಾಣಕ್ಕೆ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಹೊರಟಿದ್ದ ಮಡಿಕೇರಿ ಮೂಲದ ಮುಸ್ಲಿಂ ಸಮುದಾಯದವರಿದ್ದ ಅಲ್ಟೊ ಕಾರು ಕೌಡಿಚ್ಚಾರು ಬಳಿ ಜುಲೈ 5 ರಂದು ಅಪಘಾತಕ್ಕೀಡಾಗುತ್ತದೆ. ಕಾರು ಮತ್ತು ಬಸ್ ನಡುವೆ ನಡೆದ ಈ ಅಪಘಾತದಲ್ಲಿ ಕಾರಿನ ಮುಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿ ಕಾರಿನಲ್ಲಿದ ನಾಲ್ಕು ಜನ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರು ತೀವ್ರವಾಗಿ ಗಾಯಗೊಳಗಾಗುತ್ತಾರೆ.

ಅಸ್ಪಕ್(36), ಅರ್ಷದ್(27), ಖಾಸಿಂ(38), ಹ್ಯಾರಿಸ್ (28) ಗಾಯಗೊಂಡವರು. ಇವರೆಲ್ಲಾ ಕೊಡಗು ಜಿಲ್ಲೆಯ ಮಡಿಕೇರಿಯವರು. ಇದರಲ್ಲಿ ಇಬ್ಬರಂತೂ ತೀವ್ರವಾಗಿ ಗಾಯಗೊಂಡು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದರು. ಗಂಭಿರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಸ್ಥಳಿಯರು(ಅವರ ಸಮುದಾಯದವರು ಸೇರಿ) ಹಿಂದೇಟು ಹಾಕುತ್ತಿದ್ದಾಗ ಅಪತ್ಭಾಂದವರಂತೆ ನೆರವಿಗೆ ಧಾವಿಸಿದವರು ಪುತ್ತೂರು ಹಿಂಜಾವೇ ಅದ್ಯಕ್ಷ ಸಚಿನ್ ಪಾಪೆಜಾಲ್. ಅದೇ ಮಾರ್ಗವಾಗಿ ಬರುತ್ತಿದ್ದ ಸಚಿನ್ ಅವರು ಅಪಘಾತಕ್ಕೊಳಗಾದ ಗಾಯಳುಗಳು ರಸ್ತೆಯಲ್ಲಿ ಒದ್ದಾಡುತ್ತಿರುವುದನ್ನು ನೋಡಿ ಮಾನವೀಯ ಅಂತ:ಕರಣದಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಲು ನೆರವಾದರು. ಅವರಿಗೆ ಈ ಕಾರ್ಯದಲ್ಲಿ ನೆರವಾದ್ದು ಮತ್ತೊಬ್ಬ ಸಂಘ ಪರಿವಾರದ ಸದಸ್ಯ ಅರಿಯಡ್ಕ ಗ್ರಾಮ ಪಂಚಾಯತ್ತು ಸದಸ್ಯ ಬಿಜೆಪಿ ಕಾರ್ಯಕರ್ತ ಸಂತೋಷ್ ಕುಟ್ಯಾಡಿ.

ಸಂಘ ಪರಿವಾರ ಹಾಗೂ ಮುಸ್ಲಿಂರ ಮದ್ಯೆ ಹಾವು ಮುಂಗುಸಿಯಂತಹ ಸಂಭಂದ ಎಂಬಂತೆ  ಪಕ್ಷದ ರಾಜಕಾರಣಿಗಳು ಬಿಂಬಿಸುತ್ತಿರುವಾಗ ಈ ರೀತಿಯ ವಿದ್ಯಮಾನಗಳು ಬಹುತೇಕರನ್ನು ಅಚ್ಚರಿಯಲ್ಲಿ ಮೂಡಿಸಿದೆ .

ನೋವಿನಲ್ಲಿ ಒದ್ದಾಡುತ್ತಿರುವಾಗ ನೆರವು ಆಗುವುದಕ್ಕೆ ಧರ್ಮ ಅಥಾವ ಇನ್ನ್ಯಾವುದೇ ವಿಷಯಗಳು ಅಡ್ಡಿ ಬರುವುದಿಲ್ಲ.ಅದು ಮಾನವೀಯ ನೆಲೆಯಲ್ಲಿ ಮಾಡಿರುವುವಂಥದು. ಅದನ್ನು ವೈಭವಿಕರಿಸುವ ಅಗತ್ಯವಿಲ್ಲ ಎಂದು  ಸಚಿನ್ ಪ್ರತಿಕ್ರಿಯಿಸಿದ್ದಾರೆ.

ಹಿಂದೂ ಸಂಘಟನೆಯ ಮುಖಂಡರುಗಳ ಈ‌ ಕೃತ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಆರು ತಿಂಗಳ ಹಿಂದೆ ಪುತ್ತೂರು ತಾಲೂಕಿನ ನರಿಮೂಗರು ಬಳಿ ಲಾರಿಯೊಂದು ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳಿಗೆ ಡಿಕ್ಕಿ ಹೊಡೆದಾಗ ಹಿಂದೂ ಮುಖಂಡ ಹಾಗು ಭಾಜಪ ನಾಯಕ ಅರುಣ್ ಕುಮಾರ್ ಪುತ್ತಿಲ ಅವರು ಆ ವಿದ್ಯಾರ್ಥಿನಿಯನ್ನು ತಮ್ಮ ವಾಹನದಲ್ಲಿ‌ ಆಸ್ಪತ್ರೆಗೆ ಸಾಗಿಸಿದ್ದರು .

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English