ಮಂಗಳೂರು : ಶರತ್ ಅಂತಿಮ ಯಾತ್ರೆಯ ಸಂದರ್ಭ ಕೇಸ್ ದಾಖಲಿಸಿದ ಹಿಂದು ಸಂಘಟನೆಗಳ ಪ್ರಮುಖರು ಮೇಲಿನ ಕೇಸ್‌ಗಳನ್ನು ತಕ್ಷಣ ಹಿಂಪಡೆಯಬೇಕು. ಶರತ್ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರವರು ಗುರುವಾರ ಶರತ್‌ರವರ ಮನೆಗೆ ಭೇಟಿ ನೀಡಲಿದ್ದಾರೆ. ಬಂಟ್ವಾಳ ಕ್ಷೇತ್ರ ಬಿಜೆಪಿ ಹಾಗೂ ಸಂಸದರ ಮೂಲಕ ಮೃತ ಶರತ್ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಧನ ನೀಡಲು ನಿರ್ಧರಿಸಿದ್ದೇವೆ ಎಂದು ಅವರು ಬುಧವಾರ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದ್ದಾರೆ.
1975 ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಈ ದೇಶದಲ್ಲಿ ತುರ್ತುಪರಿಸ್ಥಿತಿಯಲ್ಲಿ ಹೇರುವ ಮೂಲಕ ವಿರೋದಿಗಳನ್ನು ದಮನಿಸುವ ಕೆಲಸವನ್ನು ಮಾಡಿದರು.ರಾತ್ರೋತ್ರಿ ತನ್ನ ವಿರೋಧಿಗಳನ್ನು ಜೈಲಿಗೆ ಅಟ್ಟಲಾಯಿತು. ಈದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪರೋಕ್ಷವಾಗಿ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಿಸಿ ವಿರೋಧ ಪಕ್ಷವನ್ನು ದಮನಿಸುವ ಕೆಲಸವನ್ನು ಮಾಡುತ್ತಿದೆ.ಅದಕ್ಕಾಗಿ ಈ ಜಿಲ್ಲೆಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಅಧಿಕಾರಿಗಳನ್ನು ಬಳಸಿಕೊಂಡು ಅವರಿಗೆ ಒತ್ತಡ ಹೇರಿ ಸರ್ವಾಧಿಕಾರಿ ವರ್ತನೆಯ ಮೂಲಕ ತನ್ನ ಅಜಂಡವನ್ನು ಜಾರಿ ಮಾಡಲು ಯತ್ನಿಸುತ್ತಿದೆ.
ಮುಖ್ಯಮಂತ್ರಿಯವರ ಮತ್ತು ಉಸ್ತುವಾರಿ ಸಚಿವರ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಅಧಿಕಾರಿಗಳ ಮೇಲೆ ಹಸ್ತಕ್ಷೇಪ ಇವತ್ತಿನ ಪರಿಸ್ಥಿತಿಗೆ ಕಾರಣವಾಗಿದೆ. ಆಡಳಿತ ನಡೆಸುವವರ ಒತ್ತಡದಿಂದಾಗಿ ಇಲಾಖೆಗೆ ನಿಸ್ಪಕ್ಷವಾಗಿ ಕೆಲಸ ಮಾಡಲು ಅಸಾಧ್ಯವಾಗಿದೆ.
ಕಳೆದ ಒಂದೆರಡು ದಿನಗಳ ಮೊದಲು ಈ ಜಿಲ್ಲೆಯ ಉಸ್ತುವಾರಿ ಸಚಿವರು ಪ್ರತಿಕಾಗೋಷ್ಠಿ ನಡೆಸಿ ಕಾಂಗ್ರೇಸ್ ಪಕ್ಷದಲ್ಲಿ ಯಾರೊಬ್ಬರು ಕೊಲೆ ಆರೋಪಿಗಳು ಇಲ್ಲ ಅಂತಹ ಸಂಸ್ಕೃತಿ ನಮ್ಮದಲ್ಲ ಎಂದಿದ್ದರು. ಕರೋಪಾಡಿಯಲ್ಲಿ ಜಲೀಲ್ ಹತ್ಯಾ ಪ್ರಕರಣದಲ್ಲಿ ನೈಜ ಆರೋಪಿಗಳ ಬಂಧನವಾಗಿಲ್ಲ ತಕ್ಷ ನೈಜ ಆರೋಪಿಗಳನ್ನು ಬಂಧಿಸಬೇಕು ಎಂಬುದಾಗಿ ಓರ್ವ ಪಂಚಾಯತ್ ಸದಸ್ಯನ ಹೆಸರನ್ನು ಉಲ್ಲೇಖಿಸಿ ಮೃತನ ತಂದೆ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿರುವುದನು ಸಚಿವರು ಮರೆತಿರುವರೇ?
ಕಲ್ಲಡ್ಕದಲ್ಲಿ ಮೇ 26 ರಂದು ನಡೆದ ಪ್ರಕರಣದ ದಿನವೇ ರಾತ್ರಿ ಮೆಲ್ಕಾರ್‌ನಲ್ಲಿ ಪವನ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈವರೆಗೇ ಆರೋಪಿಗಳ ಬಂಧನವಾಗಿಲ್ಲ.
ಆಶ್ರಫ್ ಕೊಲೆ ಪ್ರಕರಣದಲ್ಲಿ ಹಿಂದು ಯುವಕರ ಬಂಧನವಾಗಿದೆ. ಆದರೆ ಅಲ್ಲೂ ನೈಜ ಆರೋಪಿಗಳನ್ನು ಬಂಧಿಸಿಲ್ಲ. ಸರಕಾರದ ಒತ್ತಾಯಕ್ಕೆ ಅಮಾಯಕರನ್ನು ಬಂಧಿಸಲಾಗಿದೆ.
ಜುಲೈ 7ರಂದು ಅಡ್ಯಾರ್‌ನಲ್ಲಿ ನಡೆದ ಸಾಜಿದ್ ಎಂಬ ಯುವಕನ ಹಲ್ಲೆ ಪ್ರಕರಣದಲ್ಲಿ ಮೂರು ಮಂದಿ ಹಿಂದು ಯುವಕರ ಬಂಧವಾಗಿದೆ.
ಜುಲೈ 9 ರಂದು ಮಂಗಳೂರು ತಾಲೂಕಿನ ಕುತ್ತಾರು ಎಂಬಲ್ಲಿ ಚಿರಂಜೀವಿ ಎಂಬ ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು ಈ ವರೆಗೆ ಯಾರೊಬ್ಬರ ಬಂಧನವಾಗಿಲ್ಲ.
ಶರತ್ ಹತ್ಯೆ ಪ್ರಕರಣದಲ್ಲಿ ಪ್ರಕರಣ ನಡೆದು 9 ದಿನ ಕಳೆದರೂ ಈವರೆಗೆ ಆರೋಪಿಗಳನ್ನು ಬಂಧಿಸಲು ಇಲಾಖೆಗೆ ಸಾಧ್ಯವಾಗಿಲ್ಲ.
ಮೇ27 ರಿಂದ ಪ್ರಾರಂಭದಲ್ಲಿ ಬಂಟ್ವಾಳ ಆ ಬಳಿಕ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದು ಜುಲೈ ೪ರಂದು ಮಂಗಳೂರು ತಾಲೂಕಿನ ಸೆಕ್ಷನ್ 144 ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಮಿತ ಹಿಂಪಡೆಯಲಾಯಿತು. ಒಂದು ವೇಳೆ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಅನಪೇಕ್ಷಿತ ಘಟನೆಗಳು ಸಂಭವಿಸಿಲ್ಲ ಎನ್ನುವ ಕಾರಣಕ್ಕಾಗಿ ಸೆಕ್ಷನ್ ಹಿಂಪಡೆದಿದ್ದಾರೆ ಸುಳ್ಯ, ಪುತ್ತೂರು,ಬೆಳ್ತಂಗಡಿ ತಾಲೂಕಿನಲ್ಲಿ ಮುಂದುವರಿಸಲು ಕಾರಣವೇನು ?
ಒಂದು ಕಡೆ ನಿರಂತರ ಸೆಕ್ಷನ್ 144 ಹಾಕುವ ಮೂಲಕ ಜನರನ್ನು ಭಯಬೀತರನ್ನಾಗಿಸಿದರೆ ಮತ್ತೊಂದು ಕಡೆ ಸಂಘಟನೆಯ ಪ್ರಮುಖರ ಮೇಲೆ ಗಂಭೀರ ಪ್ರಕರಣದ ಕೇಸ್ ದಾಖಲಿಸುವ ಮೂಲಕ ಕಾರ್ಯಕರ್ತರ ಧೃತಿಗೆಡಿಸುವ ಹುನ್ನಾರ ಸರಕಾರ ಮಾಡುತ್ತಿದೆ.
ಜುಲೈ ೮ರಂದು ಶರತ್ ಅಂತಿಮ ಯಾತ್ರೆಯ ಸಂದರ್ಭ ಶಾಂತಿಯುತವಾದ ಮೆರವಣಿಗೆ ಬಿ.ಸಿ.ರೋಡಿಗೆ ಬಂದಾಗ ಕಲ್ಲು ತೂರಾಟದ ಮೂಲಕ ಅಶಾಂತಿಗೆ ಕಾರಣವಾಯಿತು, ಕಲ್ಲು ತೂರಾಟದ ಬಗ್ಗೆ ವಿಡಿಯೋ ಕ್ಲಿಪಿಂಗ್‌ಗಳು ಸಾರ್ವಜನಿಕವಾಗಿ ಹರಿದಾಡುತ್ತಿದ್ದಾರು ಸಂಘಟನೆಗಳ ಪ್ರಮುಖರ ಮೇಲೆ ಕೇಸು ದಾಖಲಿಸಿದ್ದು ಯಾರ ಒತ್ತಡದಿಂದ. ಮೆರವಣಿಗೆ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಕೇಸ್ ದಾಖಲಿಸುವುದಾದರೇ ಅಶ್ರಫ್ ಅಂತಿಮ ಯಾತ್ರೆಯ ಸಂದರ್ಭ ಸೆಕ್ಷನ್ 144 ಉಲ್ಲಂಘನೆ ಮಾಡಿರುವ ಬಗ್ಗೆ ಸಂಘಟಕರ ಮೇಲೆ ಮತ್ತು ಅಸಂದರ್ಭದಲ್ಲಿ ಆದ ಗಲಭೆಗಳ ಬಗ್ಗೆ ಗಂಭಿರ ಪ್ರಕರಣ ದಾಖಲಿಸಲಾಗಿದಯೇ.
2000 ನೇ ಇಸವಿಯಲ್ಲಿ ಬಂಟ್ವಾಳದಲ್ಲಿ ನೆರದ ದಲಿತ ನಾಯಕ ಶಿವಪ್ಪ ಬಂಗೇರ ರವರ ಹತ್ಯೆಯಿಂದ ಹಿಡಿದು ಶರತ್ ರವರ ಹತ್ಯೆಯವರೆಗಿನ ಈ ಜಿಲ್ಲೆಯಲ್ಲಿ ನಡೆದ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವ ಮೂಲಕ ಪ್ರಕರಣದ ಹಿಂದಿರುವ ಶಕ್ತಿಗಳನ್ನು ದಮನಿಸಲು ಬಂಟ್ವಾಳ ಕ್ಷೇತ್ರ ಬಿಜೆಪಿ ಒತ್ತಾಯಿಸುವುದು.
ಸರಕಾರ ಮತ್ತು ಉಸ್ತುವಾರಿ ಸಚಿವರು ಪೋಲೀಸ್ ಇಲಾಖೆಯ ಮೇಲಿನ ಹಸ್ತಕ್ಷೇಪವನ್ನು ನಿಲ್ಲಿಸಿ ಅವರನ್ನು ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು.
Click this button or press Ctrl+G to toggle between Kannada and English